ಕೆಜಿಎಫ್: ಪುರಾತನ ಪ್ರಸಿದ್ಧ ಶ್ರೀ ಸ್ವಯಂ ಭುವನೇಶ್ವರ ಸ್ವಾಮಿಯ ದೇವಾಲಯದಲ್ಲಿ ಪಿಆರ್ ಇಡಿ ಇಲಾಖೆಯ ಮೂಲಕ ದೇಗುಲ ಜೀರ್ಣೋದ್ಧಾರ ಮೂಲ ಸೌಕರ್ಯ ಅಭಿವೃದ್ಧಿ ಯೋಜನೆಯ ಅಡಿಯಲ್ಲಿ ಕೈಗೊಂಡಿರುವ ಯಾಗ ಶಾಲಾ ಕೊಠಡಿಯನ್ನು ಶಾಸಕಿ ಎಂ.ರೂಪಕಲಾ ಉದ್ಘಾಟಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕೆಜಿಎಫ್ ತಾಲೂಕಿನ ವಿವಿಧ ದೇಗುಲಗಳ ಜೀರ್ಣೋದ್ಧಾರಕ್ಕಾಗಿ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾ ಪಂಚಾಯತ್ ರಾಜ್ ಇಲಾಖೆ ಮೂಲಕ ಸರ್ಕಾರದಿಂದ ವಿಶೇಷ ಅನುದಾನ ಬಿಡುಗಡೆಗೊಳಿಸಿ ಕ್ರಮ ಕೈಗೊಳ್ಳಲಾಗಿದೆ ಎಂದರು.
ಕೆಜಿಎಫ್ ನ ಲಕ್ಷ್ಮೀ ವೆಂಕಟರಮಣ ಸ್ವಾಮಿ ದೇವಸ್ಥಾನ, ಬಂಗಾರು ತಿರುಪತಿ ದೇವಾಲಯಕ್ಕೆ ಕೋಟ್ಯಾಂತರ ರೂಪಾಯಿ ಅನುದಾನ ಬಿಡುಗಡೆಗೊಳಿಸಿ ಕ್ರಮ ಕೈಗೊಳ್ಳಲಾಗಿದೆ. ಅದೇ ರೀತಿ ವಿವಿಧ ಹಳ್ಳಿಗಳ ದೇಗುಗಳಿಗೆ 1 ಲಕ್ಷದಿಂದ 10 ಹಾಗೂ 15 ಲಕ್ಷದವರೆಗೆ ಅನುದಾನ ಬಿಡುಗಡೆಗೊಳಿಸಿದ್ದು, ಮಡಿವಾಳ ಸ್ವಯಂಭುವನೇಶ್ವರ ಸ್ವಾಮಿಯ ಆವರಣದಲ್ಲಿ ದೇವಾಲಯ ಹಾಗೂ ಭಕ್ತಾದಿಗಳ ಸೌಕರ್ಯಕ್ಕಾಗಿ ಯಾಗ ಶಾಲಾ ಕೊಠಡಿ ಕಾಮಗಾರಿ ಪೂರ್ಣಗೊಂಡಿದ್ದು, ಇದಕ್ಕೆ ಅಧಿಕೃತವಾಗಿ ಇಂದು ಚಾಲನೆ ನೀಡಲಾಯಿತು ಎಂದರು.ಈ ದೇಗುಲ ತನ್ನದೇ ಆದಂತಹ ಇತಿಹಾಸವಿದೆ. ಪುರಾತನ ಕಾಲದಲ್ಲಿ ನಿರ್ಮಾಣಗೊಂಡ ಹಿನ್ನೆಲೆಯಲ್ಲಿ ಕಳೆದ ವರ್ಷ ಮಳೆಗಾಲದಲ್ಲಿ ಕಟ್ಟಡವು ಶಿಥಲಗೊಂಡಿತ್ತು, ಸ್ಥಳೀಯ ಭಕ್ತರ ರಕ್ಷಣೆಗಾಗಿ ಹಳೆಯ ಕಲ್ಲುಗಳನ್ನು ತೆರವುಗೊಳಿಸಿ ಭಕ್ತಾದಿಗಳಿಗಾಗಿ ಯಾಗ ಶಾಲಾ ಕೊಠಡಿಯನ್ನು ನಿರ್ಮಿಸಿದ್ದು, ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.ಮತ್ತೊಂದು ದೇಗುಲ ಕೊಠಡಿ ಕಾಮಗಾರಿಗೆ ಅನುದಾನ ನೀಡಿ: ಇದೇ ಸಂದರ್ಭದಲ್ಲಿ ಗ್ರಾಮದ ಯುವ ಮುಖಂಡ ಅರುಣ್ ರೆಡ್ಡಿ ಮಾತನಾಡಿ, ದೇಗುಲವನ್ನು ಪೂರ್ವರ ಕಾಲದಲ್ಲಿ ನಿರ್ಮಿಸಿದ್ದು, ದೇಗುಲದಲ್ಲಿ ಮತ್ತೊಂದು ಹೊಸ ಕಟ್ಟಡ ನಿರ್ಮಾಣಕ್ಕೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು. ಶಾಸಕರು ಸಕಾರಾತ್ಮಕವಾಗಿ ಸ್ಪಂದಿಸಿ ಅತಿ ಶೀಘ್ರದಲ್ಲೇ ಮತ್ತೊಂದು ಕಟ್ಟಡಕ್ಕೆ ಅನುದಾನ ಕಲ್ಪಿಸುವ ಭರವಸೆ ನೀಡಿದರು.ಈ ಸಂದರ್ಭದಲ್ಲಿ ದೇಗುಲ ಸಮಿತಿ ಅಧ್ಯಕ್ಷ ವೆಂಕಟ ಕೃಷ್ಣ ರೆಡ್ಡಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನಾಗರಾಜ್, ಗುತ್ತಿಗೆದಾರ ಪುರುಷೋತ್ತಮ್ ನಾಯ್ಡು, ಮುಖಂಡರಾದ ವೆಂಕಟರಾಮಪ್ಪ, ಅರುಣ್ ರೆಡ್ಡಿ, ಚಂದ್ರಶೇಖರ್ ರೆಡ್ಡಿ, ಸದಾನಂದ ರೆಡ್ಡಿ ಸುವರ್ಣಹಳ್ಳಿ ಕೃಷ್ಣಮೂರ್ತಿ, ಹಾಗೂ ಅನೇಕ ಮುಖಂಡರು ಗ್ರಾಮಸ್ಥರು ಉಪಸ್ಥಿತರಿದ್ದರು.
ದೇವಾಲಯದಲ್ಲಿ ಯಾಗ ಶಾಲಾ ಕೊಠಡಿ ಉದ್ಘಾಟನೆ ಮಡಿವಾಳ ಗ್ರಾಮದಲ್ಲಿ ಯಾಗ ಶಾಲೆ ಉದ್ಘಾಟಿಸಿದ ಶಾಸಕಿ ಎಂ ರೂಪಕಲಾ



