ಬೆಂಗಳೂರು: ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯ ಮೇಲ್ಸ್ತುವೆ ಬಳಿ ಇರುವ ಹೂವಿನ ಮಾರ್ಕೆಟ್ ಹತಿರ ಅಪರಿಚಿತ ವ್ಯಕ್ತಿಗಳು ನಡೆದು ಹೋಗುತ್ತಿದ್ದ ಆಸಾಮಿಯನ್ನು ಬೆದರಿಸಿ ಒಂದು ಮೊಬೈಲ್ ದರೋಡೆ ಮಾಡಿರುವ ಘಟನೆ ಮಧ್ಯರಾತ್ರಿ ವರದಿಯಾಗಿದೆ.
ಅನಿಲ್ ಎಂಬ ವ್ಯಕ್ತಿಯು ನಿನ್ನೆ ರಾತ್ರಿ ನಡೆದು ಹೋಗುವಾಗ ಅಪರಿಚಿತ ವ್ಯಕ್ತಿಗಳು ಚಾಕು ತೋರಿಸಿ 20000 ರೂ ಮೊಬೈಲ್ ಬೆಲೆ ಬಾಳುವ ಒಪ್ಪೋ ಮೊಬೈಲ್ ಫೋನ್ ದರೋಡೆ ಮಾಡಿರುತ್ತಾರೆ.ಯಶವಂತಪುರ ಪೊಲೀಸರು ದೂರು ದಾಖಲಿಸಿ ಕೊಂಡು ಆರೋಪಿ ಪತ್ತೆಗೆ ಕಾರ್ಯ ನಡೆಸಿರುತ್ತಾರೆ.
ಮತ್ತೊಂದೆಡೆ ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ವಾಟರ್ ಟ್ಯಾಂಕ್ ಬಳಿ ಚಾಕು ತೋರಿಸಿ ಮೊಬೈಲ್ ಕಿತುಕೊಂಡು ಪರಾರಿಯಾಗಿರುವ ಘಟನೆ ವರದಿಯಾಗಿದೆ. ನಿಶಾಂತ್ ಎಂಬ ವ್ಯಕ್ತಿಯು ರಾತ್ರಿ ನಡೆದು ಕೊಂಡು ಮನೆ ಕಡೆ ಹೋಗುತ್ತಿರುವಾಗ ಇಬ್ಬರು ಅಪರಿಚಿತ ವ್ಯಕ್ತಿಗಳು ಮೋಟರ್ ಬೈಕ್ ನಲ್ಲಿ ಬಂದು ಚಾಕು ತೋರಿಸಿ ಬೆದರಿಸಿ 10,000 ಮೊಬೈಲ್ ಬಾಳುವ ರೆಡ್ಮಿ ಮೊಬೈಲ್ ಮಾಡಿರುತ್ತಾರೆ. ಕೋರಮಂಗಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.