ಬೆಂಗಳೂರು: ನಾಳೆಯಿಂದ ಮತದಾರ ಪಟ್ಟಿಯ ವಿಶೇಷ ಪರಿಷ್ಕರಣೆಯನ್ನು ಮಾಡಲು ರಾಜ್ಯ ಚುನಾವಣಾ ಆಯೋಗ ಮುಂದಾಗಿದೆ. ಇದಕ್ಕಾಗಿ ಸಕಲ ಸಿದ್ದತೆಗಳನ್ನು ನಡೆಸಿದೆ. ನಾಳೆಯಿಂದ ಆರಂಭವಾಗುವ ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಜುಲೈ 29ರವರೆಗೂ ನಡೆಯಲಿದೆ. ಆಗಸ್ಟ್ 5ಕ್ಕೆ ಅಂತಿಮ ಮತದಾನದ ಕರಡುಪಟ್ಟಿ ಸಿದ್ದವಾಗಲಿದ್ದು ಅಕ್ಟೋಬರ್ 7ಕ್ಕೆ ಅಂತಿಮ ಮತದಾರರ ಪಟ್ಟಿ ಪ್ರಕಟಿಸಲಾಗುವುದು. ಹೊಸದಾಗಿ ಮತದಾರರ ಪಟ್ಟಿಗೆ ಹೆಸರು ನೊಂದಾಯಿಸುವವರು ಫಾರಂ-6ರಲ್ಲಿ ನಮೂದಿಸಬೇಕಾಗಿದೆ. ತಿದ್ದುಪಡಿ ಏನಾದರೂ ಇದ್ದರೆ ಫಾರಂ-8ರಲ್ಲಿ ನಮೂದಿಸಬೇಕು. ಈಗಾಗಲೇ ಪ್ರಮುಖ ರಾಜಕೀಯ ಪಕ್ಷಗಳಾದ ಕಾಂಗ್ರೆಸ್ ಬಿಜೆಪಿ ಮತದಾರರ ಪಟ್ಟಿ ಪರಿಷ್ಕರಣೆ ಸಂಬAಧ ತನ್ನ ಕಾರ್ಯಕರ್ತರಿಗೆ ಅರಿವು ಮೂಡಿಸುವ ಕಾರ್ಯಕ್ರಮವನ್ನು ಆಯೋಜಿಸಿದೆ. ಮತದಾರರ ಪಟ್ಟಿಯಲ್ಲಿ ಹೆಸರು ಸೇರಿಸುವ ಸಂಬAಧ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಬಿಜೆಪಿ ಈ ಪರಿಷ್ಕರಣೆ ಕಾರ್ಯವನ್ನು ಸ್ವಾಗತಿಸಿದರೆ, ವಿಪಕ್ಷ ಕಾಂಗ್ರೆಸ್ ಕೇಂದ್ರ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದೆ. ಕಾಂಗ್ರೆಸ್ ಮುಖಂಡರು ಮಾಡುತ್ತಿರುವ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಈಗಾಗಲೇ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಆಗಿರುವ ರಾಜ್ಯಗಳಲ್ಲಿ ಚುನಾವಣೆ ಸಂದರ್ಭದಲ್ಲಿ ಆಗಿರುವ ಘಟನೆಗಳ ಬಗ್ಗೆ ತಿಳಿ ಹೇಳುತ್ತಿದ್ದಾರೆ.ಪಶ್ಚಿಮ ಬಂಗಾಳ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಎಸ್ಐಆರ್ನಿಂದಾಗಿ ಆಗಿರುವ ಘಟನಾವಳಿಗಳನ್ನು ಜನರಿಗೆ ವಿವರಿಸುತ್ತಿದ್ದಾರೆ.ಮತದಾರರ ಬ್ಯಾಂಕನ್ನಾಗಿ ಮಾಡಿಕೊಂಡು ಕಾಂಗ್ರೆಸ್ ಯಾವ ವರ್ತಿಸುತ್ತಿತ್ತು ಎಂಬುದನ್ನು ಬಿಜೆಪಿ ತನ್ನ ಕಾರ್ಯಕರ್ತರಿಗೆ ಹೇಳುತ್ತಿತ್ತು. ಒಟ್ಟಾರೆ ಪ್ರತಿವರ್ಷ ಚುನಾವಣಾ ಆಯೋಗ ಮಾಡುವ ಕಾರ್ಯಕ್ರಮವನ್ನು ವಿಶೇಷ ಮತದಾರ ಪಟ್ಟಿ ಪರಿಷ್ಕರಣೆ ಹೆಸರಿನಲ್ಲಿ ಕೇಂದ್ರ ಸರ್ಕಾರ ತನಗೆ ಬೇಡದವರ ಮತಗಳನ್ನು ಪಟ್ಟಿಯಿಂದ ಕೈಬಿಡುವ ಕೆಲಸಗಳನ್ನು ಮಾಡುತ್ತಿದೆ ಎಂದು ಕಾಂಗ್ರೆಸ್ ಪಾಳಯ ದೂರಿದೆ.
ನಾಳೆಯಿಂದ ಎಸ್ಐಆರ್ ಮತಪಟ್ಟಿ ಪರಿಷ್ಕರಣೆಗೆ ಮನೆಗೆ ಬರಲಿರುವ ಅಧಿಕಾರಿಗಳು



