2026ರ ಫಿಫಾ ವಿಶ್ವಕಪ್ನಲ್ಲಿ ಫ್ರಾನ್ಸ್ನ ಸ್ಟಾರ್ ಕೈಲಿಯನ್ ಎಂಬಾಪೆ ಮತ್ತೊಂದು ದಾಖಲೆ ಬರೆದಿದ್ದಾರೆ. ವಿಶ್ವಕಪ್ ಇತಿಹಾಸದಲ್ಲಿ ಟೂರ್ನಮೆಂಟ್ನ ನಾಕೌಟ್ ಹಂತದಲ್ಲಿ 10 ಗೋಲುಗಳನ್ನು ಗಳಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಫ್ರಾನ್ಸ್ 32 ರ ಸುತ್ತಿನಲ್ಲಿ ಸ್ವೀಡನ್ ಅನ್ನು 3-0 ಅಂತರದಿAದ ಸೋಲಿಸಿತು. ತನ್ನ ಎರಡು ಗೋಲುಗಳೊಂದಿಗೆ, ಎಂಬಾಪೆ ಟೂರ್ನಮೆಂಟ್ ಇತಿಹಾಸದಲ್ಲಿ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರರ ಪಟ್ಟಿಯಲ್ಲಿ ಜರ್ಮನಿಯ ಐಕಾನ್ ಮಿರೋಸ್ಲಾವ್ ಕ್ಲೋಸ್ ಅವರನ್ನು ಹಿಂದಿಕ್ಕಿದರು. ಇದು ಅವರ ಒಟ್ಟಾರೆ ಗೋಲುಗಳ ಸಂಖ್ಯೆಯನ್ನು 18 ಕ್ಕೆ ಏರಿಸಿತು. ಎರಡು ಗೋಲುಗಳೊಂದಿಗೆ ಎಂಬಾಪೆ ಈಗ ವಿಶ್ವಕಪ್ ನಾಕೌಟ್ಗಳಲ್ಲಿ 10 ಗೋಲುಗಳನ್ನು ಗಳಿಸಿದ್ದಾರೆ. ಆ ಮೂಲಕ ನಂ.1 ಸ್ಥಾನಕ್ಕೆ ಏರಿದ್ದಾರೆ.
ಈIಈಂ ವಿಶ್ವಕಪ್ನ ನಾಕೌಟ್ ಹಂತಗಳಲ್ಲಿ ಎಂಬಾಪೆ 10 ಗೋಲುಗಳನ್ನು ಗಳಿಸಿದ್ದಾರೆ. ಆ ಮೂಲಕ, ತಲಾ 8 ಗೋಲುಗಳನ್ನು ಗಳಿಸಿರುವ ಬ್ರೆಜಿಲ್ನ ರೊನಾಲ್ಡೊ ನಜಾರಿಯೊ ಮತ್ತು ಲಿಯೊನಿಡಾಸ್ರನ್ನು ಹಿಂದಿಕ್ಕಿದ್ದಾರೆ. ಈ ಮೂವರ ನಂತರದ ಸ್ಥಾನದಲ್ಲಿ ಫ್ರಾನ್ಸ್ನ ಜಸ್ಟ್ ಫಾಂಟೈನ್ ಮತ್ತು ಬ್ರೆಜಿಲ್ನ ಪೀಲೆ ಇದ್ದಾರೆ. ಅವರು ಟೂರ್ನಮೆಂಟ್ನ ನಾಕೌಟ್ ಹಂತಗಳಲ್ಲಿ ತಲಾ 7 ಗೋಲುಗಳನ್ನು ಗಳಿಸಿದ್ದಾರೆ.
FIFA ವಿಶ್ವಕಪ್: ಟೂರ್ನಮೆಂಟ್ನ ನಾಕೌಟ್ ಹಂತದಲ್ಲಿ ಅತಿ ಹೆಚ್ಚು ಗೋಲ್ – ರೊನಾಲ್ಡೊ ದಾಖಲೆ ಮುರಿದ ಎಂಬಾಪೆ



