ಮಹಿಳಾ ಪ್ರಧಾನ ಕಥಾಹಂದರವನ್ನು ಒಳಗೊಂಡಿರುವ `ಬ್ಯೂಟಿ’ ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಕಲ್ಪವೃಕ್ಷ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ, ಪಿ. ಮುರಳಿ ಕೃಷ್ಣ ಅರ್ಪಿಸುತ್ತಿರುವ ಈ ಚಿತ್ರಕ್ಕೆ ರಾಜಾ ರವಿ ಕುಮಾರ್ ಕಥೆ, ಚಿತ್ರಕಥೆ ಹಾಗೂ ನಿರ್ದೇಶನ ಮಾಡಿದ್ದು, ತನುಜಾ ಮುರಳಿ ಕೃಷ್ಣ ನಿರ್ಮಾಪಕರಾಗಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ. ಮನೋಹರ್ ಸಂಗೀತ ನೀಡಿದ್ದಾರೆ. ಚಿತ್ರದ ನಾಯಕ ರವಿಕಾಂತ್ ಈ ಪಾತ್ರಕ್ಕಾಗಿ ವಿಶೇಷವಾಗಿ ಭರತನಾಟ್ಯವನ್ನು ಅಭ್ಯಾಸ ಮಾಡಿದ್ದು, ನಾಯಕಿಯಾಗಿ ಮಹಾಲಕ್ಷ್ಮೀ ಅಭಿನಯಿಸಿದ್ದಾರ “ಸುಂದರ ಮುಖಕ್ಕಿಂತ ಸುಂದರ ಮನಸ್ಸು ಮುಖ್ಯ” ಎಂದು ಹೇಳಿ, ಉತ್ತಮ ಕನ್ನಡ ಸಿನಿಮಾಗಳನ್ನು ಚಿತ್ರಮಂದಿರಗಳಲ್ಲಿ ವೀಕ್ಷಿಸಿ ಬೆಂಬಲಿಸುವಂತೆ ಪ್ರೇಕ್ಷಕರಿಗೆ ಮನವಿ ಮಾಡಿದರು. ಚಿತ್ರದ ಬಹುತೇಕ ಚಿತ್ರೀಕರಣ ಐತಿಹಾಸಿಕ ಹಾಗೂ ನೈಸರ್ಗಿಕ ಸೌಂದರ್ಯಕ್ಕೆ ಹೆಸರಾದ ಮೇಲ್ಕೋಟೆಯಲ್ಲಿ ನಡೆದಿದ್ದು, ಟ್ರೈಲರ್ನಲ್ಲಿ ಅಲ್ಲಿನ ದೃಶ್ಯ ವೈಭವ ಗಮನ ಸೆಳೆಯುತ್ತದೆ. ಕನ್ನಡದ ಖ್ಯಾತ ಗಾಯಕರು ಹಾಡುಗಳಿಗೆ ಧ್ವನಿಯಾಗಿದ್ದು, ಸಂಗೀತವೂ ಚಿತ್ರದ ಪ್ರಮುಖ ಆಕರ್ಷಣೆಯಾಗಿದೆ.



