ಬೆಂಗಳೂರು: ಸ್ವಚ್ಛಗೊಳಿಸಲು ಕೆಮಿಕಲ್ ಯುಕ್ತ ಬಾಯ್ಲರ್ ಒಳಗಿಳಿದ ಇಬ್ಬರು ಕಾರ್ಮಿಕರುಡ್ರೈನೇಜ್ಗೆ ಬಿದ್ದು
ಮೃತಪಟ್ಟು, ಮತ್ತಿಬ್ಬರ ಸ್ಥಿತಿ ಗಂಭೀರವಾಗಿರುವ ದಾರುಣ ಘಟನೆ ತಾಲ್ಲೂಕಿನ ಜಿಗಣಿ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.
ಉತ್ತರ ಪ್ರದೇಶ ಮೂಲದ ಮುನ್ನಾ ಸಿಂಗ್ (45) ಹಾಗೂ ಲಾಲು ಸಿಂಗ್ (40) ಮೃತ ಕಾರ್ಮಿಕರು. ಜಿಗಣಿ ಕೈಗಾರಿಕಾ ಪ್ರದೇಶದ ಕುಮಾರ್ ಆರ್ಗ್ಯಾನಿಕ್ಸ್ ಕಾರ್ಖಾನೆಯಲ್ಲಿ ಸಂಜೆ ಕತ್ತಲಿನಲ್ಲಿ ಕೆಮಿಕಲ್ ಯುಕ್ತ ಬಾಯ್ಲರ್ ಸ್ವಚ್ಛಗೊಳಿಸಲು ಇಳಿದಾಗ ಈ ಘಟನೆ ಸಂಭವಿಸಿದೆ.
ಮೃತರು ಅಂಗಿ ಕಳಚಿ ಸ್ವಚ್ಛತೆಗೆ ಇಳಿದಿದ್ದರು. ಸುಮಿತ್ ಮಂಡಲ್ ಮತ್ತು ವಿಜಯ್ ಕುಮಾರ್ ಸಿಂಗ್ ಎಂಬ ಕಾರ್ಮಿಕರ ಸ್ಥಿತಿ ಗಂಭೀರಗಾಗಿದ್ದು, ಅವರನ್ನು ಸ್ಥಳೀಯ ಖಾಸಗಿ ಆಸ್ಪತ್ತೆಗೆ ದಾಖಲು ಮಾಡಲಾಗಿದೆ. ಆಸ್ಪತ್ರೆಯಲ್ಲಿ ಮೃತರ ಸಹಪಾಟಿಗಳ ಜಮಾವಣೆಯಾಗಿದ್ದು, ಕಾರ್ಖಾನೆ ಮಾಲೀಕರಿಗೆ ಹಿಡಿ ಶಾಪ ಹಾಕುತ್ತಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಡಿವೈಎಸ್ಪಿ ಗೋಪಾಲ್ ನಾಯಕ್ ಸಮೇತ ಜಿಗಣಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ಮುಂದಿನ ತನಿಖೆಯನ್ನು ಕೈಗೊಂಡಿದ್ದಾರೆ.



