ಬೆಂಗಳೂರು: ಬಿರು ಬೆಸಗೆಯಲ್ಲಿ ಬೆಂಗಳೂರು ನಗರ ಜನತೆ ಕುಡಿಯುವ ನೀರಿನ ಸಮಸ್ಯೆಯಿಂದ ತತ್ತರಿಸುತ್ತಿದ್ದು, ತೀವ್ರ ಸಂಕಷ್ಟದ ಸ್ಥಿತಿ ಎದುರಾಗಿದೆ.
ಬೆಂಗಳೂರು ನಗರದ ಜನತೆಯ ಬೇಡಿಕೆಗೆ ತಕ್ಕಂತೆ ಕುಡಿಯುವ ನೀರನ್ನು ಪೂರೈಸುವಂತೆ ಒತ್ತಾಯಿಸಿ ಭಾರತಿ ನಗರ ನಾಗರಿಕರ ವೇದಿಕೆಯಿಂದ ಆಯೋಜಿಸಿದ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಹಿಳೆಯರು, ನಟಿ ತಾರಾ ಅನುರಾಧ ನೇತೃತ್ವದಲ್ಲಿ ಖಾಲಿ ಕೊಡ ಪ್ರದರ್ಶನ ಮಾಡುವ ಮೂಲಕ ವಿನೂತನ ರೀತಿಯಲ್ಲಿ ಪ್ರತಿಭಟನೆ ಮಾಡಿದ್ದಾರೆ.
ಕಾಕ್ಸ್ ಟೌನ್ನ ಡಾ ರಾಜಕುಮಾರ್ ಪ್ರತಿಮೆ ಮುಂಭಾಗ ನಡೆದ ಪ್ರತಿಭಟನೆಯಲ್ಲಿ ನೂರಾರು ಮಹಿಳೆಯರು, ಸಮರ್ಪಕ ನೀರು ಪೂರೈಕೆಗಾಗಿ ಒತ್ತಾಯಿಸಿ ಘೋಷಣೆಗಳನ್ನು ಕೂಗಿದರು.