ಬೆಂಗಳೂರು: ಬಿಡದಿ ಟೌನ್ಶಿಪ್ ವಿಚಾರದಲ್ಲಿ ಮಾಜಿ ಮುಖ್ಯಮಂತ್ರಿ, ಹಾಲಿ ಕೇಂದ್ರ ಸಚಿವ ಹೆಚ್.ಡಿ. ಕುಮಾರಸ್ವಾಮಿ ಅವರ ವಿರುದ್ಧ ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ನ ಶಾಸಕ ಪ್ರದೀಪ್ ಈಶ್ವರ್ ಕೆಂಡ ಉಗುಳುತ್ತಿದ್ದಾರೆ. ಬಿಡದಿ ಟೌನ್ಶಿಪ್ ವಿಚಾರಕ್ಕೆ ಸಂಬAಧಿಸಿದAತೆ ಪ್ರತಿಕ್ರಿಯೆ ಕೊಡುವ ಭರಾಟೆಯಲ್ಲಿ ಶಾಸಕ ಪ್ರದೀಪ್ ಈಶ್ವರ್, ಕುಮಾರಸ್ವಾಮಿ ಅವರ ವಿರುದ್ಧ ವಾಚ್ ಹಗರಣ ಸೇರಿದಂತೆ, ಇಷ್ಟು ಆಸ್ತಿ ಬಂದಿರುವುದು ಹೇಗೆ? ಎಂಬ ಪ್ರಶ್ನೆಗಳನ್ನು ಹಾಕುತ್ತಾ, ಚಿಕ್ಕಬಳ್ಳಾಪುರ ಆಖಾಡದಲ್ಲಿ ಬಂದು ಸ್ಫರ್ಧಿಸಿ ಗೆಲ್ಲುವುದು ನೀವಾ? ನಾನಾ? ನೋಡಿಯೇ ಬಿಡೋಣ ಎಂದು ತೋಳು ತಟ್ಟಿ ಮೀಸೆ ತಿರುವಿದಿದ್ದಾರೆ. ಈಗ ರಾಜ್ಯ ರಾಜಕಾರಣದಲ್ಲಿ ಕುಮಾರಸ್ವಾಮಿ v/s ಪ್ರದೀಪ್ ಈಶ್ವರ್ ಆಖಾಡ ನಿರ್ಮಾಣವಾಗಿದ್ದು, ಹೇಳಿಕೆಗೆ ಪ್ರತಿ ಹೇಳಿಕೆಗಳು ರಾಜಕೀಯದಲ್ಲಿ ಚಟುವಟಿಕೆಗಳನ್ನು ಹುಟ್ಟು ಹಾಕಿದೆ. ಅಷ್ಟಕ್ಕೂ ಪ್ರದೀಪ್ ಈಶ್ವರ್ v/s ಕುಮಾರಸ್ವಾಮಿ ಆಖಾಡ ನಿರ್ಮಾಣವಾಗಿದ್ದೇ ಕುತೂಹಲವನ್ನು ಹುಟ್ಟು ಹಾಕಿದೆ.ಹಾಲಿ ಸಿಎಂ ಡಿಕೆಶಿ ಬಿಡದಿ ಟೌನ್ಶಿಪ್ ವಿಚಾರಕ್ಕೆ ಸಂಬAಧಿಸಿದAತೆ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಚರ್ಚೆಗೆ ಬರುವಂತೆ ಪಂಥಾಹ್ವಾನ ನೀಡಿದ್ರು. ಜೂನ್ 26 ರಂದು ವಿಧಾನಸೌಧಕ್ಕೆ ಬನ್ನಿ. ನೀವು ನಿಮ್ಮ ಬಳಿಯಿರುವ ದಾಖಲೆಗಳ ಸಮೇತ 5 ಜನ ಸದಸ್ಯರ ನಿಯೋಗದೊಂದಿಗೆ ಬನ್ನಿ ಎಂದು ಪತ್ರ ಬರೆದಿದ್ರು. ಪತ್ರಕ್ಕೆ ಉತ್ತರವನ್ನು ಕೊಟ್ಟಿದ್ದ ಕುಮಾರಸ್ವಾಮಿ, ಜೂನ್ 26 ರ ಬದಲಿಗೆ 27 ರಂದು ಚರ್ಚೆಗೆ ನಾನು ಸಿದ್ಧ. ಅಷ್ಟು ಮಾತ್ರವಲ್ಲದೆ, ವಿಧಾನಸೌಧದ ಬದಲಿಗೆ ಬಿಡದಿಯ ಟೌನ್ಶಿಪ್ ವಿರೋಧಿಸಿ ಆಗುತ್ತಿರುವ ಪ್ರತಿಭಟನೆಯ ವೇದಿಕೆಗೆ ಬನ್ನಿ ಎಂದಿದ್ರು. ನಾಡಪ್ರಭು ಕೆಂಪೇಗೌಡರ ಜಯಂತಿಯ ದಿವಸ ಸಿಎಂ ಡಿಕೆಶಿ ಅವರನ್ನು ಕಟ್ಟಿ ಹಾಕುವ ಪ್ಲಾನ್ ಮಾಡಿಕೊಂಡಿದ್ದ ಕುಮಾರಸ್ವಾಮಿಗೆ ಪ್ಲಾನ್ ಫಲಪ್ರದವಾಗಲಿಲ್ಲ.
ರಾಜಕೀಯ ಆಖಾಡದಲ್ಲಿ ಹೆಚ್ಡಿಕೆ v/s ಪ್ರದೀಪ್ ಈಶ್ವರ್!



