ಹರಿಹರ: ಹರಿಹರದ ಅನಗವಾಡಿ ಬಳಿಯಿರುವ ಪಂಚಮಸಾಲಿ ಗುರುಪೀಠದಲ್ಲಿ ಬಿಗಿ ಪೊಲೀಸ್ ಭದ್ರತೆ ಏರ್ಪಡಿಸಲಾಗಿದೆ.
ಕಳೆದ 1ತಿಂಗಳಿನಿಂದ ಮಠದಲ್ಲಿ ನಡೆಯುತ್ತಿರುವ ಲೆಕ್ಕ ಕೊಡಿ ಅಭಿಯಾನ ಸಂಬಂಧ ಇಂದು ಮಠದ ಸೃಷ್ಠಿಗಳು ಲೆಕ್ಕ ಕೊಡಲಿದ್ದಾರೆ. ಹಾಗಾಗಿ ಮಠದ ಟ್ರಸ್ಟಿಗಳು ಹಾಗೂ ಗುರುಪೀಠದ ಭಕ್ತರು ಮಠದಲ್ಲಿ ಜಮಾಯಿಸಲಿದ್ದಾರೆ. ಈ ಹಿನ್ನೆಲೆಯಲ್ಲಿ ಮಠದಲ್ಲಿ ಸಂಪೂರ್ಣ ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಠಕ್ಕೆ ನಾಲ್ಕು ಕಡೆಯಿಂದಲೂ ಸಂಪೂರ್ಣ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ. ಮಠಕ್ಕೆ ಬಂದು ಹೋಗುವ ಪ್ರತಿಯೊಂದು ವಾಹನದ ವಿಡೀಯೋ ಮಾಡಲಾಗುತ್ತಿದೆ. ಮುಂಜಾಗತಾ ಕ್ರಮವಾಗಿ ಸಮುದಾಯದ ಎರಡು ಕಡೆಯ ಮುಖಂಡರು ಸೇರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಕಟ್ಟೆಚ್ಚರ ವಹಿಸಲಾಗಿದೆ.



