ರಾಜಕೀಯ ಜಿದ್ದು, ಕುರ್ಚಿ ಕಾದಾಟದ ನಡುವೆ ಸೆನ್ಸಾರ್ ಆಗದೇ ಉಳಿದಿದ್ದ ದಳಪತಿ ವಿಜಯ್ ಅಭಿನಯದ ಕೊನೆಯ ಚಿತ್ರ `ಜನನಾಯಗನ್ ಕೊನೆಗೂ ಸೆನ್ಸಾರ್ ಆಗಿದೆ. ಚಿತ್ರಕ್ಕೆ ಸೆನ್ಸಾರ್ ಮಂಡಳಿ ಎ ಸರ್ಟಿಫಿಕೇಟ್ ನೀಡಿದೆ. ಈ ಮೂಲಕ `ಜನನಾಯಗನ್’ ರಿಲೀಸ್ಗೆ ಸಿಬಿಎಫ್ಸಿ ಹಸಿರು ನಿಶಾನೆ ತೋರಿಸಿದೆ.ಕಳೆದ ತಮಿಳುನಾಡು ವಿಧಾಸಭೆ ಚುನಾವಣೆಗೂ ಮುನ್ನ ಚಿತ್ರ ತೆರೆ ಕಾಣಲು ಸಿದ್ಧತೆ ನಡೆಸಿ ಸೆನ್ಸಾರ್ ಮಂಡಳಿಯ ಕದ ತಟ್ಟಿತ್ತು. ಆದರೆ ಚಿತ್ರದ ಬಿಡುಗಡೆ ತಡೆಯಲು ಹಿಂದಿನ ಸಿಎಂ ಸ್ಟಾಲಿನ್ ಸರ್ಕಾರದ ಹಸ್ತಕ್ಷೇಪ ಇತ್ತು ಅನ್ನೋದು ಚರ್ಚೆಯಾಗಿದ್ದ ವಿಚಾರ. ಕಳೆದ ಜನವರಿಯಂದೇ ರಿಲೀಸ್ ಆಗಬೇಕಿದ್ದ `ಜನನಾಯಗನ್’ ಇದೀಗ ಸೆನ್ಸಾರ್ ಆಗಿದೆ. ಇದೇ ತಿಂಗಳು ಚಿತ್ರ ಬಿಡುಗಡೆ ಆಗುವ ಸಾಧ್ಯತೆ ಇದೆ. ಕೆಲವೇ ದಿನಗಳಲ್ಲಿ ಅಧಿಕೃತ ಘೋಷಣೆಯಾಗುವ ಸಾಧ್ಯತೆಯಿದೆ.ಮಾಜಿ ನಟ ವಿಜಯ್ ಈಗ ತಮಿಳುನಾಡಿನ ಹಾಲಿ ಸಿಎಂ. ಚುನಾವಣೆಗೂ ಪೂರ್ವದಲ್ಲಿ ಜನನಾಯಗನ್ ಮತದಾರರ ಮೇಲೆ ಪ್ರಭಾವ ಬೀಳಬಹುದು ಅನ್ನೋ ಕಾರಣಕ್ಕೆ ಆಗಿನ ಸರ್ಕಾರ ಚಿತ್ರಕ್ಕೆ ಸೆನ್ಸಾರ್ ತಡೆದಿತ್ತು. ಇದೀಗ ವಿಜಯ್ ಸಿಎಂ ಆದ್ಮೇಲೆ ರಿಲೀಸ್ ಆಗ್ತಿರೋ `ಜನನಾಯಗನ್’ ನಿಜಕ್ಕೂ ವಿಶೇಷವೇ ಸರಿ. ಇದರಿಂದ ವಿಜಯ್ ಫ್ಯಾನ್ಸ್ ಖುಷಿಯಾಗಿದ್ದು ಬಿಡುಗಡೆಯನ್ನೇ ಎದುರು ನೋಡುತ್ತಿದ್ದಾರೆ.
ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿ ಹಾಗೂ ಸ್ಟಾರ್ ನಟ ದಳಪತಿ ವಿಜಯ್ ನಟನೆಯ ಕೊನೆಯ ಚಿತ್ರ ಜನ ನಾಯಗನ್ ಸಿನಿಮಾ ಬಿಡುಗಡೆಗೂ ಮುನ್ನವೇ 1.2 ಕೋಟಿ ಜನರು ಸಿನಿಮಾ ವೀಕ್ಷಿಸಿದ್ದಾರೆ ಎಂದು ಸರ್ಕಾರ ಹೈಕೋರ್ಟ್ಗೆ ತಿಳಿಸಿದೆ.ಚಿತ್ರ ಸೋರಿಕೆ ಮಾಡಿದ ಇಬ್ಬರು ಪ್ರಮುಖ ಆರೋಪಿಗಳ ಜಾಮೀನು ಅರ್ಜಿಯನ್ನು ಚೆನ್ನೈ ಹೈಕೋರ್ಟ್ ಗುರುವಾರ ವಜಾಗೊಳಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ 4ನೇ ಆರೋಪಿ ಎಸ್. ರಜಿನಿ ಹಾಗೂ 11ನೇ ಆರೋಪಿ ಜಯಪ್ರಕಾಶ್ ಸಲ್ಲಿಸಿದ್ದ ಜಾಮೀನು ಅರ್ಜಿಗಳ ವಿಚಾರಣೆ ನಡೆಸಿದ ಹೈಕೋರ್ಟ್ ನ್ಯಾಯಮೂರ್ತಿ ಸಿ. ಕುಮಾರಪ್ಪನ್ ಅವರು, ಆರೋಪಿಗಳಿಗೆ ಜಾಮೀನು ನೀಡಲು ನಿರಾಕರಿಸಿದ್ದಾರೆ.ಜಾಮೀನು ಅರ್ಜಿ ವಿಚಾರಣೆ ವೇಳೆ ಸರ್ಕಾರಿ ಅಭಿಯೋಜಕರು ನ್ಯಾಯಾಲಯದ ಮುಂದೆ ಬೆಚ್ಚಿಬೀಳಿಸುವ ಅಂಶಗಳನ್ನು ತೆರೆದಿಟ್ಟಿದ್ದಾರೆ. ಸಿನಿಮಾ ಅಧಿಕೃತವಾಗಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುವ ಮೊದಲೇ, ಅಷ್ಟೇ ಏಕೆ ಸೆನ್ಸಾರ್ ಮಂಡಳಿಯ ಪ್ರಮಾಣಪತ್ರ ಸಿಗುವ ಮುನ್ನವೇ ಆನ್ಲೈನ್ನಲ್ಲಿ ಬರೋಬ್ಬರಿ 1.2 ಕೋಟಿ ಜನರು ಈ ಚಿತ್ರವನ್ನು ವೀಕ್ಷಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸೋರಿಕೆಯಾದ ಬೆನ್ನಲ್ಲೇ ಸಿನಿಮಾ ತಮಿಳು ರಾಕರ್ಸ್ ಸೇರಿದಂತೆ ಹಲವು ಕುಖ್ಯಾತ ಪೈರಸಿ ವೆಬ್ಸೈಟ್ಗಳಲ್ಲಿ ಹರಿದಾಡಿದೆ. ಚಿತ್ರವನ್ನು ಅಧಿಕೃತವಾಗಿ ಇಂಟರ್ನೆಟ್ನಲ್ಲಿ ಹರಡದಂತೆ ನಿರ್ಬಂಧಿಸುವಷ್ಟರಲ್ಲಿ ಕೋಟ್ಯಂತರ ಜನರು ಇದನ್ನು ಡೌನ್ಲೋಡ್ ಮಾಡಿಕೊಂಡಿದ್ದಾರೆ. ಸೆನ್ಸಾರ್ಗೂ ಮೊದಲೇ ಇಡೀ ಸಿನಿಮಾ ಸೋರಿಕೆಯಾಗಿರುವುದರಿಂದ ಚಿತ್ರತಂಡಕ್ಕೆ ಹಾಗೂ ನಿರ್ಮಾಣ ಸಂಸ್ಥೆಗೆ ಸರಿಪಡಿಸಲಾಗದ ಬೃಹತ್ ಮೊತ್ತದ ಆರ್ಥಿಕ ನಷ್ಟವನ್ನುಂಟು ಮಾಡಲಾಗಿದೆ ಎಂದು ವಾದಿಸಿದ್ದಾರೆ.
ಕೊನೆಗೂ ಸೆನ್ಸಾರ್ ಗುದ್ದಾಟದಲ್ಲಿ ಗೆದ್ದ `ಜನನಾಯಗನ್’; ಫ್ಯಾನ್ಸ್ ಖುಷ್ ಬಿಡುಗಡೆಗೂ ಮುನ್ನವೇ 1.2 ಕೋಟಿ ಜನರಿಂದ ವೀಕ್ಷಣೆ!



