ಹೈದರಾಬಾದ್: ಸರ್ಕಾರ ರಚಿಸಲು ಅಗತ್ಯ ಬಹುಮತಗಳಿಸಲು ಕಾಂಗ್ರೆಸ್ ಪಕ್ಷದ ನೂತನ ಸಿಎಂ ಆಗಿ ನಾಳೆ ತೆಲಂಗಾಣ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿರುವ ರೇವಂತರೆಡ್ಡಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ನಾಳೆ ಹೈದರಾಬಾದ್ನಲ್ಲಿ 10.28ಕ್ಕೆ ರೇವಂತ ರೆಡ್ಡಿ ತೆಲಂಗಾಣ ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯಪಾಲರಾದ ತಮಿಳುಸೆಲ್ವಿ ಅವರಿಂದ ಅಧಿಕಾರದ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.
ಇತ್ತೀಚೆಗೆ ನಡೆದ ವಿಧಾನಸಭಾ ಚುನಾವಣೆಯಲ್ಲಿ 119 ಸ್ಥಾನಗಳ ಪೈಕಿ 64 ಸ್ಥಾನಗಳನ್ನು ಗಳಿಸುವ ಮೂಲಕ ಕಾಂಗ್ರೆಸ್ ಪಕ್ಷ ಅಧಿಕಾರ ನಡೆಸಲು ಬೇಕಾದ ಅಗತ್ಯ ಬಹುಮತ ಗಳಿಸಿದೆ.