ಬೆಂಗಳೂರು:ಕನ್ನಡ ಭಾಷ ಸಮಗ್ರ ಅಭಿವೃದ್ಧಿ ಅಧಿನಿಯಮದ ಅಂಶಗಳು ಜಾರಿಯಾದರೆ ಕನ್ನಡ ಭಾಷೆ ಬೆಳವಣಿಗೆ ಆಗುತ್ತದೆ, ರಾಜ್ಯ ಸರ್ಕಾರದ ಅಧಿಕಾರಿಗಳು ಕನ್ನಡದ ಅಭಿವೃದ್ಧಿಯ ಬಗ್ಗೆ ಆಡಳಿತಾತ್ಮಕ ವಾದ ಕನ್ನಡ ಚಿಂತನೆ ಯನ್ನು ಅನುಷ್ಠಾನ ಮಾಡಬೇಕು.ಖಾಸಗಿ ಶಿಕ್ಷಣ ಸಂಸ್ಥೆಗಳು ಕನ್ನಡವನ್ನು ಕೊಲ್ಲಬಲ್ಲರು ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ:ಪುರುಷೋತ್ತಮ ಬಿಳಿಮಲೆ, ಅವರು ನೊಂದು ನುಡಿದರು.ಮಹಾರಾಷ್ಟ್ರದಲ್ಲಿ ಮರಾಠಿ ಕಲಿಸದ ಶಾಲೆ ಗಳಿಗೆ ದಂಡ ವಿಧಿಸಿರುವಂತೆ ಕರ್ನಾಟಕದಲ್ಲಿಯೂ ಸಹ ಕನ್ನಡದಲ್ಲಿ ಶಿಕ್ಷಣ ಕಲಿಸದ ಶಾಲೆ ಗಳಿಗೆ ದಂಡ ವಿಧಿಸಬೇಕು ಹಾಗೂ ಪೋಲೀಸ್ ಇಲಾಖೆ, ಅಬಕಾರಿ ಇಲಾಖೆ, ಅಗ್ನಿ ಶಾಮಕ ದಳ, ಗೃಹರಕ್ಷಕ ದಳಗಳ ಸಮವಸ್ತ್ರಗಳಲ್ಲಿ ಸಂಪೂರ್ಣವಾಗಿ ಹಿಂದಿ ಹೇರಿಕೆ ನಿಲ್ಲಬೇಕು ಎಂದು ಹಿರಿಯ ರಾಜಕಾರಣ ಡಾ: ಮುಖ್ಯಮಂತ್ರಿ ಚಂದ್ರು ಒತ್ತಾಯಿಸಿದರು,ಕನ್ನಡ ಭಾಷೆಯ ಅಭಿವೃದ್ಧಿ ಗಾಗಿ ನಾಡಿನ ಸಾಹಿತಿಗಳು ಹೋರಾಟಗಾರರು ಅಕಾಡೆಮಿಗಳ ಅಧ್ಯಕ್ಷರುಗಳೊಂದಿಗೆ ನಿಯೋಗವು ಸಿಎಂಗಳೊಂದಿಗೆ ಚರ್ಚಿಸಬೇಕು ಎಂದು ಕನ್ನಡ ಪುಸ್ತಕ ಪ್ರಾಧಿಕಾರದ ಮಾಜಿ ಅಧ್ಯಕ್ಷೆ ಡಾ: ವಸುಂಧರಾ ಭೂಪತಿ ಹೇಳಿದರು.1)ಕನ್ನಡ ಕಡ್ಡಾಯ ಶಿಕ್ಷಣ 1ರಿಂದ 10ನೇತರಗತಿವರೆಗೆ, ಒಂದು ಮತ್ತು ಎರಡನೇ ಭಾಷೆಯಾಗಿ, 2)ಕನ್ನಡ ಭಾಷಾ ಸಮಗ್ರ ಅಧಿನಿಯಮ ಅನುಷ್ಠಾನಕ್ಕೆ ಒತ್ತಾಯ, 3) ಸರ್ಕಾರದ ಎಲ್ಲ ಸಿ ಎಸ್ ಆರ್ ನಿಧಿಯನ್ಜು ಸರ್ಕಾರಿ ಶಾಲೆಗಳ ಸಬಲೀಕರಣಕ್ಕೆ ಬಳಸಿಕೊಳ್ಳಬೇಕೆಂದು ಹಾಗೂ ಕರ್ನಾಟಕ ಲಾಂಛನದಲ್ಲಿ “ಕನ್ನಡನಾಡು” ಬರಬೇಕೆಂದು ಮಾಜಿ ರಾಜ್ಯ ಸಭಾ ಸದಸ್ಯರಾದ ಡಾ: ಎಲ್ ಹನುಮಂತಯ್ಯ ಒತ್ತಾಯಿಸಿದರು.ಕನ್ನಡಮೊದಲು ಬಳಗದ ಅಧ್ಯಕ್ಷರಾದ ಜ್ಞಾನೇಶ್ವರ ಎಂ., 8ವರ್ಷದ ಅಧ್ಯಯನದ ಸಮಗ್ರ ಕನ್ನಡ ಪರಿಸರ ನಿರ್ಮಾಣ ವರದಿಯ ಅಡಿಯಲ್ಲಿ ಕನ್ನಡ ಭಾಷ ಕೌಶಲ್ಯ ಆನ್ ಲೈನ್ ಪರೀಕ್ಷೆ , ಕರ್ನಾಟಕ ಲಾಂಛನದಲ್ಲಿ “ಕನ್ನಡನಾಡು” ಬಳಕೆ, ಸಮಗ್ರ ಕನ್ನಡ ಅಭಿವೃದ್ಧಿ ಅಧಿನಿಯಮ ತಿದ್ದುಪಡಿ ವರದಿ, ನಮ್ಮ ಶಾಲೆ ನನ್ನ ಕೊಡುಗೆ (ಜ್ಞಾನ ಕಮ್ಮಟ) ಈ ವರದಿಯನ್ನು ಪ್ರಸ್ತುತಪಡಿಸಿದರು,ಸಭೆಯಲ್ಲಿ ಕನ್ನಡ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ: ಎನ್ ಎಲ್ ಮುಕುಂದರಾಜ್, ಮಾಜಿ ಸಚಿವರಾದ ಬಿ ಟಿ ಲಲಿತಾನಾಯಕ್, ಕನ್ನಡಪರ ಹೋರಾಟಗಾರ ನೇ.ಭ . ರಾಮಲಿಂಗಶೆಟ್ಟಿ, ಪಾಲನೇತ್ರ, ಕೆನಾಲಿ ಗೌಡ, ಶ್ರೀರಾಜ್, ಶಶಿಕುಮಾರ್, ಸಾರಿಕ, ವಾಣಿ, ಗಿರೀಶ್ ಜಯರಾಂ ಪಾಲ್ಗೊಂಡಿದ್ದರು.



