ಫಿಫಾ ವಿಶ್ವಕಪ್ನ ಮೊದಲ ಸುತ್ತಿನ ಪಂದ್ಯಗಳು ಮುಗಿದು, ಇದೀಗ ನಾಕೌಟ್ ರೌಂಡ್ ಶುರುವಾಗಿದೆ. ಈ ಸುತ್ತಿನಲ್ಲಿ ಒಟ್ಟು 32 ತಂಡಗಳು ಕಣಕ್ಕಿಳಿಯಲಿವೆ. ಈ ತಂಡಗಳನ್ನು ಪೂರ್ವ ನಿಗದಿಯಂತೆ ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಅಂದರೆ 16 ತಂಡಗಳು ಒಂದೇ ಹಾದಿಯಲ್ಲಿ ಕಣಕ್ಕಿಳಿದರೆ, ಮತ್ತೆ ಹದಿನಾರು ತಂಡಗಳು ಇನ್ನೊಂದು ಹಾದಿಯಲ್ಲಿ ಸಾಗಲಿವೆ. ಇದರ ಬೆನ್ನಲ್ಲೇ ಅರ್ಜೆಂಟೀನಾ ತಂಡದ ನಾಕೌಟ್ ಹಾದಿ ಚರ್ಚೆಗೆ ಕಾರಣವಾಗಿದೆ.ಅರ್ಜೆಂಟೀನಾ ಹಾದಿ: ಈ ಬಾರಿಯ ವಿಶ್ವಕಪ್ನಲ್ಲಿ ಒಟ್ಟು 48 ತಂಡಗಳು ಕಣಕ್ಕಿಳಿದಿದ್ದವು. ಈ ತಂಡಗಳಲ್ಲಿ ಈಗ 32 ಟೀಮ್ಗಳು ರೌಂಡ್ ಆಫ್ 32 ಅಥವಾ ನಾಕೌಟ್ ಹಂತಕ್ಕೇರಿದೆ. ನಾಕೌಟ್ ಹಂತದ ಬ್ರಾಕೆಟ್ ಅನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಇದರಲ್ಲಿ ಅರ್ಜೆಂಟೀನಾ ಇರುವ ಬದಿಯಲ್ಲಿ ಸಾಂಪ್ರದಾಯಿಕ ಫುಟ್ಬಾಲ್ ದೈತ್ಯರ ಸಂಖ್ಯೆ ತೀರಾ ಕಡಿಮೆ.ರೌಂಡ್ ಆಫ್ 32 ಹಂತದಲ್ಲಿ ಅರ್ಜೆಂಟೀನಾ ಜುಲೈ 3 ರಂದು ಮಿಯಾಮಿಯಲ್ಲಿ ಕೇಪ್ ವರ್ಡೆ ತಂಡವನ್ನು ಎದುರಿಸಲಿದೆ. ಆ ಬಳಿಕ ರೌಂಡ್ ಆಫ್ 16ರಲ್ಲಿ ಆಸ್ಟ್ರೇಲಿಯಾ ಅಥವಾ ಈಜಿಪ್ಟ್ ಎದುರಾಗಬಹುದು. ಕ್ವಾರ್ಟರ್ ಫೈನಲ್ನಲ್ಲಿ ಕೊಲಂಬಿಯಾ ಅಥವಾ ಸ್ವಿಟ್ಜರ್ಲೆಂಡ್ ವಿರುದ್ಧ ಕಣಕ್ಕಿಳಿಯಲಿದೆ. ಅಂದರೆ ಸೆಮಿಫೈನಲ್ವರೆಗೆ ಅರ್ಜೆಂಟೀನಾ ಹಾದಿ ನಿರಾಳ.ಇನ್ನು ಸೆಮಿಫೈನಲ್ಗೇರಿದರೆ ಬ್ರೆಝಿಲ್ ಅಥವಾ ಇಂಗ್ಲೆಂಡ್ ತಂಡಗಳು ಎದುರಾಳಿಗಳಾಗಿ ಸಿಗಲಿದೆ. ಅಲ್ಲಿಯವರೆಗೆ ಯಾವುದೇ ಮಾಜಿ ವಿಶ್ವ ಚಾಂಪಿಯನ್ನರು ಮೆಸ್ಸಿ ಪಡೆಗೆ ಅಡ್ಡಬರುವುದಿಲ್ಲ ಎಂಬುದೇ ಅಚ್ಚರಿ.ರತ್ನಗಂಬಳಿ: ವಿಶ್ವದ ನಂಬರ್ 1 ರ್ಯಾಂಕಿಂಗ್ ಹೊಂದಿರುವ ಅರ್ಜೆಂಟೀನಾ ತಂಡವು ಸೆಮಿಫೈನಲ್ವರೆಗೆ ಯಾವುದೇ ಬಲಿಷ್ಠ ತಂಡವನ್ನು ಎದುರಿಸುತ್ತಿಲ್ಲ. ಬದಲಾಗಿ ತನಗಿಂತ ದುರ್ಬಲ ತಂಡಗಳ ವಿರುದ್ಧವೇ ಕಣಕ್ಕಿಳಿಯಲಿದೆ. ಇದಕ್ಕೆ ಸಾಕ್ಷಿ ಅರ್ಜೆಂಟೀನಾ ಎದುರಾಳಿಗಳ ಪ್ರಸ್ತುತ ಫಿಫಾ ರ್ಯಾಂಕಿಂಗ್.
ಕೇಪ್ ವರ್ಡೆ: 67ನೇ ರ್ಯಾಂಕ್ ತಂಡ (32ನೇ ಸುತ್ತಿನಲ್ಲಿ)
ಈಜಿಪ್ಟ್: 26ನೇ ರ್ಯಾಂಕ್ ತಂಡ (16ನೇ ಸುತ್ತಿನಲ್ಲಿ) oಡಿ
ಆಸ್ಟ್ರೇಲಿಯಾ: 28ನೇ ರ್ಯಾಂಕ್ ತಂಡ (16ನೇ ಸುತ್ತಿನಲ್ಲಿ)
ಕೊಲಂಬಿಯಾ: 11ನೇ ರ್ಯಾಂಕ್ ತಂಡ (ಕ್ವಾರ್ಟರ್ ಫೈನಲ್ನಲ್ಲಿ) oಡಿ
ಸ್ವಿಟ್ಜರ್ಲೆಂಡ್: 16ನೇ ರ್ಯಾಂಕ್ ತಂಡ (ಕ್ವಾರ್ಟರ್ ಫೈನಲ್ನಲ್ಲಿ)
ಇಂಗ್ಲೆAಡ್: 4ನೇ ನೇ ರ್ಯಾಂಕ್ ತಂಡ (ಸೆಮಿಫೈನಲ್ನಲ್ಲಿ) oಡಿ
ಬ್ರೆಝಿಲ್: 5ನೇ ರ್ಯಾಂಕ್ ï ತಂಡ (ಸೆಮಿಫೈನಲ್ನಲ್ಲಿ)
ಅಂದರೆ ಅರ್ಜೆಂಟೀನಾ ತಂಡವು ಫಿಫಾ ವಿಶ್ವಕಪ್ನಲ್ಲಿ ಟಾಪ್-10 ನಲ್ಲಿ ಕಾಣಿಸಿಕೊಂಡಿರುವ ತಂಡವನ್ನು ಎದುರಿಸುವುದು ಸೆಮಿಫೈನಲ್ನಲ್ಲಿ ಮಾತ್ರ. ಅದುವರೆಗೆ ದುರ್ಬಲ ತಂಡಗಳ ವಿರುದ್ಧವೇ ಕಣಕ್ಕಿಳಿಯಲಿವೆ. ಹೀಗಾಗಿಯೇ ಈ ಬಾರಿ ಅರ್ಜೆಂಟೀನಾ ಪಡೆ ಸೆಮಿಫೈನಲ್ಗೇರುವುದು ಖಚಿತ ಎನ್ನಲಾಗುತ್ತಿ
ಮೆಸ್ಸಿ ಪಡೆಗೆ ರತ್ನಗಂಬಳಿ: ಅರ್ಜೆಂಟೀನಾ ಫೈನಲ್ ಹಾದಿ ಸುಲಭ!



