“ಎಲ್ಲವನ್ನೂ ಮಿತವಾಗಿ ಬಳಸಿ”ಎಂದು ಪ್ರಧಾನಿಯವರು ಸಲಹೆ ಕೊಡುವಷ್ಟು ಜನ ಅತಿಯಾಗಿ ಬೆಳೆದಿರೋದೆ ದುರಂತ.
ಇದನ್ನು ಎಲ್ಲಾ ಹಿಂದಿನ ಮಹಾತ್ಮರುಗಳೇ ಹೇಳಿಹೋಗಿದ್ದಾರೆ.ಅತಿಯಾದರೆ ಗತಿಗೇಡು. ಇಲ್ಲಿ ಪೆಟ್ರೋಲ್ ಡಿಸೇಲ್ ಮಾತಿಗೆ ಬದಲು ಅತಿಯಾಗಿ ಸಾಲ, ಬಂಡವಾಳ, ವ್ಯವಹಾರ, ಆಹಾರದ ಜೊತೆಗೆ ಪರಾವಲಂಬನೆಯು ಮಾನವನಿಗೆ ನರಕ ತೋರಿಸುತ್ತದೆಂದರೆ ಸರಿಯಾಗಬಹುದು. ಎಷ್ಟು ದಿನ ಸರ್ಕಾರದ ಹಂಗಿನಲ್ಲಿ ವಿದೇಶಿಗಳ ಹಂಗಿನಲ್ಲಿ ಬದುಕಬಹುದು? ಕೊನೆಗಾಲದಲ್ಲಿ ಯಾರೂ ಇರೋದಿಲ್ಲ ಸಾಲ ಮಾತ್ರ ಇರುತ್ತದಷ್ಟೆ.ಇಷ್ಟೇ ಸತ್ಯಹೊರಗೆ ತಿರುಗಿದಷ್ಟೂ ಅಜ್ಞಾನವೇ ಸುತ್ತಿಕೊಳ್ಳುತ್ತದೆ. ಅಜ್ಞಾನದಿಂದ ಆತ್ಮತೃಪ್ತಿ ಸಿಗೋದಿಲ್ಲ. ಆತ್ಮನಿರ್ಭರ ಒಳಗಿದ್ದೇ ಆಗಬೇಕೆಂದರ್ಥ.ವಿರೋಧಿಗಳಿಗೆ ಇದು ಅರ್ಥ ವಾಗದು. ಮಾನವ ತನಗೆ ತಾನೇ ಶತ್ರುವಾಗಿರುವಾಗ ಹೊರಗಿನ ಶತ್ರುಗಳು ಮಿತ್ರರಾಗುವರೆ?
ಅನಾವಶ್ಯಕ ವಿಚಾರಗಳು, ಶಿಕ್ಷಣ, ಸಾಲ, ಬಂಡವಾಳ,ವ್ಯವಹಾರ, ರಾಜಕೀಯವೇ ನಮಗೆ ದೊಡ್ಡ ಸಮಸ್ಯೆ ಯತ್ತ ನಡೆಸುತ್ತಾ ಮೂಲ ಧರ್ಮ ಕರ್ಮದಿಂದ ದೂರ ಮಾಡುತ್ತಾ ಇಲ್ಲಿಯವರೆಗೆ ತಂದು ನಿಲ್ಲಿಸಿ ನಮ್ಮವರೆ ನಮಗೆ ಶತ್ರುವಾಗಿ ಕಾಣುತ್ತಿರೋದಕ್ಕೆ ಕಾರಣ ಅಜ್ಞಾನ ವಾಗಿದೆ. ಎಷ್ಟು ಓಡಿದರೂ ಗುರಿ ಕಾಣುತ್ತಿಲ್ಲ. ಪೈಪೋಟಿ ಸ್ಪರ್ಧೆ ದ್ವೇಷ ಭಿನ್ನಾಭಿಪ್ರಾಯ ಅಂತರಗಳು ಬೆಳೆಯುತ್ತಿದೆಯೆ ಹೊರತು ಒಳಗಿದ್ದ ಒಗ್ಗಟ್ಟು ಏಕತೆ ಐಕ್ಯತೆ ಸಮಾನತೆಯಿಂದ ತಾನೂ ಉಳಿದು ನಮ್ಮವರನ್ನೂ ಉಳಿಸಿಕೊಂಡು ಸ್ವಾವಲಂಬನೆ ಸ್ವಾಭಿಮಾನ ಸತ್ಯ ಸರಳ ಜೀವನ ಕಾಣುತ್ತಿಲ್ಲ ಎಂದರೆ ನಮ್ಮ ದೃಷ್ಟಿ ಕೋನ ಬದಲಾಗಲು ಹೊರಗಿನ ರಾಜಕೀಯದ ಅಗತ್ಯವಿರಲಿಲ್ಲ.ರಾಜಯೋಗದ ಅಗತ್ಯವಿದೆ.ಶಿಕ್ಷಣವೇ ಯೋಗದಿಂದ ದೂರವಿದ್ದರೆ ಇದು ಕಷ್ಟವಿದೆ.ಭಾರತವನ್ನು ಸ್ಮಾರ್ಟ್ ಮಾಡೋದಕ್ಕೆ ಹಣ ಬೇಕು. ಇದಕ್ಕೆ ನಮ್ಮ ಸುಜ್ಞಾನ ಸದ್ಬಳಕೆಯಾಗಬೇಕು. ಅದಕ್ಕೆ ಪೂರಕ ಶಿಕ್ಷಣವಿರಬೇಕು. ಶಿಕ್ಷಣವೇ ಕೊಡದೆ ಆಳಿದವರು ರಾಜರಾದರು. ಇದು ಪ್ರಜಾಪ್ರಭುತ್ವ ವೋ ರಾಜಪ್ರಭುತ್ವವೋ ಇದರ ಅರಿವಿದ್ದರೆ ಜನ ಎಚ್ಚರವಾಗಬಹುದು. ಸಾಲ ಮಾಡೋದು ಸುಲಭ.ಆದರೆ ಅದರಿಂದ ಬಿಡುಗಡೆ ಪಡೆಯುವುದೇ ಕಷ್ಟ.ಪ್ರತಿಯೊಂದು ರಾಜಕಾರಣಿಗಳು ಮಾಡಲಾಗದು. ರಾಜಕೀಯದಿಂದ ಆಳಬಹುದು ಆದರೆ ಸಾಲ ತೀರಿಸಲಾಗದು.ಇಲ್ಲಿ ಆಧ್ಯಾತ್ಮ ದ ಋಣ ಭೌತಿಕದ ಸಾಲ ಬೆಳೆದಿರೋದೆ ಅತಿಯಾದ ಭೌತವಿಜ್ಞಾನದಿಂದ. ಆಧ್ಯಾತ್ಮ ವಿಜ್ಞಾನದಿಂದ ಸತ್ಯ ತಿಳಿದಾಗಲೇ ಆತ್ಮಜ್ಞಾನದಿಂದ ಆತ್ಮನಿರ್ಭರ ಭಾರತ ಸಾಧ್ಯ. ಯಾವುದೇ ಪಕ್ಷ ಬಂದರೂ ಪ್ರಜೆಗಳ ಅಜ್ಞಾನ ಅಳಿಸಲಾಗದು. ಕಾರಣ ಇದು ಒಳಗೇ ಬೆಳೆಸಿಕೊಂಡಿರುವ ನಕಾರಾತ್ಮಕ ಶಕ್ತಿಯಾಗಿದೆ.ಇದರ ಮೂಲ ಶಿಕ್ಷಣವಾಗಿದೆ. ತತ್ವದ ಬದಲು ತಂತ್ರ ಬೆಳೆದರೆ ಅಂತರ ಹೆಚ್ಚುವುದಲ್ಲವೆ? ಈ ಸಾಮಾನ್ಯ ಜ್ಞಾನ ಅರ್ಥ ಆದರೆ ಎಲ್ಲರೊಳಗೊಂದಾಗು ಮಂಕುತಿಮ್ಮ ಎನ್ನುವುದು ಅರ್ಥ ಆಗುತ್ತದೆ.ಪ್ರಜಾಪ್ರಭುತ್ವದ ಈ ದೇಶದಲ್ಲಿ ನಾನ್ಯರು? ನಾವ್ಯಾರು? ಎನ್ನುವ ಸಾಮಾನ್ಯ ಪ್ರಶ್ನೆಗೆ ಸರಿಯಾದ ಉತ್ತರ ಕೊಡಲು ಕಷ್ಟಪಡುವಾಗ ಬ್ರಹ್ಮಾಂಡವನ್ನು ಆಳಲು ಹೊರಟರೆ ಸಾಧ್ಯವೆ? ಹುಲುಮಾನವನಿಗೆ ಪರಮಾತ್ಮನ ಶಕ್ತಿಯ ಅರಿವಾಗೋದು ಸರಳ ಜೀವನದಿಂದ ಎನ್ನುವ ಸತ್ಯ ತೋರಿಸಿಕೊಟ್ಟ ಹಿಂದಿನ ಮಹಾತ್ಮರಿಗಿಂತ ದೊಡ್ಡವರಾಗಲು ಹೋದರೆ ದಡ್ಡತನ ಆವರಿಸಿ ಆಳುತ್ತದೆ.
– ಭಗವತಿ, ಬೆಂಗಳೂರು
ಉಳಿತಾಯ ಹೇಗಿರಬೇಕು?



