ಅಹಮದಾಬಾದ್: ಪ್ರತಿಷ್ಠಿತ ಎವಿಸಿ Asian ಪುರುಷರ ಕಪ್ 2026 ರಲ್ಲಿ ಭಾರತೀಯ ಪುರುಷರ ವಾಲಿಬಾಲ್ ತಂಡವು ಅದ್ಭುತ ಪ್ರದರ್ಶನ ನೀಡುವ ಮೂಲಕ ಇಡೀ ಕ್ರೀಡಾಲೋಕವೇ ತಿರುಗಿ ನೋಡುವಂತಹ ಐತಿಹಾಸಿಕ ಸಾಧನೆ ಮಾಡಿದೆ. ಟೂರ್ನಿಯಲ್ಲಿ ಅತ್ಯಂತ ರೋಚಕವಾಗಿದ್ದ ಮೂರನೇ ಸ್ಥಾನದ ಪಂದ್ಯದಲ್ಲಿ ಭಾರತ ತಂಡವು ಕಂಚಿನ ಪದಕವನ್ನು ಗೆದ್ದು ಇತಿಹಾಸ ನಿರ್ಮಿಸಿದೆ.
ಗುಜರಾತ್ನ ಅಹಮದಾಬಾದ್ನಲ್ಲಿರುವ ವೀರ್ ಸಾವರ್ಕರ್ ಕ್ರೀಡಾ ಸಂಕೀರ್ಣದಲ್ಲಿ ನಡೆದ ನಡೆದ ಮೂರನೇ ಸ್ಥಾನಕ್ಕೆ ನಡೆದ ಪಂದ್ಯದಲ್ಲಿ ಬಹ್ರೇನ್ತಂಡದ ವಿರುದ್ಧ 3-1 (25-23, 23-25, 25-21, 25-17) ಸೆಟ್ಗಳ ಅಂತರದಲ್ಲಿ ಭರ್ಜರಿ ಜಯ ಸಾಧಿಸಿ ಐತಿಹಾಸಿಕ ಕಂಚಿನ ಪದಕವನ್ನು ಗೆದ್ದುಕೊಂಡಿದೆ.
ಸೆಮಿಫೈನಲ್ನಲ್ಲಿ ಇಂಡೋನೇಷ್ಯಾ ವಿರುದ್ಧ ಅತ್ಯಂತ ರೋಚಕ ಹೋರಾಟ ನಡೆಸಿ (2-3) ಸೋತಿದ್ದ ಭಾರತ ತಂಡ, ಮೂರನೇ ಸ್ಥಾನಕ್ಕಾಗಿ ನಡೆದ ಪಂದ್ಯದಲ್ಲಿ ಅತ್ಯುತ್ತಮವಾಗಿ ಆಡುವ ಮೂಲಕ ಕಂಚಿನ ಪದಕವನ್ನು ಮುಡಿಗೇರಿಸಿಕೊಂಡಿತು.
ವಾಲಿಬಾಲ್ನಲ್ಲಿ ಐತಿಹಾಸಿಕ ಸಾಧನೆ- ಕಂಚಿನ ಪದಕ ಗೆದ್ದ ಭಾರತ



