ಬಂಗಾರಪೇಟೆ: ಸರ್ಕಾರ ರಾಜ್ಯದ್ಯಂತ ಜನಗಣತಿ ನಡೆಸುವಂತೆ ಸೂಚಿಸಿತು ಇದಕ್ಕೆ ಅನುಗುಣವಾಗಿ ಜಿಲ್ಲಾದ್ಯಂತ ಜನಗಣತಿ ಕಾರ್ಯ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿರುವುದು ಅಧಿಕಾರಿಗಳ ಬದ್ಧತೆಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಜಿಲ್ಲಾಧಿಕಾರಿ ರವಿಕುಮಾರ್ ಹೇಳಿದರು.
ನಗರದಲ್ಲಿ ಪತ್ರಿಕಾ ಹೇಳಿಕೆ ನೀಡಿದ ಅವರು, ರಾಜ್ಯದಲ್ಲಿ ಜನಗಣತಿ ಕಾರ್ಯ ಏಪ್ರಿಲ್ 16 ರಿಂದ ಪ್ರಾರಂಭವಾಗಿದ್ದು ಎಪ್ರಿಲ್ 18 ವರೆಗೆ ಮೂರು ದಿನಗಳ ಕಾಲ ಮನೆಗಳಿಗೆ ಕ್ರಮಸಂಖ್ಯೆ ನೀಡಲಾಗಿದೆ ತದನಂತರ ಮನೆ ಮನೆಗೆ ನಮ್ಮ ಸಿಬ್ಬಂದಿಗಳು ಹೋಗಿ ಜನಗಣತಿ ನಡೆಸುತ್ತಿದ್ದಾರೆ. ಗಣಿತಿ ಕಾರ್ಯ ಹೇಗೆ ನಡೆಯುತ್ತಿದೆ ಎಂಬುವುದಕ್ಕೆ ಸಂಬAಧಿಸಿದAತೆ ತಾಲೂಕಿಗೆ ಪರಿಶೀಲನೆ ನಡೆಸಲು ವಿವಿಧ ಸ್ಥಳಗಳಿಗೆ ಭೇಟಿ ನೀಡಲಾಗಿದ್ದು ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗ ಅತ್ಯಂತ ಕ್ರಿಯಾಶೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ, ಇದಕ್ಕೆ ಪೂರಕವೆಂಬAತೆ ಸಾರ್ವಜನಿಕರು ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು ಅಧಿಕಾರಗಳು ಕೇಳುವ 39 ಪ್ರಶ್ನೆಗಳಿಗೆ ಉತ್ತರ ನೀಡುತ್ತಿದ್ದಾರೆ ಈ ನಿಟ್ಟಿನಲ್ಲಿ ಗಣತಿ ಕಾರ್ಯ ಪ್ರಾಯಶಃ ಯಶಸ್ಸಿನ ಹಾದಿಯಲ್ಲಿ ಸಾಗುತ್ತಿದೆ ಎಂದರು.
ಮಧ್ಯಪ್ರಾಚ್ಙ÷್ಯ ದೇಶಗಳ ಯುದ್ಧದಿಂದ ರಾಸಾಯನಿಕ ಗೊಬ್ಬರದ ಮೇಲೆ ಮಾರಕ ಪ್ರಭಾವ ಉಂಟಾದ ಕಾರಣ ಪರ್ಯಾಯವಾಗಿ ಸಾಂಪ್ರದಾಯಿಕ ಜೈವಿಕ ಗೊಬ್ಬರಗಳನ್ನು ಬಳಕೆ ಮಾಡಬೇಕು ಈ ನಿಟ್ಟಿನಲ್ಲಿ ಕುದ್ದು ನಾನೇ ಅಂಗಡಿ ಮಳಿಗೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ, ಕಾಳ ಸಂತೆಯಲ್ಲಿ ಗೊಬ್ಬರ ಮಾರಾಟ ನಡೆಯಬಾರದು ಹಾಗೂ ಅವೈಜ್ಞಾನಿಕವಾಗಿ ರೈತರು ಯೂರಿಯಾ ಬಳಕೆ ಮಾಡದೆ ಜೈವಿಕ ಗೊಬ್ಬರ ಹಾಗೂ ಮಾನ್ಯತೆ ಪಡೆದ ನ್ಯಾನೋ ಗೊಬ್ಬರ ಬಳಕೆ ಮಾಡುವಂತೆ ಸಲಹೆ ನೀಡಲಾಗಿದೆ ಎಂದರು.
ಪ್ರಸಕ್ತ ವರ್ಷದಲ್ಲಿ ಬಿಸಲಿನ ತಾಪಮಾನ ಗಣನಿಯ ಪ್ರಮಾಣ ಏರಿಕೆಯಾಗಿದ್ದು ನೀರಿನ ಅಭಾವ ಉಂಟಾಗುವ ಸಾಧ್ಯತೆಗಳಿವೆ, ಈ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತ ಬದ್ಧವಾಗಿದೆ, ಹುಲಿಬೆಲೆ ಗ್ರಾಮ ಪಂಚಾಯಿತಿಯಲ್ಲಿ ನೀರಿನ ಸಮಸ್ಯೆ ಇರುವ ಕಾರಣ ಪಕ್ಕದ ಚಿಕ್ಕಹೊಸಹಳ್ಳಿ ಗ್ರಾಮದಿಂದ ಪೈಪ್ ಲೈನ್ ಮೂಲಕ ನೀರಿನ ವ್ಯವಸ್ಥೆಯನ್ನು ಮಾಡಲಾಗಿದೆ ಇದರೊಟ್ಟಿಗೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಪರಿಶೀಲನೆ ಮಾಡಲಾಗಿದೆ. ಎಲ್ಲೆಲ್ಲಿ ಕುಡಿಯುವ ನೀರಿನ ಸಮಸ್ಯೆ ಇದೆಯೋ ಅದನ್ನು ಬಗೆಹರಿಸಲು ಜಿಲ್ಲಾಡಳಿತ ಬದ್ಧವಾಗಿದೆ ಎಂದರು.
ಪ್ರಾಣಿ ಪಕ್ಷಿಗಳು ಜೀವಸಂಕುಲದ ಅವಿಭಾಜ್ಯ ಅಂಗವಾಗಿದೆ, ಬಿಸಿಲಿನ ಬೇಗೆಯಿಂದ ಪಾಣಿ ಪಕ್ಷಗಳು ಸಂಕಷ್ಟ ಎದುರಿಸುತ್ತಿವೆ ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಜಿಲ್ಲಾಡಳಿತ ಬದ್ಧವಾಗಿದ್ದು ಜಿಲ್ಲಾಧ್ಯಂತ 1321 ನೀರಿನ ತೊಟ್ಟಿಗಳನ್ನು ನಿರ್ಮಾಣ ಮಾಡಿ ನೀರನ್ನು ಪೂರೈಸಲಾಗುತ್ತಿದೆ ಎಂದರು.
ಬೂದಿಕೋಟೆ ಗ್ರಾಮದಲ್ಲಿರುವ ಐತಿಹಾಸಿಕ ಪ್ರಸಿದ್ಧ ಹೈದರಾಲಿ ಸ್ಮಾರಕ ಮತ್ತು ಕೋಟೆಯನ್ನು ಕಡೆಗಣಿಸಲಾಗಿದ್ದು ಮೂಲಭೂತಸೌಲಭ್ಯಗಳಿಂದ ವಂಚಿತವಾನನ್ನು, ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಆರ್ಕಲಾಜಿಸ್ಟ್ ವಿಭಾಗದ ಅಧಿಕಾರಿಗಳಿಗೆ ಸ್ಮಾರಕದ ರಕ್ಷಣೆ ಮತ್ತು ಮೂಲಭೂತ ಸೌಲಭ್ಯಗಳನ್ನು ಒದಗಿಸುವಂತೆ ಪತ್ರ ಬರೆಯಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಜಾತ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ಪ್ರತಿಭಾ, ತಾಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ರವಿಕುಮಾರ್, ನಗರಸಭೆ ಆಯುಕ್ತ ಸತ್ಯನಾರಾಯಣ ಇತರರು ಉಪಸ್ಥಿತರಿದ್ದರು.
ಯಶಸ್ಸಿನ ಹಾದಿಯತ್ತ ಗಣತಿ ಕಾರ್ಯ , ನೀರಿನ ಬವಣೆ ನೀಗಿಸಲು ಬದ್ಧ : ಜಿಲ್ಲಾಧಿಕಾರಿ



