ಬೆಂಗಳೂರು: ಗ್ರೇಟರ್ ಬೆಂಗಳೂರು ಅಥಾರಿಟಿ ಚುನಾವಣೆ ನಡೆಸಲು ಹೆಚ್ಚುವರಿ ಕಾಲಾವಕಾಶ ನಡೆಸಲು ಸುಪ್ರೀಂಕೋರ್ಟ್ನಲ್ಲಿ ಮನವಿ ಸಲ್ಲಿಸಲಾಗಿದೆ.
ಈಗಾಗಲೇ ಸುಪ್ರೀಂಕೋರ್ಟ್ ಚುನಾವಣೆಯನ್ನು ಜೂನ್ ತಿಂಗಳ ಅಂತ್ಯದೊಳಗಾಗಿ ನಡೆಸುವಂತೆ ಆದೇಶಿಸಿತ್ತು. ಆದರೆ ಸುಪ್ರೀಂಕೋರ್ಟ್ ನೀಡಿರುವ ಗಡುವಿನೊಳಗಾಗಿ ಚುನಾವಣೆ ನಡೆಸಲು ಸಾಧ್ಯವಾಗದ ಕಾರಣ ಮತ್ತಷ್ಟು ಹೆಚ್ಚುವರಿ ಕಾಲಾವಕಾಶ ಬೇಕೆಂದು ರಾಜ್ಯ ಸರ್ಕಾರ ಪ್ರಮಾಣ ಪತ್ರ ಸಲ್ಲಿಸಿದೆ.
ರಾಜ್ಯದ ಸಿಬ್ಬಂದಿ ಜನಗತಿ ಹಾಗೂ ಎಸ್ಐಆರ್ನಲ್ಲಿ ನಿರತವಾಗಿರುವುದರಿಂದ ಚುನಾವಣೆ ನಡೆಸಲು ಸಿಬ್ಬಂದಿ ಕೊರತೆಯಾಗುತ್ತದೆ. ಹಾಗಾಗಿ ಮೂರು ತಿಂಗಳ ಕಾಲ ಚುನಾವಣೆಗೆ ಸಜ್ಜಾಗಲು ಕಾಲಾವಕಾಶ ಬೇಕೆಂದು ಕೋರಲಾಗಿದೆ.
ಸೆಪ್ಟಂಬರ್ ಅಂತ್ಯದೊಳಗಾಗಿ ಚುನಾವಣೆ ನಡೆಸಲು ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ತಮ್ಮ ಮನವಿಯನ್ನು ಪುನಸ್ಕರಿಸಬೇಕು ಎಂದು ಮನವಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಇತ್ತೀಚೆಗೆ ಚುನಾವಣೆ ನಡೆಸುವ ಸಂಬAಧ ರಾಜ್ಯ ಚುನಾವಣಾ ಆಯೋಗ ತಮಗೆ ನೀಡಿರುವ ಗಡುವಿನೊಳಗಾಗಿ ಚುನಾವಣೆ ನಡೆಸಲು ತಮಗೆ ಪರಮಾಧಿಕಾರವಿದೆ ಎಂದು ತಿಳಿಸಿದ್ದು, ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಸುಪ್ರೀಂಕೋರ್ಟ್ ಮೊರೆ ಹೋಗಿದೆ ಎಂದು ಹೇಳಲಾಗಿದೆ.
ಕಾಲಾವಕಾಶಕ್ಕೆ ಮೊರೆ.ಜಿಬಿಎ ಚುನಾವಣೆ ನಡೆಸಲು ಮತ್ತಷ್ಟು ಸಮಯ ನೀಡಲು ಸುಪ್ರೀಂನಲ್ಲಿ ಮನವಿ



