ಬೆಂಗಳೂರು: ತಮಗೆ ನಿಗದಿತ ಖಾತೆ (ಬೆಂಗಳೂರು ನಗರಾಭಿವೃದ್ಧಿ) ಸಿಗದಿದ್ದಕ್ಕೆ ತೀವ್ರ ಅಸಮಾಧಾನಗೊಂಡಿದ್ದ ಹಿರಿಯ ಸಚಿವ ರಾಮಲಿಂಗಾರೆಡ್ಡಿ ಅವರು ಇಂದು ತಮ್ಮ ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಕೋರಮಂಗಲ ಕಚೇರಿಯಲ್ಲಿ ರಾಜೀನಾಮೆ ಸಿದ್ಧಪಡಿಸಿದ ಅವರು ತಾವು ರಾಜೀನಾಮೆ ಕೊಡಲು ಎಲ್ಲೂ ಹೋಗಲ್ಲ. ತಮ್ಮ ಆಪ್ತರಾದ ಮಾಜಿ ಮೇಯರ್ ಮಂಜುನಾಥರೆಡ್ಡಿ ಅಥವಾ ಮುಖ್ಯಮಂತ್ರಿ ಅವರ ಪ್ರಧಾನ ಕಾರ್ಯದರ್ಶಿ ತುಷಾರ್ ಗಿರಿನಾಥ್ ಅವರಿಗೆ ಪತ್ರ ತಲುಪಿಸುವುದಾಗಿ ತಿಳಿಸಿದ್ದಾರೆ. ಈ ಹಿಂದೆ 2023ರಲ್ಲಿ ಮಂತ್ರಿ ಮಂಡಲ ರಚನೆಯಾದಾಗ ನನಗೆ ಬೆಂಗಳೂರು ನಗರಾಭಿವೃದ್ಧಿ ಖಾತೆ ನೀಡುವುದಾಗಿ ತಿಳಿಸಲಾಗಿತ್ತು. ಈಗಲು ಅದೇ ರೀತಿ ಹೇಳಲಾಗಿತ್ತು. ಆದರೆ ಎರಡು ಬಾರಿಯೂ ಆ ಖಾತೆಯನ್ನು ಬಿಟ್ಟು ಇದೀಗ ಬೇರೆ ಖಾತೆ ನೀಡಲಾಗಿದೆ. ಜಲಸಂಪನ್ಮೂಲ ಖಾತೆ ನನಗೆ ನೀಡಿದ್ದು, ಅದರ ಬಗ್ಗೆ ನನಗೆ ಅನುಭವವಿಲ್ಲ. ನನ್ನ ಆತ್ಮಸಾಕ್ಷಿಗೆ ವಿರುದ್ದವಾಗಿ ಕೆಲಸ ಮಾಡಲಾರೆ ನಾನು ಶಾಸಕನಾಗಿಯೇ ಕೆಲಸ ಮಾಡುತ್ತೇನೆ ಎಂದು ತಿಳಿಸಿದ್ದಾರೆ. 1973ರಿಂದ ಇದುವರೆಗೂ 53 ವರ್ಷಗಳ ಕಾಲ ಪಕ್ಷದಲ್ಲಿದ್ದೇನೆ. ಹಲವು ಬಾರಿ ಶಾಸಕನಾಗಿ ಮಾಜಿ ಮುಖ್ಯಮಂತ್ರಿ ವೀರಪ್ಪಮೋಯ್ಲಿ ಸೇರಿದಂತೆ ಹಲವು ಮಂತ್ರಿಗಳ ಸಂಪುಟದಲ್ಲಿ ಸಚಿವನಾಗಿ ಕೆಲಸ ಮಾಡಿದ್ದೇನೆ. ಸಾಕಷ್ಟು ಖಾತೆಗಳನ್ನು ನಿಭಾಯಿಸಿದ್ದೇನೆ. ಎಂದು ಯಾರನ್ನೂ ಸಚಿವನನ್ನಾಗಿ ಮಾಡಿ ಎಂದು ಕೇಳಿಲ್ಲ. ಈಗಲೂ ಸಹ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ಮಲ್ಲಿಕಾರ್ಜುನ ಖರ್ಗೆ, ಹೈಕಮಾಂಡ್ನನ್ನು ಮಂತ್ರಿಯನ್ನಾಗಿ ಮಾಡಿ ಕೇಳಿರಲಿಲ್ಲ. ಮಂತ್ರಿಯನ್ನಾಗಿ ಮಾಡಿದ್ದಾರೆ. ಅದಕ್ಕೆ ಧನ್ಯವಾದಗಳು.



