ಕನಕಪುರ: ನಗರದ ಪ್ರತಿಷ್ಠಿತ ಶಾಲೆಗಳಲ್ಲಿ ಒಂದಾದ ಬ್ಲಾಸಮ್ ಶಾಲೆಯ ಸಂಸ್ಧಾಪಕ ದಿ.ಡಾ.ಬಿ.ಶಶಿಧರ್ ರವರ ಸ್ಮರಣಾರ್ಥ ಹದಿನೈದನೇ ರಸಪ್ರಶ್ನೆ ಸ್ಪರ್ಧೆಯಲ್ಲಿ ಅತಿಥೇಯ ನಗರದ ಶಾಲೆ ಬ್ಲಾಸಮ್ ಪ್ರಥಮ ಹಾಗೂ ಹಲಸೂರಿನ ಮಹಾಪ್ರಧಾ ಅಕಾಡಮಿ ಶಾಲೆಗೆ ದ್ವಿತೀಯ ಬಹುಮಾನ ಗಳಿಸಿತು.
ಡಾ.ಬಿ.ಶಶಿಧರ್ ಸ್ಮಾರಕ ಟ್ರಸ್ಟ್ ವತಿಯಿಂದ ನಗರದ ಅಂಬೇಡ್ಕರ್ ಭವನದಲ್ಲಿ ನಡೆದ ರಸಪ್ರಶ್ನ ಸ್ಪರ್ಧೆಯಲ್ಲಿ ಹದಿನಾರು ಪೌಡಶಾಲೆಯ ವಿದ್ಯಾರ್ಥಿಗಳು ಲಿಖಿತ ಪರೀಕ್ಷೆ ಬರೆದು ಅದರಲ್ಲಿ ಐದು ಶಾಲೆಯ ವಿದ್ಯಾರ್ಥಿಗಳು ಅಂತಿಮ ಸುತ್ತಿಗೆ ಆಯ್ಕಯಾದರು.
ಅಂತಿಮ ಹಂತದ ರಸಪ್ರಶ್ನ ಸ್ಪರ್ಧೆಯಲ್ಲಿ ಬ್ಲಾಸಮ್, ಹಲಸೂರಿನ ಮಹಾ ಪ್ರಧಾ ಅಕಾಡಮಿ ಪೌಡಶಾಲೆ, ಚಿಕ್ಕಮುದವಾಡಿಯ ಜಿ.ಹೆಚ್.ಎಸ್. ಪೌಡಶಾಲೆ, ನಗರದ ಆರ್.ಎಂ.ಪಿ.ಹೆಚ್.ಎಸ್ ಶಾಲೆ ಹಾಗೂ ಮದರ್ ತೇರೇಸಾ ಪೌಡಶಾಲೆ ಹಾಗೂ ಅಂತಿಮವಾಗಿ ಕಣದಲ್ಲಿ ಉಳಿದವು.
ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಬಿ.ರಾಮಪ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಎಲ್ಲಾ ಶಾಲೆಗಳು ಶಾಲಾ ವಾರ್ಷಿಕೋತ್ಸವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಬ್ಲಾಸಮ್ ಶಾಲೆ ವಿಭಿನ್ನವಾಗಿ ಮಕ್ಕಳ ಮೆದುಳಿಗೆ ಕಸರತ್ತು ಕೂಡುವ ರಸಪ್ರಶ್ನೆ ಕಾರ್ಯಕ್ರಮ ಆಯೋಜಿಸಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ಮೆಚ್ಚಿಗೆ ವ್ಯತ್ತಪಡಿಸಿದರು.
ಶಾಲೆಯ ಹಿರಿಯ ವಿದ್ಯಾರ್ಥಿನಿ ಡಾ.ಮಮತ ಆರ್. ಎಂ. ಸನ್ಮಾನ ಸ್ವೀಕರಿಸಿ ಮಾತನಾಡಿ ನಾನು ಸಮಾಜದಲ್ಲಿ ಈ ಮಟ್ಟಕ್ಕೆ ಬರಲು ಈ ಶಾಲೆಯಲ್ಲಿ ಕಲಿತ ವಿದ್ಯಯಿಂದ, ಇಲ್ಲಿನ ಅಡಿಪಾಯ ನನಗೆ ದಿಕ್ಸೂಚಿ ಯಾಗಿದೆಂದರು.ಶಾಲೆಯ ಆಡಳಿತ ಮಂಡಳಿಯ ಮುಖ್ಯ ವ್ಯವಸ್ಥಾಪಕ ಡಾ.ಎಸ್.ನಂದೀಶ್ ಮಾತನಾಡಿ ಪ್ರತಿ ವರ್ಷ ನಮ್ಮ ಶ್ರಮದ ಹಿಂದೆ ತಾಲ್ಲೂಕಿನ ಎಲ್ಲಾ ಪ್ರೌಢಶಾಲೆ ವಿದ್ಯಾರ್ಥಿ ಗಳಿಗೆ ರಸಪ್ರಶ್ನ ಸ್ಪರ್ಧೆ ತಲುಪಬೇಕು ಎಂಬುದಾಗಿದೆ.
ಬೆರಳ ತುದಿಯಲ್ಲಿ ಎಲ್ಲಾ ಮಾಹಿತಿ ದೂರೆತರು ಮಸ್ತಕಕ್ಕೆ ತಲುಪುವ ಕೆಲಸವೆಂದರೆ ಅದು ರಸಪ್ರಶ್ನೆ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಮೆದುಳಿಗೆ ಕೆಲಸ ನೀಡಿದಾಗ ಜ್ಞಾನ ವ್ಯದ್ದಿಸಾದ್ಯ ವೆಂದರು.ರಾಜ್ಯಮಟ್ಟದ ರಸಪ್ರಶ್ನೆ ತಜ್ಞ ಡಾ. ಸಿ.ವಿ. ಗೋಪಿ ಮಾದವ್ ರವರು ರಸಪ್ರಶ್ನ ಕಾರ್ಯಕ್ರಮ ನಡೆಸಿ ಕೂಟ್ಟರು,ವೇದಿಕೆಯಲ್ಲಿ ಬ್ಲಾಸಮ್ ಶಾಲೆ ಪ್ರಾಂಶುಪಾಲೆ ಗಂಗಾಂಬಿಕಾ, ಸ್ಮಾರಕ ಟ್ರಸ್ಟ್ ನ ರಾಜಣ್ಣ, ಕಾ.ಪ್ರಕಾಶ್ ಉಪಸ್ಥಿತರಿದ್ದರು.