ಧಾರವಾಡ: ಹೆಂಡತಿ ದಪ್ಪಗಿದ್ದಾಳೆ ಎಂಬ ಕ್ಷುಲ್ಲಕ ಕಾರಣಕ್ಕೆ ಪತ್ನಿಯನ್ನೇ ಪತಿ ಕತ್ತು ಹಿಸುಕಿ ಕೊಲೆ ಮಾಡಿರುವ ಭೀಕರ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಹಣಸಿ ಗ್ರಾಮದಲ್ಲಿ ಈ ಅಮಾನವೀಯ ಕೃತ್ಯ ನಡೆದಿದೆ. ಪ್ರಿಯಾಂಕಾ ಕಮಲಾಕರ್ (29) ಕೊಲೆಯಾದ ದುರ್ದೈವಿ ಮಹಿಳೆ. ಪತ್ನಿಯನ್ನೇ ಯಮನ ಲೋಕಕ್ಕೆ ಕಳುಹಿಸಿದ ಪಾಪಿ ಪತಿಯನ್ನು ಬಸವರಾಜ್ ವಡ್ಡಾರ್. ಆರೋಪಿ ಬಸವರಾಜ್ ವಡ್ಡಾರ್ ತನ್ನ ಪತ್ನಿ ಪ್ರಿಯಾಂಕಾ ದಪ್ಪಗಿದ್ದಾಳೆ ಎಂಬ ಕಾರಣಕ್ಕೆ ದಿನನಿತ್ಯ ಜಗಳ ತೆಗೆಯುತ್ತಿದ್ದ ಎನ್ನಲಾಗಿದೆ. ಘಟನೆ ನಡೆದ ದಿನ ಕೇವಲ ತಾನೊಬ್ಬನೇ ಅಲ್ಲದೆ, ಇನ್ನೂ ಮೂವರ ಜೊತೆ ಸೇರಿಕೊಂಡು ಕ್ರೂರವಾಗಿ ಪತ್ನಿಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಮಾಹಿತಿಯ ಪ್ರಕಾರ, ಬಸವರಾಜ್ ಹಾಗೂ ಪ್ರಿಯಾಂಕಾ ಅವರ ವಿವಾಹವು 2014ರಲ್ಲಿ ನಡೆದಿತ್ತು.



