ಬೆಂಗಳೂರು: ಬಿಎಂಟಿಸಿ ಬಸ್ಸುಗಳ ಲಭ್ಯತೆ, ಕೊರತೆ, ಪ್ರಯಾಣಿಕರ ಸಮಸ್ಯೆಗಳನ್ನು ಸಂಸದ ತೇಜಸ್ವಿ ಸೂರ್ಯ ಅವರು ಆಲಿಸಿದ್ದಾರೆ.
ಶಾಂತಿನಗರ ಬಿಎಂಟಿಸಿ ಬಸ್ ನಿಲ್ದಾಣಕ್ಕೆ ಭೇಟಿ ನೀಡಿದ್ದ ಅವರು, ಸರಿಯಾದ ಸಮಯಕ್ಕೆ ಬಸ್ಸುಗಳು ಬರುತ್ತಿದೆಯೇ, ಇಲ್ಲವೇ ಎಂದು ಪರಿಶೀಲನೆ ನಡೆಸಿ, ಖುದ್ದು ಪ್ರಯಾಣಿಕರಿಂದಲೇ ಸಮಸ್ಯೆ ಬಗ್ಗೆ ಮಾಹಿತಿ ಪಡೆದರು. ಈ ವೇಳೆ ಸಮಯಕ್ಕೆ ಸರಿಯಾಗಿ ಸಿಗದ ಬಸ್ಸುಗಳ ಬಗ್ಗೆ ತೇಜಸ್ವಿ ಬಳಿ ದೂರು ಹೇಳಿಕೊಂಡ ಮಹಿಳಾ ಪ್ರಯಾಣಿಕರು.
ಬಿಎಂಟಿಸಿ ಬಸ್ಸುಗಳ ಲಭ್ಯತೆ, ಕೊರತೆ, ಪ್ರಯಾಣಿಕರ ಸಮಸ್ಯೆಗಳನ್ನು ಆಲಿಸಿದ ಸಂಸದ ತೇಜಸ್ವಿ ಸೂರ್ಯ



