ಚನ್ನೈ: ಆರಂಭದಲ್ಲಿ ರಾಜ್ಯಪಾಲರಿಗೆ ಬಹುಮತ ತೋರಿಸಲು ನಾಲ್ಕೈದು ದಿನಗಳ ಕಾಲ ಹರಸಾಹಸ ಪಟ್ಟಿದ್ದ ತಮಿಳುನಾಡು ಟಿವಿಕೆ ಪಕ್ಷದ ದಳಪತಿ ವಿಜಯ್ ಅವರು ಇಂದು ತಮಿಳುನಾಡು ವಿಧಾನಸಭೆಯಲ್ಲಿ ನಿರೀಕ್ಷೆಗೆ ಮೀರಿ ಬಹುಮತ ಸಾಬೀತುಪಡಿಸಿ ವಿಶ್ವಾಸ ಮತ ಗಳಿಸಿದ್ದಾರೆ. ಒಟ್ಟು 144 ಶಾಸಕರ ಬೆಂಬಲದಿಂದ ಟಿವಿಕೆ ಪಕ್ಷ ತನ್ನ ಬೆಂಬಲವನ್ನು ಸಾಬೀತುಪಡಿಸಿದೆ. 22 ಜನ ಶಾಸಕರು ಟಿವಿಕೆ ಸರ್ಕಾರಕ್ಕೆ ತಮ್ಮ ವಿರೋಧ ವ್ಯಕ್ತಪಡಿಸಿದ್ದಾರೆ. ಬಹುಮತ ಸಾಭೀತು ಪಡಿಸುವ ಸಂದರ್ಭದಲ್ಲಿ ಎಲ್ಲರ ಊಹೆಯನ್ನು ಮೀರಿ ಎಐಎಡಿಎಂಕೆ ಪಕ್ಷ 25 ಭಿನ್ನ ಬಣ ಶಾಸಕರು ಸಹ ವಿಜಯ್ಗೆ ಬೆಂಬಲ ವ್ಯಕ್ತಪಡಿಸಿದ್ದಾರೆ. 107 ಜನ ಟಿವಿಕೆ ಶಾಸಕರ ಪೈಕಿ ಕೋರ್ಟ್ ನಿರ್ದೇಶನದಂತೆ ಓರ್ವ ಶಾಸಕನಿಗೆ ಮತದಾನದ ಹಕ್ಕು ಇರಲಿಲ್ಲ. ಒಂದು ಮತದ ಹಂತರದಿಂದ ಜಯಗಳಿಸಿದ್ದ ಟಿವಿಕೆ ಶಾಸಕ ಸೇತುಪತಿ ಶ್ರೀನಿವಾಸನ್ ಅವರಿಗೆ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ಮದ್ರಾಸ್ ಹೈಕೋರ್ಟ್ ಮತದಾನದ ಹಕ್ಕನ್ನು ತಡೆ ಹಿಡಿದಿತ್ತು. ಎರಡು ಕ್ಷೇತ್ರದಿಂದ ಗೆದ್ದಿದ್ದ ಮುಖ್ಯಮಂತ್ರಿ ವಿಜಯ್ ಅವರಿಗೆ ಒಂದು ಮತ ಚಲಾಯಿಸಲು ಮಾತ್ರ ಅವಕಾಶವಿತ್ತು. ಪಿಎಂಕೆಯ ನಾಲ್ವರು ಹಾಗೂ ಬಿಜೆಪಿಯ ಓರ್ವ ಶಾಸಕರು ಮತದಾನ ಸಂದರ್ಭದಲ್ಲಿ ಗೈರಾಗಿದ್ದರು. ಉಳಿದಂತೆ ಟಿವಿಕೆ ಕಾಂಗ್ರೆಸ್, ಸಿಪಿಐ, ಸಿಪಿಐ(ಎಂ), ವಿಸಿಕೆ ಎಎಎಂಕೆ, ಡಿಎಂಕೆ ಪಕ್ಷದ ಶಾಸಕರು ಸೇರಿದಂತೆ ಎಐಎಎಂಡಿಕೆ ಭಿನ್ನರು ಒಟ್ಟು 144 ಮಂದಿಯ ವಿಶ್ವಾಸವನ್ನು ವಿಜಯ್ ಪಡೆದಿದ್ದಾರೆ. ಈ ಸಂದರ್ಭದಲ್ಲಿ ಮಾತನಾಡಿರುವ ಅವರು, ತಾವು ಯಾವುದೇ ಕಾರಣಕ್ಕೂ ದ್ವೇಷದ ರಾಜಕಾರಣ ಮಾಡುವುದಿಲ್ಲ. ಹಿಂದಿನ ಸರ್ಕಾರ ಯೋಜನೆಗಳನ್ನು ಮುಂದುವರಿಸುತ್ತೇನೆ. ವಿರೋಧಪಕ್ಷದವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಮಾಡುವುದಾಗಿ ತಿಳಿಸಿದ್ದಾರೆ.
ತಮಗೆ ಬೆಂಬಲ ನೀಡಿದ್ದ ಮಿತ್ರಪಕ್ಷಗಳು ಸೇರಿದಂತೆ ಎಲ್ಲರಿಗೂ ಧನ್ಯವಾದ ಸಮರ್ಪಿಸಿದ್ದಾರೆ.ಸಭಾತ್ಯಾಗಕ್ಕೂ ಮುನ್ನಾ ಮಾತನಾಡಿದ ಡಿಎಂಕೆ ಶಾಸಕಾಂಗ ಪಕ್ಷದ ನಾಯಕ ಉದಯ್ನಿಧಿಸ್ಟಾಲಿನ್ ಅವರು, ವಿಜಯ್ ನೇತೃತ್ವದ ಸರ್ಕಾರದ ಶೇ 65ರಷ್ಟು ಮತಗಳನ್ನು ಪಡೆದಿಲ್ಲ. ಇದು ಬಹುಮತವಿಲ್ಲದ ಸರ್ಕಾರ, ಬಿಜೆಪಿ ಪಕ್ಷದ ಬೆಂಬಲಿತರೊAದಿಗೆ ಸರ್ಕಾರ ರಚನೆ ಮಾಡಿದೆ. ಕುದುರೆ ವ್ಯಾಪಾರ ನಡೆಯುವ ಸಂಭವವಿದೆ ಎಂದು ಸರ್ಕಾರ ವಿರುದ್ಧ ಟೀಕಾಪ್ರಹಾರ ನಡೆಸಿದ್ದರು.ಇದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ವಿಜಯ್ ತಮ್ಮ ಭಾಷಣದಲ್ಲಿ ಕುದುರೆ ವ್ಯಾಪಾರಕ್ಕೆ ತಮ್ಮ ಪಕ್ಷ ಆಸ್ಪದ ನೀಡುವುದಿಲ್ಲ. ಆ ಪಕ್ಷದವರು ಈ ಪಕ್ಷದವರು ಎಂದು ಭೇದಭಾವ ಮಾಡುವುದಿಲ್ಲ. ಅಂಬೇಡ್ಕರ್, ಪೆರಿಯಾರ್, ಕಾಮರಾಜ್ ಅವರ ತತ್ವಾದರ್ಶಗಳೊಂದಿಗೆ ಸರ್ಕಾರ ನಡೆಸುವ ಭರವಸೆ ನೀಡಿದರು.
ವಿಶ್ವಾಸಕ್ಕೆ ವಿಜಯ ತಮಿಳುನಾಡಿನಲ್ಲಿ 144 ಶಾಸಕರ ಬಹುಮತ ಪಡೆದ ಟಿವಿಕೆ ಸರ್ಕಾರ



