ಹೈದರಾಬಾದ್: ಅಭಿಷೇಕ ಶರ್ಮಾ ಅಬ್ಬರದ ಶತಕ, ಮಾಲಿಂಗ ಬೌಲಿಂಗ್ ನೆರವಿನಿಂದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸನ್ ರೈಸರ್ಸ್ ಹೈದರಾಬಾದ್ ತಂಡ 47 ರನ್ಗಳ ಭರ್ಜರಿ ಜಯಗಳಿಸಿದೆ.
10ನೇ ಓವರ್ನ 3ನೇ ಎಸೆತದ ವೇಳೆಗೆ 100 ರನ್ಗಳ ಗಡಿ ದಾಟಿದ್ದ ಡೆಲ್ಲಿ ಕ್ಯಾಪಿಟಲ್ಸ್ ತಂಡ 1 ವಿಕೆಟ್ ಕಳೆದುಕೊಂಡು ಸುಸ್ಥಿತಿಯಲ್ಲಿತ್ತು. ಬಳಿಕ ಆಕ್ರಮಣಕಾರಿ ಆಟಕ್ಕಿಳಿಯುವ ನಿರೀಕ್ಷೆಯಲ್ಲಿತತ್ತು. ಆದ್ರೆ 10 ಮತ್ತು 11ನೇ ಓವರ್ ಪಂದ್ಯದ ಗತಿಯನ್ನೇ ಬದಲಿಸಿತು. ಬಳಿಕ ಗೆಲುವು ಹೈದರಾಬಾದ್ ತಂಡದತ್ತ ವಾಲಿತು. 10ನೇ ಓವರ್ನ 4ನೇ ಎಸೆತದಲ್ಲಿ ಶಕೀಗ್ ಹುಸೇನ್ ಕೆ.ಎಲ್ ರಾಹುಲ್ ಅವರ ವಿಕೆಟ್ ಪಡೆದು ಉಳಿದ 2 ಎಸೆತಗಳನ್ನ ಡಾಟ್ ಮಾಡಿದರು. ಇನ್ನೂ 11ನೇ ಓವರ್ ಬೌಲಿಂಗ್ ಮಾಡಿದ ಇಶಾನ್ ಮಾಲಿಂಗ ಮೊದಲ ಎಸೆತದಲ್ಲಿ ನಿತೀಶ್ ರಾಣಾ ಹಾಗೂ 2ನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಅವರ ವಿಕೆಟ್ಗಳನ್ನು ಕಿತ್ತು ಪೆವಿಲಿಯನ್ ದಾರಿ ತೋರಿದರು. ಅಲ್ಲದೇ ಆ ಓವರ್ನಲ್ಲಿ ಕೇವಲ 2 ರನ್ ಬಿಟ್ಟುಕೊಟ್ಟರು. ಇಲ್ಲಿಂದೀಚೆಗೆ ಗೆಲುವು ಹೈದರಾಬಾದ್ ತಂಡದತ್ತ ವಾಲಿತು. ಡೇವಿಡ್ ಮಿಲ್ಲರ್ ಕ್ರೀಸ್ನಲ್ಲಿ ಇದ್ದಿದ್ದರೆ, ಫಲಿತಾಂಶ ಬದಲಾಗುವ ನಿರೀಕ್ಷೆಯಿತ್ತು.ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಸನ್ರೈಸರ್ಸ್ ಹೈದರಾಬಾದ್ ತಂಡ ನಿಗದಿತ 20 ಓವರ್ಗಳಲ್ಲಿ 2 ವಿಕೆಟ್ಗಳ ನಷ್ಟಕ್ಕೆ ಭರ್ಜರಿ 242 ರನ್ಗಳ ಗಳಿಸಿತು. ಸವಾಲಿನ ಗುರಿಯನ್ನು ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ 9 ವಿಕೆಟ್ ನಷ್ಟಕ್ಕೆ 195 ರನ್ಗಳಿಸಿ ಸೋಲನುಭವಿಸಿತು.ಚೇಸಿಂಗ್ ಶುರು ಮಾಡಿದ ನಿಸ್ಸಾಂಕಾ ಹಾಗೂ ರಾಹುಲ್ ಉತ್ತಮ ಆರಂಭವನ್ನೇ ನೀಡಿದರು.
ಶತಕ ಸಿಡಿಸಿ ಮೆರೆದಾಡಿದ ಅಭಿ: ಎಸ್.ಆರ್.ಹೆಚ್ 47 ರನ್ಗಳ ಭರ್ಜರಿ ಜಯ



