ಬ್ಲೊಮ್ಫೋಟೀನ್: ಮಧ್ಯಮ ಕ್ರಮಾಂಕದ ಬ್ಯಾಟರ್ ಮುಷೀರ್ ಖಾನ್, 19 ವರ್ಷದೊಳಗಿನವರ ಏಕದಿನ ವಿಶ್ವಕಪ್ ಕ್ರಿಕೆಟ್ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ಮುಂದುವರಿಸಿದ್ದಾರೆ.
ಅವರ ಮತ್ತೊಂದು ಶತಕದ (131) ನೆರವಿನಿಂದ ಭಾರತ ತಂಡ ಮಂಗಳವಾರ ನಡೆದ ಸೂಪರ್ ಸಿಕ್ಸ್ ಹಂತದ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡವನ್ನು 214 ರನ್ಗಳ ದೊಡ್ಡ ಅಂತರದಿಂದ ಸದೆಬಡಿಯಿತು.ಟಾಸ್ ಸೋತಿದ್ದ ಭಾರತ, ಮುಶೀರ್ ಅವರ ಭರ್ಜರಿ ಆಟದ ಜೊತೆಗೆ ಆರಂಭ ಆಟಗಾರ ಆದರ್ಶ್ ಸಿಂಗ್ (52, 58ಎ, 4×6) ಅವರ ಅರ್ಧ ಶತಕದ ನೆರವಿನಿಂದ 9 ವಿಕೆಟ್ಗೆ 295 ರನ್ಗಳ ಉತ್ತಮ ಮೊತ್ತ ಗಳಿಸಿತು.
ನಂತರ ಎಡಗೈ ಸ್ಪಿನ್ನರ್ ಎಡಗೈ ಸ್ಪಿನ್ನರ್ ಸೌಮಿ ಕುಮಾರ್ ಪಾಂಡೆ (10-2-19-4) ಮತ್ತು ವೇಗದ ಬೌಲರ್ ರಾಜ್ ಲಿಂಬಾನಿ (17ಕ್ಕೆ2) ಅವರ ದಾಳಿಗೆ ಸಿಲುಕಿದ ಕಿವೀಸ್ ತಂಡ 29ನೇ ಓವರ್ನಲ್ಲಿ 81 ರನ್ಗಳಿಗೆ ಪತನಗೊಂಡಿತು.ಸಂಕ್ಷಿಪ್ತ ಸ್ಕೋರ್: ಭಾರತ: 50 ಓವರುಗಳಲ್ಲಿ 8 ವಿಕೆಟ್ಗೆ 295 (ಆದರ್ಶ್ ಸಿಂಗ್ 52, ಮುಶೀರ್ ಖಾನ್ 131, ಉದಯ್ ಸಹಾರನ್ 35; ಮೇಸನ್ ಕ್ಲಾರ್ಕ್ 64ಕ್ಕೆ4); ನ್ಯೂಜಿಲೆಂಡ್: 28.1 ಓವರುಗಳಲ್ಲಿ 81 (ರಾಜ್ ಲಿಂಬಾಮಿ 17ಕ್ಕೆ2, ಸೌಮಿ ಕುಮಾರ್ ಪಾಂಡೆ 19ಕ್ಕೆ4.