ಟಿ.ನರಸೀಪುರ: ಬನ್ನೂರು ಹೋಬಳಿಯ ಕೊಡಗಳ್ಳಿಯಲ್ಲಿ ಇದಾಯತ್ ಉಲ್ಲಾ ಬಿನ್ ಶೇಕ್ ಹೈದೆರ್ ಹುಸೇನ್ ರವರ ತೋಟದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 602 ಬ್ಯಾಗ್ ಯೂರಿಯಾ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕಿ ರೂಪ ರವರ ನೇತೃತ್ವದಲ್ಲಿ ಕಾರ್ಯಾಚರಣೆ ಮಾಡಿ ವಶಕ್ಕೆ ಪಡೆದ ಘಟನೆ ನಡೆದಿದೆ.
ತಾಲ್ಲೂಕಿನ ಬನ್ನೂರು ಹೋಬಳಿಯ ಕೊಡಗಳ್ಳಿ ಗ್ರಾಮದಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ಯೂರಿಯಾದ ವಿಷಯವಾಗಿ ತಾಲೂಕು ಸಹಾಯಕ ಕೃಷಿ ನಿರ್ದೇಶಕಿ ರೂಪ ರವರಿಗೆ ಬಂದ ಖಚಿತ ಮಾಹಿತಿ ಮೇರೆಗೆ ಕೊಡಗಹಳ್ಳಿ ಗ್ರಾಮದ ಇದಾಯತ್ ಉಲ್ಲಾ ಬಿನ್ ಶೇಕ್ ಹೈದೆರ್ ಹುಸೇನ್ ರವರ ತೋಟದಲ್ಲಿ ಅಕ್ರಮವಾಗಿ ದಾಸ್ತಾನು ಮಾಡಲಾಗಿದ್ದ ಸುಮಾರು 602 ಬ್ಯಾಗ್ ಯೂರಿಯಾವನ್ನು ಕೃಷಿ ಬಳಕೆಗೆ ಮೀಸಲಿಟ್ಟಿದ್ದ ಯೂರಿಯಾ ರಸಗೊಬ್ಬರವನ್ನು ವಶಪಡಿಸಿಕೊಳ್ಳಲಾಗಿದೆ. ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದಾಳಿ ವೇಳೆ ಸಹಾಯಕ ಕೃಷಿ ನಿರ್ದೇಶಕರು, ಟಿ ನರಸೀಪುರ ಶ್ರೀಮತಿ ರೂಪ , ಕೃಷಿ ಅಧಿಕಾರಿ ಬನ್ನೂರು ಹೋಬಳಿ ವಿಶಾಲೂ, ಉಪ ಕೃಷಿ ನಿರ್ದೇಶಕರು ಮೈಸೂರು ರಾಜು, ಜಾರಿದಳ ಜಂಟಿ ಕೃಷಿ ನಿರ್ದೇಶಕರು ರಾಮಕೃಷ್ಣ, ಉಪ ಕೃಷಿ ನಿರ್ದೇಶಕರು ಮಮತಾ, ಸಹಾಯಕ ಕೃಷಿ ನಿರ್ದೇಶಕರು ಸತೀಶ್, ಸಹಾಯಕ ತಾoತ್ರಿಕ ವ್ಯವಸ್ಥಾಪಕರು ಶಿವರಾಮು ಹಾಜರಿದ್ದರು.
ತೋಟದ ಮನೆಯೊಂದರ ಮೇಲೆ ಕೃಷಿ ಇಲಾಖೆ ಅಧಿಕಾರಿಗಳಿಂದ ದಿಢೀರ್ ದಾಳಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 602 ಬ್ಯಾಗ್ ಯೂರಿಯಾ ವಶ



