ಬೆಂಗಳೂರು: ಮಹತ್ವದ ಬೆಳವಣಿಗೆಯಲ್ಲಿ ಮಾಜಿ ಮುಖ್ಯಮಂತ್ರಿ ಬಿಜೆಪಿ ಹಿರಿಯ ರಾಜ್ಯಮುಖಂಡ ಡಿ.ವಿ. ಸದಾನಂದಗೌಡ ಅವರು ದೆಹಲಿಗೆ ತೆರಳಿದ್ದಾರೆ. ನಿನ್ನೆ ಅವರ ವಿರುದ್ಧ ಕೇಳಿ ಬಂದ ಆಡಿಯೋ ಪ್ರಕರಣ ಸಂಬಂಧ ವರಿಷ್ಠರಿಗೆ ವಿವರ ನೀಡಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ನಿನ್ನೆ ಮಾಧ್ಯಮಗಳಲ್ಲಿ ವರದಿಯಾದ ಆಡಿಯೋನಲ್ಲಿ ಸದಾನಂದಗೌಡ ಅವರು ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಅವರನ್ನು ಸ್ಥಾನಪಲ್ಲಟಗೊಳಿಸಲು ದೆಹಲಿ ನಾಯಕರೊಬ್ಬರ ಜತೆ ಮಾತನಾಡಿದ್ದರ ಬಗ್ಗೆ ಕೇಳಿಬಂದಿತ್ತು. ಸದಾನಂದಗೌಡ ಅವರು ಆ ಆಡಿಯೋ ತಮ್ಮದಲ್ಲ. ಯಾವುದೇ ವರದಿ ನೀಡಲು ನಿರಾಕರಿಸಿದ್ದರು. ಇದರ ಬೆನ್ನಲ್ಲೇ ಏಕಾಏಕಿ ಅವರು ದೆಹಲಿಗೆ ತೆರಳಿರುವುದು ಪಕ್ಷದ ವಲಯದಲ್ಲಿ ತೀವ್ರ ಕುತೂಲಹಕ್ಕೆ ಎಡೆಮಾಡಿಕೊಟ್ಟಿದೆ.
ಇದುವರೆಗೂ ದೆಹಲಿಯಲ್ಲಿ ಯಾವುದೇ ವರಿಷ್ಠರನ್ನಉ ಅವರನ್ನು ಭೇಟಿ ಮಾಡಲಾಗಿಲ್ಲ ಎಂದು ತಿಳಿದುಬಂದಿದೆ. ವಿಜಯೇಂದ್ರ ಅವರು ಕಾರ್ಯಾವೈಖರಿ ಬಗ್ಗೆ ಪಕ್ಷದ ಕೆಲವರು ಹಿರಿಯೊಂದಿಗೆ ತಮ್ಮ ಅಸಮಾಧಾನ ಹಂಚಿಕೊಂಡಿದ್ದ ಸದಾನಂದಗೌಡ ಈ ಬಗ್ಗೆ ವರಿಷ್ಠರಿಗೂ ವಿವರ ನೀಡಿ ತಮ್ಮ ನಿಲುವಿನ ಬಗ್ಗೆ ಸ್ಪಷ್ಟನೆ ನೀಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಒಟ್ಟಾರೆ ವಿಧಾನಪರಿಷತ್ ಚುನಾವಣೆ ನಂತರ ನಡೆದ ಅಡ್ಡಮತದಾನದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಪಕ್ಷದಲ್ಲಿ ಸಾಕಷ್ಟು ವಿದ್ಯಮಾನಗಳು ನಡೆಯುತ್ತಿದ್ದು, ಈ ಬಗ್ಗೆ ವರಿಷ್ಠರು ಕೈಗೊಳ್ಳುವ ನಿರ್ಧಾರದ ಬಗ್ಗೆ ಎಲ್ಲರ ಗಮನ ಹರಿದಿದೆ. ಈಗಾಗಲೇ ಅಡ್ಡಮತದಾನದ ಸಂಬಂಧ ರಚನೆಯಾಗಿದ್ದ ಸತ್ಯಶೋಧನ ಸಮಿತಿ ವರದಿಯನ್ನು ನೀಡಿದ್ದು ಆ ವರದಿಯನ್ನು ಸಹ ಪಕ್ಷದ ರಾಷ್ಟ್ರೀಯ ವರಿಷ್ಠರಿಗೆ ರಾಜ್ಯಘಟಕದ ವತಿಯಿಂದ ರವಾನೆ ಮಾಡಲಾಗಿದೆ. ಈ ವರದಿಯ ಹಿನ್ನೆಲೆಯಲ್ಲಿ ಪಕ್ಷ ಯಾವ ತೀರ್ಮಾನ ಕೈಗೊಳ್ಳುತ್ತದೆ ಎಂದು ಕಾರ್ಯಕರ್ತರು ಎದುರು ನೋಡುತ್ತಿದ್ದಾರೆ. ಮುಂದಿನ ಚುನಾವಣೆಗೆ ಪಕ್ಷವನ್ನು ಸದೃಢಗೊಳಿಸಬೇಕು ಎಂದು ಮುಂದಾಗಿರುವ ರಾಷ್ಟ್ರೀಯ ನಾಯಕರು ಕರ್ನಾಟಕ ರಾಜ್ಯ ಘಟಕದಲ್ಲಿ ನಡೆಯುತ್ತಿರುವ ಘಟನಾವಳಿಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದು, ಯಾವ ನಿರ್ಧಾರಗಳನ್ನು ಕೈಗೊಳ್ಳುತ್ತಾರೆ ಎಂಬುದು ಎಲ್ಲರ ನಿರೀಕ್ಷೆಗೆ ಎಡೆಮಾಡಿಕೊಟ್ಟಿದೆ.
ಬಿಜೆಪಿಯಲ್ಲಿ ತಳಮಳ ಆಡಿಯೋ ಬಗ್ಗೆ ವಿವರ ನೀಡಲು ದೆಹಲಿಗೆ ಡಿವಿಎಸ್



