ಚನ್ನಪಟ್ಟಣ: ಪಟ್ಟಣದ ಎಲೇಕೇರಿಯ ರೈಲ್ವೆ ಮೇಲ್ಸೆತುವೆ ನಿರ್ಮಾಣಕ್ಕೆ ಡಿ.ಕೆ.ಸುರೇಶ್ ಅವರು ಸಂಸದರಾಗಿದ್ದಾಗ ಸುಮಾರು 15 ಕೋಟಿ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ರೈಲ್ವೆ ಮೇಲ್ಸೆತುವೆ ನಿರ್ಮಾಣಕ್ಕೆ ಅವರ ಕೊಡುಗೆ ಅಪರವಾಗಿದ್ದು, ಎಲೇಕೇರಿ ಹಾಗೂ ಸುತ್ತಮುತ್ತಲ ನಾಗರೀಕರೆಲ್ಲ ಸೇರಿ ಶಾಸಕ ಸಿ.ಪಿ.ಯೋಗೇಶ್ವರ್ ಅವರ ನೇತೃತ್ವದಲ್ಲಿ ಅವರಿಗೆ ಪೌರ ಸನ್ಮಾನ ಮಾಡುವ ಕೆಲಸವನ್ನು ಮಾಡುತ್ತೇವೆ ಎಂದು ನಗರಸಭೆ ಮಾಜಿ ಅಧ್ಯಕ್ಷ ಬಿ.ಪಿ.ಮುದ್ದುಕೃಷ್ಣೇಗೌಡ ತಿಳಿಸಿದರು.
ಪಟ್ಟಣದ ಎಲೇಕೇರಿಯ ಅವರ ನಿವಾಸದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, ಡಿ.ಕೆ.ಸುರೇಶ್ ಅವರು 2013-14ರಲ್ಲಿ ಸಂಸದರಾಗಿ ಆಯ್ಕೆಯಾದ ಸಂದರ್ಭದಲ್ಲಿ ಪಟ್ಟಣದ ರೈಲು ನಿಲ್ದಾಣಕ್ಕೆ ಆಗಮಿಸಿ ಸಾರ್ವಜನಿಕರಿಂದ ಆಹವಾಲು ಸ್ವೀಕರಿಸುವಾಗ ನಾನೂ ಕೂಡ ನಗರಸಭೆ ಪ್ರಭಾರಿ ಅಧ್ಯಕ್ಷನಾಗಿದ್ದೆ ಆ ಸಂದರ್ಭದಲ್ಲಿ ಡಿ.ಕೆ.ಸುರೇಶ್ ಅವರಲ್ಲಿ ಮನವಿ ಮಾಡಿ, ಎಲೇಕೇರಿ ರೈಲ್ವೆ ಗೇಟ್ನಿಂದ ಸುಮಾರು 20 ಸಾವಿರ ಜನರಿಗೆ ತೊಂದರೆಯಾಗುತ್ತಿದ್ದು, ಪ್ರತಿನಿತ್ಯ 50ಕ್ಕೂ ಹೆಚ್ಚು ರೈಲುಗಳು ಓಡಾಡುವುದರಿಂದ ಪ್ರತಿ ರೈಲು ಸಂಚರಿಸುವಾಗ ಅರ್ಧಗಂಟೆಗೂ ಹೆಚ್ಚು ಕಾಲ ಗೇಟ್ಮುಚ್ಚುವುದರಿಂದ ವಿದ್ಯಾರ್ಥಿಗಳಿಗೆ, ವೃದ್ಧರಿಗೆ, ರೋಗಿಗಳಿಗೆ, ಓಡಾಡಲು ಭಾರಿ ತೊಂದರೆ ಉಂಟಾಗುತ್ತಿದೆ. ಆದ್ದರಿಂದ ತಾವು ದಯಮಾಡಿ ಎಲೇಕೇರಿ, ರಾಂಪುರ, ದೇವರಹೊಸಹಳ್ಳಿ, ಪಾರೆದೊಡ್ಡಿ ಜನತೆಗೆ ಅನುಕೂಲವಾಗುವಂತೆ ರೈಲ್ವೆ ಮೇಲ್ಸೆತ್ತುವೆ ನಿರ್ಮಾಣ ಮಾಡಿಕೊಡಬೇಕೆಂದು ಎಲೇಕೇರಿ ಗ್ರಾಮಸ್ಥರ ಪರವಾಗಿ ಮನವಿ ಮಾಡಿದ್ದೇ ಎಂದರು.
ನಮ್ಮ ಮನವಿಗೆ ಸ್ಪಂಧಿಸಿದ ಡಿ.ಕೆ.ಸುರೇಶ್ ಅವರು ಸಂಸತ್ ಅದಿವೇಶನದಲ್ಲಿ ನಮ್ಮ ಗ್ರಾಮದ ಸಮಸ್ಯೆಯ ಬಗ್ಗೆ ಗಮನ ಸೆಳೆದು ಸುಮಾರು 15 ಕೋಟಿ ಅನುದಾನವನ್ನು ಬಿಡುಗಡೆ ಮಾಡುವ ಮೂಲಕ ರೈಲ್ವೆ ಮೇಲ್ಸೆತ್ತುವೆ ನಿರ್ಮಾಣಕ್ಕೆ ಚಾಲನೆ ನೀಡಿದರು. ಇಂದು ಎಲೇಕೇರಿ ಜನತೆಗೆ ಅನುಕೂಲವಾಗುವಂತಹ ಸುಸಜ್ಜಿತ ರೈಲ್ವೆ ಮೇಲ್ಸೆತ್ತುವೆ ನಿರ್ಮಾಣದ ಹಿಂದೆ ಡಿ.ಕೆ.ಸುರೇಶ್ ಅವರ ಕೊಡುಗೆ ಹೆಚ್ಚಿನ ಪ್ರಮಾಣದಲ್ಲಿ ಇದ್ದು, ಎಲೇಕೇರಿ ಹಾಗೂ ಸುತ್ತಮುತ್ತಲ ಗ್ರಾಮದವರೆಲ್ಲಾ ಸೇರಿ ಕ್ಷೇತ್ರದ ಶಾಸಕರಾದ ಸಿ.ಪಿ.ಯೋಗೇಶ್ವರ್ ಅವರ ನೇತೃತ್ವದಲ್ಲಿ ಅವರಿಗೆ ಪೌರ ಸನ್ಮಾನ ಮಾಡುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.
ರೈಲ್ವೆ ಇಲಾಖೆಯಿಂದ ಮೊನ್ನೆ ಸೋಮವಾರ ಎಲೇಕೇರಿ ಗ್ರಾಮದಲ್ಲಿ ಮೇಲ್ಸೆತ್ತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಅಧಿಕಾರಿಗಳಾಗಲಿ ಅಥವಾ ಚುನಾಯಿತ ಪ್ರತಿನಿಧಿಗಳಾಗಲಿ ಸೇತುವೆ ನಿರ್ಮಾಣಕ್ಕೆ ಕೊಡುಗೆ ನೀಡಿದ ಡಿ.ಕೆ.ಸುರೇಶ್ ಅವರ ಹೆಸರನ್ನು ಎಲ್ಲಿಯೂ ಉಲ್ಲೇಖ ಮಾಡಿಲ್ಲ ಅವರು ನೀಡಿದ ಕೊಡುಗೆಯನ್ನು ನೆನೆಸುವ ಕೆಲಸವನ್ನು ಮಾಡಬೇಕಿತ್ತು. ಹಾಗಾಗಿ ಶಾಸಕ ಸಿ.ಪಿ.ಯೋಗೇಶ್ವರ್ ನೇತೃತ್ವದಲ್ಲಿ ನಗರಸಭೆ ಅಧ್ಯಕ್ಷರು ಹಾಗೂ ಎಲ್ಲಾ ಸದಸ್ಯರು ಸೇರಿ ಪಕ್ಷಾತೀತವಾಗಿ ಅವರಿಗೆ ಸನ್ಮಾನ ಮಾಡುವ ಕೆಲಸವನ್ನು ಮಾಡುತ್ತೇವೆ ಎಂದು ಹೇಳಿದರು.
ಜೆಡಿಎಸ್ ಮುಖಂಡ ನಂದೀಶ್ ಅವರು ಮಾತನಾಡಿ, ಮೊನ್ನೆ ನಡೆದ ಎಲೇಕೇರಿ ಮೇಲ್ಸೆತ್ತುವೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಸೇತುವೆ ನಿರ್ಮಾಣಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಕೊಡುಗೆ ನೀಡಿದ ಡಿ.ಕೆ.ಸುರೇಶ್ ಹಾಗೂ ಹೆಚ್.ಡಿ.ಕುಮಾರಸ್ವಾಮಿ ಹೆಸರುಗಳನ್ನು ಪ್ರಸ್ತಾಪಿಸುವ ಕೆಲಸವನ್ನು ಅಧಿಕಾರಿಗಳು ಮಾಡಬೇಕಿತ್ತು. ಡಿ.ಕೆ.ಸುರೇಶ್ ಅವರು ಸಂಸದರಾಗಿದ್ದಾಗ ಸೇತುವೆ ನಿರ್ಮಾಣಕ್ಕೆ ಸುಮಾರು 15 ಕೋಟಿ ಅನುದಾನವನ್ನು ಬಿಡುಗಡೆ ಮಾಡಿ ಚಾಲನೆ ನೀಡಿದರು. ರೈಲ್ವೆ ಮೇಲ್ಸೆತ್ತುವೆಯಿಂದ ಸಾರ್ವಜನಿಕ ಆಸ್ಪತ್ರೆ ಹಾಗೂ ಎಲೇಕೇರಿ ಗ್ರಾಮಕ್ಕೆ ರಸ್ತೆ ನಿರ್ಮಾಣಕ್ಕೆ ಇದ್ದ ತೊಂದರೆಯನ್ನು ಶಾಸಕರಾಗಿದ್ದ ಹೆಚ್.ಡಿ.ಕುಮಾರಸ್ವಾಮಿ ಅವರು ನಗರಸಭೆ ಅಧಿಕಾರಿಗಳೊಂದಿಗೆ ಚರ್ಚಿಸಿ ಸಮಸ್ಯೆಗಳನ್ನು ಇತ್ಯರ್ಥಗೊಳಿಸಿ ಸುಸಜ್ಜಿತ ಸೇತುವೆಯ ನಿರ್ಮಾಣದಲ್ಲಿ ಡಿ.ಕೆ.ಸುರೇಶ್ರೊಂದಿಗೆ ಹೆಚ್.ಡಿ.ಕುಮಾರಸ್ವಾಮಿ ಅವರ ಕೊಡುಗೆಯೂ ಹೆಚ್ಚಿನ ಪ್ರಮಾಣದಲ್ಲಿ ಇದೆ. ರೈಲ್ವೆ ಅಧಿಕಾರಿಗಳು ಕಾರ್ಯಕ್ರಮದಲ್ಲಿ ಅವರುಗಳ ಹೆಸರನ್ನು ಪ್ರಸ್ತಾಪಿಸದೆ ಈ ಇಬ್ಬರು ನಾಯಕರಿಗೆ ಅವಮಾನ ಮಾಡುವ ಕೆಲಸವನ್ನು ಮಾಡಿದ್ದಾರೆ ಎಂದು ಬೇಸರವನ್ನು ಹೊರ ಹಾಕಿದರು.
ಇದೇ ಸಂದರ್ಭದಲ್ಲಿ ಎಲೇಕೇರಿ ಗ್ರಾಮದ ಮಾಲೀಂಗ, ಈಶ್ವರ ಮಾತನಾಡಿದರು.
ಪತ್ರಿಕಾಗೋಷ್ಠಿಯಲ್ಲಿ ಎಲ್ಐಸಿ ಕೃಷ್ಣಪ್ಪ, ಮುಖಂಡ ದೃವಕುಮಾರ್, ವಿಳೆದೆಲೆ ವ್ಯಾಪಾರಿ ಚಂದು, ಧನು, ವಾಸು, ರಾಜೇಶ್, ಹೊನ್ನರವೀಂದ್ರ, ವಿಜಿ, ಅಂಗಡಿ ಕಾಂತರಾಜು ಇನ್ನೂ ಮುಂತಾದವರು ಪಾಲ್ಗೊಂ
ಡಿದ್ದರು.
ಎಲೇಕೇರಿಯ ರೈಲ್ವೆ ಮೇಲ್ಸೆತುವೆ ನಿರ್ಮಾಣಕ್ಕೆ 15 ಕೋಟಿ ರೂ. ಅನುದಾನ: ಶೀಘ್ರದಲ್ಲೇ ಡಿಕೆಸು ಅವರಿಗೆ ಪೌರ ಸನ್ಮಾನ



