ಬೆಂಗಳೂರು ಜಯನಗರ 5ನೇ ಬ್ಲಾಕ್ ನಲ್ಲಿರುವ ಪ್ರಸಿದ್ಧ ನಂಜನಗೂಡಿನ ಶ್ರೀ ರಾಘವೇಂದ್ರ ಸ್ವಾಮಿ ಮಠದ ಸಭಾಂಗಣದಲ್ಲಿ, ಇಂದು ಸಂಜೆ ಪತ್ರಿಕೆಯ ವ್ಯವಸ್ಥಾಪಕ ಸಂಪಾದಕರಾದ, ಡಾ.ಜಿ. ವೈ.ಪದ್ಮಾ ನಾಗರಾಜ್ ರವರ ನೇತೃತ್ವದಲ್ಲಿ ಹಾಗೂ ಇವರ ಗುರುಗಳಾದ ಡಾ.ತ್ರಿಪುರ ಸುಂದರಿ ಮತ್ತು ವೃಂದ ದವರಾದ ವೀಣಾ ರಾವ್, ಶೀತಲ್, ಜಾನ್ಹವಿ ಇವರುಗಳಿಂದ ಸುಮಧುರ ಭಕ್ತಿ ಕೀರ್ತನೆಗಳನ್ನು ಪಂಚವೀಣಾ ವಾದನ ಮೂಲಕ ನುಡಿಸಿದರು. ಪಕ್ಕ ವಾದ್ಯದಲ್ಲಿ ಮೃದಂಗ ವಿದ್ವಾನ್ ಮುರುಳಿ ನಾರಾಯಣ ರಾವ್, ಘಟಂ ವಿದ್ವಾನ್ ಯಶವಂತ್ ಇವರುಗಳ ವಾದ್ಯ ಮಧುರ ಸಂಗೀತವನ್ನು ಆಲಿಸಿ, ಜನ ಸಮೂಹ ಮಚ್ಚಿಗೆ ವ್ಯಕ್ತ ಪಡಿಸಿದರು, ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವ ವಿದ್ಯಾಲಯ ಪ್ರೊ. ಸಮತಾ ಬಿ. ದೇಶಮಾನೆ, ಬೆಂಗಳೂರು ಪ್ರೆಸ್ ಕ್ಲಬ್ ನ ಸಮಿತಿ ಸದಸ್ಯರು, ದಿ ಹಿಂದೂ ಆಂಗ್ಲ ಪತ್ರಿಕೆಯ ಸಹಸಂಪಾದಕರಾದ ಮಿನಿ ತೇಜಸ್ವಿ ಹಾಗೂ ಶ್ರೀ ನಟರಾಜ ರಾಜ್ಯ ಬಲಿಜ ಕಲಾ ಸಂಗಮದ ಸಹಕಾರ್ಯದರ್ಶಿ ಜಿ. ಧನಶೇಖರ್ ಪಾಲ್ಗೊಂಡಿದ್ದರು, ಶ್ರೀರಾಘವೇಂದ್ರ ಸ್ವಾಮಿ ಮಠದ ಮುಖ್ಯ ಆಡಳಿತ ಮಂಡಳಿಯವರು ಸಂಗೀತ ಕಲಾವಿದರುಗಳನ್ನು ಅಭಿನಂದಿಸಿ ಸನ್ಮಾನಿಸಿದರು.
ಚಿತ್ರ: ಜಿ.ಎಲ್. ಸಂಪಂಗಿ ರಾಮುಲು
ಡಾ. ಬಾಲ ತ್ರಿಪುರ ಸುಂದರಿ ಮತ್ತು ಡಾ.ವೈ.ಪದ್ಮ ನಾಗರಾಜ್ ವೃಂದದವರಿಂದ ಅದ್ಧೂರಿಯಾಗಿ ಜರುಗಿದ ಪಂಚವೀಣಾ ವಾದನ ವಿಶೇಷ ಸಂಗೀತ ಕಾರ್ಯಕ್ರಮ



