ಬೆಂಗಳೂರು: ಬೆಳೆ ಬೆಳೆಯುವುದು ಬೇಡ ಎಂದು ಹೇಳುವ ಮೂಲಕ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ರೈತರ ಮನಸ್ಥೆರ್ಯ ಕುಗ್ಗಿಸುವ ಕೆಲಸ ಮಾಡಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಮೂರು ಪ್ರಮುಖ ವಿಚಾರಗಳನ್ನು ಇಂದು ನಿಮ್ಮ ಮುಂದೆ ಇಡುತ್ತಿದ್ದೇನೆ. ರಾಜ್ಯದ ಜನತೆಗೆ ತಿಳಿಸಬೇಕು. ಹೀಗಾಗಿ ಬಂದಿದ್ದೇನೆ ಎಂದಿದ್ದೇನೆ ಎಂದು ವಿಜಯೇಂದ್ರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ನಾನು ಗೌರವಪೂರ್ವಕವಾಗಿ, ವಿನಯಪೂರ್ವಕವಾಗಿ ಅವರಿಗೆ ಒಂದು ಮಾತನ್ನು ಹೇಳುತ್ತೇನೆ ಎಂದ ಅವರು, ಇಡೀ ದೇಶದಲ್ಲಿ ಇದೇ ಪರಿಸ್ಥಿತಿ ಇದೆ. ಪ್ರಕೃತಿ ಮುನಿಸಿಕೊಂಡಾಗ ರಾಜ್ಯದ ರೈತರಿಗೆ ಸರ್ಕಾರ ಹಾಗೂ ಸಿಎಂ ಅಭಯ ಕೊಡಬೇಕು ಎಂದು ಸಲಹೆ ನೀಡಿದ್ದಾರೆ. ಮುಂದಿನ 15-20 ದಿನಗಳಲ್ಲಿ ಮಳೆಯಾಗುವ ಸಂಭವವಿದೆ. ಬಿತ್ತನೆ ಮಾಡದೇ ರೈತರು ಸುಮ್ಮನಾದ್ರೆ, ಅದಕ್ಕೆ ಯಾರು ಹೊಣೆ? ರೈತರು ಬೆಳೆ ಬೆಳೆಯದೇ ಇದ್ದರೇ ಹೇಗೆ? ಜಿಲ್ಲಾಧಿಕಾರಿಗಳಿಗೆ ಹಣ ಕೊಟ್ಟಿದ್ದಾರಾ? ನಮ್ಮ ರಾಜ್ಯದ ಜಲಾಶಯಗಳಲ್ಲಿ ನೀರಿಲ್ಲ ಅಂತಾ ಸಿಎಂ ಕೈ ಕಟ್ಟಿ ಕೂತರೇ ಹೇಗೆ? ನಮ್ಮ ರಾಜ್ಯದ ಜಲಾಶಯಗಳಿಂದ ಕಳೆದ ಮೂರ್ನಾಲ್ಕು ದಿನಗಳಿಂದ ಎಷ್ಟು ನೀರು ಬಿಟ್ಟಿದ್ದೀರಿ? ಅದನ್ನು ಮೊದಲು ತಿಳಿಸಿ. ನಾರಾಯಣಪುರ ಜಲಾಶಯ, ಆಲಮಟ್ಟಿ ಸೇರಿದಂತೆ ಬೇರೆ ರಾಜ್ಯಗಳಿಂದ ನೀರು ತರಿಸಿಕೊಳ್ಳಬೇಕು ಅಲ್ಲವೇ? ಎಂದು ಪ್ರಶ್ನಿಸಿದ್ದಾರೆ. ನಮ್ಮ ರಾಜ್ಯದ ಕೆಆರ್ಎಸ್ ಜಲಾಶಯದಿಂದ ತಮಿಳುನಾಡಿಗೆ ನೀರು ಬಿಟ್ಟಿದ್ದೀರಿ. ಯಾಕೆ ಈ ರೀತಿ ನಡೆದುಕೊಳ್ಳುತ್ತಿದ್ದೀರಿ? ಕಣ್ಣಾಮುಚ್ಚಾಲೆ ಬೇಡ.
ಕಪಟನಾಟಕ ಮಾಡುವುದು ಬೇಡ. ಇದಕ್ಕೆ ಕಾರ್ಯತಂತ್ರ ರೂಪಿಸಿ.
ರೈತರ ಮನಸ್ಥೆರ್ಯ ಕುಗ್ಗಿಸುವ ಕೆಲಸ ಸಿಎಂ ಹೇಳಿಕೆಗೆ ಬಿ.ವೈ.ವಿಜಯೇಂದ್ರ ಅಸಮಾಧಾನ



