ಜೋಹಾನ್ಸ್ಬರ್ಗ್: ಸೂರ್ಯಕುಮಾರ್ ಯಾದವ್ ಅವರ ಅಬ್ಬರದ ಶತಕ ಮತ್ತು ಕುಲದೀಪ್ ಯಾದವ್ ಅವರ ಸ್ಪಿನ್ ದಾಳಿಯ ನೆರವಿನಿಂದ ಭಾರತ ತಂಡವು ಗುರುವಾರ ಇಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 106 ರನ್ಗಳಿಂದ ಜಯ ಸಾಧಿಸಿತು.
ಮೂರು ಪಂದ್ಯಗಳ ಸರಣಿಯಲ್ಲಿ ಉಭಯ ತಂಡಗಳು 1-1ರಿಂದ ಸಮಬಲ ಸಾಧಿಸಿದವು.ಸರಣಿಯ ಮೊದಲ ಪಂದ್ಯವು ಮಳೆಗಾಹುತಿಯಾಗಿದ್ದರೆ, ಎರಡನೇ ಪಂದ್ಯದಲ್ಲಿ ಆತಿಥೇಯ ತಂಡವು 5 ವಿಕೆಟ್ಗಳಿಂದ ಗೆದ್ದಿತ್ತು.ನ್ಯೂ ವಾಂಡರರ್ಸ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ದಕ್ಷಿಣ ಆಫ್ರಿಕಾ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.
ಮೊದಲು ಬ್ಯಾಟಿಂಗ್ ಮಾಡಿದ ಭಾರತ ಸೂರ್ಯಕುಮಾರ್ (100; 56ಎ, 4×7, 6×8) ಮತ್ತು ಯಶಸ್ವಿ ಜೈಸ್ವಾಲ್ (60; 41ಎ;4×6, 6×3) ಶತಕದ ಬಲದಿಂದ 20 ಓವರ್ಗಳಲ್ಲಿ 7 ವಿಕೆಟ್ಗಳಿಗೆ 201 ರನ್ ಗಳಿಸಿತು.
ಸವಾಲಿನ ರನ್ ಬೆನ್ನತ್ತಿದ ದಕ್ಷಿಣ ಆಫ್ರಿಕಾ ತಂಡವು ಭಾರತದ ಬೌಲರ್ಗಳ ಸ್ಪೀನ್ ದಾಳಿಯೆದುರು ತತ್ತರಿಸಿತು. ಹೀಗಾಗಿ, 13.5 ಓವರ್ಗಳಲ್ಲಿ 95 ರನ್ಗೆ ಆಲೌಟ್ ಆಯಿತು. ಕುಲದೀಪ್ 17ಕ್ಕೆ ಐದು ವಿಕೆಟ್ ಪಡೆದು ಮಿಂಚಿದರು. ರವೀಂದ್ರ ಜಡೇಜಾ ಎರಡು ವಿಕೆಟ್ ಪಡೆದರು.