ವಿಭಿನ್ನ ಶೀರ್ಷಿಕೆಯ ‘ಪಿಸ್ತೂಲ್’ ಚಿತ್ರದ ಚಿತ್ರೀಕರಣ ಶೀಘ್ರದಲ್ಲೇ ಆರಂಭವಾಗಲಿದೆ. ಶೀರ್ಷಿಕೆಯಷ್ಟೇ ಕಥಾವಸ್ತುವೂ ವಿಭಿನ್ನವಾಗಿದೆ ಎಂದು ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸುತ್ತಿರುವ ಪ್ರಬಿಕ್ ಮೊಗವೀರ್ ತಿಳಿಸಿದ್ದಾರೆ.ಪ್ರಬಿಕ್ ಮೊಗವೀರ್ ಚಿತ್ರದಲ್ಲಿ ನಿರ್ಮಾಣದ ಜೊತೆಗೆ ಪ್ರಮುಖ ಪಾತ್ರದಲ್ಲೂ ಅಭಿನಯಿಸುತ್ತಿದ್ದಾರೆ. ಹೆಚ್ಚಿನ ಮಾಹಿತಿ ಬಹಿರಂಗಪಡಿಸದ ಅವರು, “ಇದು ಒಂದು ಗನ್ ಮತ್ತು ಆರು ಬುಲೆಟ್ಗಳ ಸುತ್ತ ಹೆಣೆಯಲಾದ ಸಸ್ಪೆನ್ಸ್ ಥ್ರಿಲ್ಲರ್” ಎಂದು ಕುತೂಹಲ ಮೂಡಿಸಿದ್ದಾರೆ.ಪ್ರಬಿಕ್ ಮೊಗವೀರ್ ಈ ಹಿಂದೆ ನಿರ್ದೇಶಿಸಿ ನಿರ್ಮಿಸಿದ್ದ ‘ಗಡಿಯಾರ’ ಚಿತ್ರ ಕನ್ನಡದ ಜೊತೆಗೆ ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿ ಭಾಷೆಗಳಲ್ಲಿ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿತ್ತು. ‘ಪಿಸ್ತೂಲ್’ ಚಿತ್ರದ ಮೂಲಕ ನಿರ್ದೇಶಕ ಹಾಗೂ ನಟನಾಗಿ ಮತ್ತೊಮ್ಮೆ ಪ್ರೇಕ್ಷಕರ ಮುಂದೆ ಬರುತ್ತಿದ್ದಾರೆ. ಅನುಭವಿ ಕಲಾವಿದರೊಂದಿಗೆ ಹೊಸ ಪ್ರತಿಭೆಗಳಿಗೂ ಅವಕಾಶ ನೀಡಲಾಗಿದೆ. ‘ಪಿಸ್ತೂಲ್’ One Gun. Six Bullets. . ಒಂದು ವಿಭಿನ್ನ ಕನ್ನಡ ಸಸ್ಪೆನ್ಸ್ ಥ್ರಿಲ್ಲರ್.



