ಬೆಂಗಳೂರು: ಹಿರಿಯರಾದ ಮಾತೃಶ್ರೀ ಯಶೋಧಮ್ಮರವರಿಗೆ “ಸಮ್ಮಿಲನ ಮಾತೃ ಸಮ್ಮಾನ”ವನ್ನೂ, ಚಿತ್ರದುರ್ಗ ವಂಶಸ್ಥರ ಶ್ರೀ ಯಲ್ಲಮ್ಮದೇವಿ ದೇವಸ್ಥಾನದ ನಿರ್ದೇಶಕರೂ ಹಾಗೂ ಮಾಜಿ ಉಪಾಧ್ಯಕ್ಷರೂ ಆದ ಶ್ರೀ ಬಿ. ಆರ್.ವೇಣುಗೋಪಾಲ್ ಹಾಗೂ ಸಹೃದಯಿಗಳಾದ ಶ್ರೀಮತಿ ಗಂಗಮ್ಮ ದಂಪತಿಗೆ ಹಾಗೂ “ಶ್ರೀ ನಾಗಯಲ್ಲಮ್ಮದೇವಿ ಕಡೇಮನೆ ವಂಶಸ್ಥರ ಸಂಘ”ದ ಖಜಾಂಚಿಗಳೂ,”ಬೆಂಜಿಮೋ ಕ್ಷೇಮಾಭಿವೃದ್ಧಿ ಸಂಘ”ದ ಅಧ್ಯಕ್ಷರೂ ಆದ ಶ್ರೀ ರೇವಣ್ಣ. ಎಸ್ ಕಡೇಮನೆ ಹಾಗೂ ಸಹೃದಯಿಗಳಾದ ಶ್ರೀಮತಿ ಸಾವಿತ್ರಮ್ಮ ದಂಪತಿಗೆ “ದಂಪತಿ ಪುಟ್ಟಮ್ಮ ಎನ್.ಯಲ್ಲಪ್ಪ ಸ್ಮಾರಕ ಸಮ್ಮಾನ” ವನ್ನೂ ಸಲ್ಲಿಸಿ ಗೌರವಿಸಲಾಯಿತು.
ಹವ್ಯಾಸಿ ಸಹಗಾಯಕರಾದ ಶ್ರೀಮತಿ ಸರೋಜ ಶಿವರಾಮ್ ರವರಿಗೆ ಹಾಗೂ ಪಾರಂಪರಿಕ ಗಾಯಕರಾದ ಶ್ರೀಮತಿ ಸರಸ್ವತಿ ನಾರಾಯಣಸ್ವಾಮಿಯವರಿಗೆ ಹಾಗೂ ಹವ್ಯಾಸಿ ಗಾಯಕರೂ, ಸಾಹಿತಿಗಳೂ,ಸಂಘಟಕರೂ ಆದ ಶ್ರೀ ಮಹಮದ್ ಮುನ್ನಾಫ್ ರವರುಗಳಿಗೆ “ಗಾಯಕ ಎನ್. ಯಲ್ಲಪ್ಪ ಸ್ಮಾರಕ ಪ್ರಶಸ್ತಿ”ಯನ್ನೂ ಸಲ್ಲಿಸಿ ಗೌರವಿಸಲಾಯಿತು.
“ಸಮ್ಮಿಲನ” ಕಲೆ ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ವಿಶ್ವ ತಾಯಂದಿರ ದಿನದ ಪ್ರಯುಕ್ತ 10/5/2026ರ ಭಾನುವಾರದಂದು ಬೆಂಗಳೂರಿನ ಶೇಷಾದ್ರಿಪುರಂನ ಕೆನ್ ಕಲಾ ಶಾಲೆಯಲ್ಲಿ ಆಯೋಜಿಸಿದ್ದ ಕಾರ್ಯಕ್ರಮ”340ನೇ ಸಮ್ಮಿಲನ “ದಲ್ಲಿ ಗಣ್ಯಮಾನ್ಯರುಗಳಾದ ವೈ. ನಾಗರಾಜ್, ವಿ.ಮಲ್ಲಿಕಾರ್ಜುನಯ್ಯ, ಬಿ.ಶೃಂಗೇಶ್ವರ್, ರತ್ನಾರಾವ್, ನಾಗೇಶ್ ಡಿ. ಪಾಟಕ್, ಕೆ.ವಿ.ಲಕ್ಷ್ಮಣಮೂರ್ತಿ, ಅನಂತ ಪದ್ಮನಾಭ ದಂಪತಿ, ರಾಧಾ ನಟರಾಜ್,ಸುನಂದಾ ರಾಮಚಂದ್ರ,ಮಲ್ಲಿಕಾರ್ಜುನ್ ದೊಡನೆ ದಂಪತಿ, ಹಾಗೂ ಸನ್ಮಾನಿತರ ಕುಟುಂಬದವರು “ಸಮ್ಮಿಲನ”ದ ಒಡನಾಡಿಗಳೊಂದಿಗೆ “ಸಮ್ಮಿಲನ”ದ ಸಂಸ್ಥಾಪಕ ಕುವರ ಯಲ್ಲಪ್ಪ ಉಪಸ್ಥಿತರಿದ್ದಾರೆ.
ಭಾವಚಿತ್ರ: ಅರಬಗಟ್ಟೆ ನಾಗರಾಜ್
`ಸಮ್ಮಿಲನ ಮಾತೃ ಸಮ್ಮಾನ’ ಸಮಾರಂಭ; ವಿವಿಧ ಸಾಧಕರಿಗೆ ಪ್ರಶಸ್ತಿ



