ಮೇಲುಕೋಟೆ: ಭಗವದ್ರಾಮಾನುಜಾಚಾರ್ಯರು ಭಾಷೆಯ ಗಡಿಮೀರಿ ಭಾರತಾದ್ಯಂತ ಸಮಾನತೆಯ ಸಾಮಾಜಿಕ ಸಾಮರಸ್ಯ ಸಾರಿದ ಭಾರತದ ಶ್ರೇಷ್ಟ ಸಂತರು ಎಂದು ಮೇಲುಕೋಟೆಯ ಯತಿರಾಜದಾಸರ್ ಗುರುಪರಂಪರೆಯ ಸ್ಥಾನೀಕಂ ಅನುರಾದ ತಿಳಿಸಿದರು. ಅವರು ವಿಶೇಷ ಆಹ್ವಾನದ ಮೇಲೆ ತಮಿಳುನಾಡಿನ ಆಚಾರ್ಯರ ಅವತಾರ ಸ್ಥಳ ಶ್ರೀಪೆರಂಬೂದೂರಿನ ಕಲಿಯನ್ ರಾಮಾನುಜ ಕೂಟದಲ್ಲಿ ಎರಡುದಿನಗಳಕಾಲ ರಾಮಾನುಜರು-ಮೇಲುಕೋಟೆ ಕುರಿತ ಉಪನ್ಯಾಸ ನೀಡಿ ಮಾತನಾಡಿದರು.ರಾಮಾನುಜಾಚಾರ್ಯರು 11ನೇ ಶತಮಾನದ ಜಾತಿವ್ಯವಸ್ಥೆಯ ಬಿಗಿಯಾದ ಕಟ್ಟುಪಾಡುಗಳ ನಡುವೆಯೂ sಸಮಾಜದಲ್ಲಿ ಸಾಮಾಜಿಕ ಸಾಮರಸ್ಯವನ್ನು ಮೂಡಿಸಲು ದೇವಾಲಯಗಳಲ್ಲಿ ಎಲ್ಲರಿಗೂ ಸಮಾನ ಅವಕಾಶ ನೀಡಿ ಶ್ರಮಿಸಿದರು. ಪ್ರಮುಖವಾಗಿ ಹರಿಜನರಿಗೆ ತಿರುಕುಲತ್ತಾರ್ ಎಂಬ ಗೌರವನೀಡಿ ಮೇಲುಕೋಟೆ ಚೆಲುವನಾರಾಯಣಸ್ವಾಮಿ ದೇವಾಲಯಕ್ಕೆ ಪ್ರಪ್ರಥಮವಾಗಿ ಮುಕ್ತಪ್ರವೇಶ ದೊರಕಿಸಿಕೊಟ್ಟರು. ರಾಮಾನುಜರು ಒಂದು ರಾಜ್ಯಕ್ಕೆ ಸೀಮಿತವಾಗದೆ ಭಾರತದಾದ್ಯಂತ ಸಂಚರಿಸಿಭಕ್ತಿಸಿದ್ದಾAತದ ತಳಹದಿಯಲ್ಲಿ ಸಮಾನತೆಯನ್ನು ಪ್ರತಿಪಾದಿಸಿದರು. ಪ್ರಮುಖ ದೇವಾಲಯಗಳಲ್ಲಿ ಉತ್ಸವ ಮಹೋತ್ಸವ ಬ್ರಹ್ಮೋತ್ಸವಗಳನ್ನು ಆಗಮೋಕ್ತವಾಗಿ ಅನುಷ್ಠಾನಗೊಳಿಸಿ ಎಲ್ಲ ಸಮುದಾಯದವರೂ ಪಾಲ್ಗೊಳ್ಳುವಂತೆ ಮಾಡಿ ದೇವಾಲಯಗಳನ್ನು ಸಮಾಜಕೇಂದ್ರಿತವಾಗಿ ರೂಪಿಸಿದರು. ಭಾರತದ ಸಾವಿರಾರು ದೇವಾಲಯಗಳಲ್ಲಿ ಇಂದಿಗೂ ಮಹತ್ವವನ್ನು ಕಾಣಬಹುದಾಗಿದೆ.ರಾಮಾನುಜಾಚಾರ್ಯರು ತಮಿಳುನಾಡಿನಲ್ಲಿ ಜನಿಸಿದರೂ ಕರ್ನಾಟಕದ ಮೇಲುಕೋಟೆಯಲ್ಲಿ 14ವರ್ಷಗಳ ಕಾಲವಾಸ್ತವ್ಯಮಾಡಿ ತಮ್ಮ ಕರ್ಮಭೂಮಿಯಾಗಿಸಿಕೊಂಡು ಕರುನಾಡಿಗೂ ಅಪಾರಕೊಡುಗೆ ನೀಡಿದ್ದಾರೆ 11ನೇಶತಮಾನದಲ್ಲೇ ತಮಿಳುನಾಡು-ಕರ್ನಾಟಕದ ಸಂಸ್ಕೃತಿ ಬೆರೆಯುವಂತೆ ಮಾಡಿ ಭಾರತದ ಸಾಂಸ್ಕೃತಿಕ ಭವ್ಯತೆಯನ್ನು ಎತ್ತಿ ಹಿಡಿದಿದ್ದಾರೆ. ಜಾತಿಬೇಧವಿಲ್ಲದೆ ರಾಮಾನುಜರ ತತ್ವಸಿದ್ಧಾಂತ ಅಳವಡಿಸಿಕೊಂಡವರು ಭಾರತಾ ದ್ಯಂತ ರಾಮಾನುಜಕೂಟಂಗಳನ್ನು ಸ್ಥಾಪಿಸಿ ಪರಂಪರೆಯಕೊAಡಿಯಾಗಿರುವುದನ್ನು ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಣಬಹುದು. ಶ್ರೀವೈಷ್ಣವ ಎಂದರೆ ಅದುಜಾತಿಯಲ್ಲ ರಾಮಾನುಜರ ತತ್ವಸಿದ್ದಾಂತಗಳನ್ನು ಅನುಸಿರುವ ಭಕ್ತಸಮೂಹ ಎಂಬದನ್ನು ಅರಿಯಬೇಕು ಭಗವಂತನ ದೃಷ್ಟಿಯಲ್ಲಿ ಶ್ರೀವೈಷ್ಣವರೆಲ್ಲರೂ ಸಮಾನರು ಯಾರೂ ಮೇಲಲ್ಲ ಅಥವ ಕೀಳಲ್ಲ ಎಂಬುದನ್ನು ತಿಳಿದುಕೊಳ್ಳಬೇಕು ಕೆಲವು ರಾಮಾನುಜಕೂಟಂಗಳು ಮೇಲುಕೋಟೆಯಲ್ಲಿ ಛತ್ರಗಳನ್ನು ನಿರ್ಮಿಸಿ ವೈರಮುಡಿ ಉತ್ಸವದ ವೇಳೆ ಮಂಟಪೋತ್ಸವ ನಡೆಸುವ ಕಾರಣ ಚೆಲುವನಾರಾಯಣಸ್ವಾಮಿಯೇ ನಿಮ್ಮ ಬಳಿಗೆ ಬಂದು ಪೂಜೆ ಸ್ವೀಕರಿಸುತ್ತಾನೆ ಇಂತಹ ಸಂಪ್ರದಾಯ ರಾಮಾನುಜರ ಭಕ್ತಿಮಾರ್ಗದ ಸಂಪ್ರದಾಯದಲ್ಲಿ ಮಾತ್ರ ಕಾಣಲು ಸಾಧ್ಯ ಈ ಪರಂಪರೆಯನ್ನು ನೀವೆಲ್ಲಾ ಮುಂದುವರೆಸಬೇಕು ಅದಕ್ಕಾಗಿಯೇ ರಾಮಾನುಜರು ನಿಮ್ಮನ್ನು ಭಾಗವತರು ಎಂದು ಕರೆದು ಗೌರವಿಸಿದ್ದಾರೆ ಎಂದರು.
ವಿವಿಧ ಜನಾಂಗಗಳನ್ನೊಳಗೊAಡ ಸಾವಿರಾರು ಮಂದಿ ಒಗ್ಗೂಡಿ ಕಲಿಯನ್ ರಾಮಾನುಜಕೂಟಂ ಸ್ಥಾಪಿಸಿ ಶತಶತಮಾನಗಳಿಂದ ತಮಿಳುನಾಡಿನ ಶ್ರೀಪೆರಂಬದೂರಿನ ರಾಮಾನುಜರ ತಿರುನಕ್ಷತ್ರ ಮಹೋತ್ಸವ ಮೇಲುಕೋಟೆಯ ವೈರಮುಡಿ, ತಿರುಪತಿ, ಕಂಚಿ ಸೇರಿದಂತೆ ವಿವಿಧ ದಿವ್ಯಕ್ಷೇತ್ರಗಳಲ್ಲಿ ನಡೆಯುವ ಮಹೋತ್ಸವಗಳಲ್ಲಿ ಹತ್ತುದಿನಗಳಕಾಲ ತಿರುವಾಯಿಮೊಳಿಗೋಷ್ಠಿ, ಉಪನ್ಯಾಸ ಎರಡೂ ವೇಳೆ ಸಮಾರಾಧನೆ(ಅನ್ನಸಂತರ್ಪಣೆ), ಉತ್ಸವಗಳಿಗೆ ಸಹಕಾರ ನೀಡುತ್ತಾ ರಾಮಾನುಜಕೂಟಂ ಮೂಲಕ ಸೇವೆಮಾಡುತ್ತಾ ಬಂದಿರುವ ಪರಂಪರೆ ಮುಂದುವರೆಯಲಿ ಎಂದು ಸ್ಥಾನೀಕಂ ಅನುರಾಧ ಹಾರೈಸಿದರು. ಕಲಿಯನ್ ರಾಮಾನುಜಕೂಟಂನ ಮುಖಂಡ ಭಾಗವತ ದೇವರಾಜನ್ ಮಾತನಾಡಿ ರಾಮಾನುಜರು ಹಾಕಿಕೊಟ್ಟ ಭಕ್ತಿಸಿದ್ದಾಂತದಲ್ಲಿ ಸಾಗುತ್ತಾ ಜನಸಮೂಹದ ಸೇವೆಯೊಂದಿಗೆ ಭಗವಂತನನ್ನು ಕಾಣುತ್ತಿದ್ದೇವೆ. ಮೇಲುಕೋಟೆ ಯತಿರಾಜದಾಸರ್ ಗುರುಪರಂಪರೆಯ ಸದಸ್ಯರು ಭಾಗವಹಿಸಿ ಉಪನ್ಯಾಸನೀಡಿ ಮೇಲುಕೋಟೆಯ ಮಹತ್ವಗಳ ಮಾಹಿತಿ ನೀಡಿದ್ದಕ್ಕೆ ಅಭಾರಿಯಾಗಿದ್ದೇವೆ ಎಂದರಲ್ಲದೆ ರಾಮಾನುಜಕೂಟಂನಿಂದ ವಿಶೇಷವಾಗಿ ಅಭಿನಂದಿಸಿ ವಿವಿಧ ದಿವ್ಯದೇಶಗಳಲ್ಲೂ ಉಪನ್ಯಾಸನಡೆಸಿಕೊಡಲು ಆಹ್ವಾನಿಸಿದರು. ಈ ವೇಳೆ ಯಶೋದಪ್ರಸಾದ್, ಸೌಮ್ಯಸಂತಾನA, ಕಲಿಯನ್ರಾಮಾನುಜಕೂಟಂನ ಆಂಡಾಳ್ ಗೋಷ್ಠಿ ಮತ್ತು ಭಾಗವತರು ಭಾಗವಹಿಸಿದ್ದರು.
`ರಾಮಾನುಜರು ಭಾರತದಾದ್ಯಂತ ಸಂಚರಿಸಿ ಭಕ್ತಿ, ಸಿದ್ಧಾಂತದ ತಳಹದಿಯಲ್ಲಿ ಸಮಾನತೆ ಪ್ರತಿಪಾದಿಸಿದರು’



