ರಾಮನಗರ: ಜಿಲ್ಲಾ ಕೇಂದ್ರ ರಾಮನಗರ ನಗರಸಭೆ ವ್ಯಾಪ್ತಿಯ ಸಮಗ್ರ ಅಭಿವೃದ್ದಿಗೆ 770.72 ಕೋಟಿ ರೂಗಳ ಅನುದಾನದ ಅಗತ್ಯವಿದೆ ಎಂದು ನಗರಸಭಾಧ್ಯಕ್ಷ ಕೆ.ಶೇಷಾದ್ರಿ(ಶಶಿ) ಅವರು ಮುಖ್ಯಮಂತ್ರಿ ಡಿ.ಕೆ.ಶಿವಕುಮರ್ ಅವರ ಗಮನಕ್ಕೆ ತಂದರು.ಬುಧವಾರ ಸಂಜೆ ನಗರಸಭಾ ಸದಸ್ಯರು ಮತ್ತು ಪ್ರಮುಖ ನಾಗರೀಕರೊಂದಿಗೆ ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ್ದ ಶೇಷಾದ್ರಿ ಅವರು ನಗರದಲ್ಲಿ ಯುಜಿಡಿ ವ್ಯವಸ್ಥೆ ಕಲ್ಪಿಸಲು 300 ಕೋಟಿ ರೂ, ನಗರಸಭೆಯ ಎಲ್ಲಾ 31 ವಾರ್ಡುಗಳ ಸಮಗ್ರ ಅಭಿವೃದ್ದಿಗೆ 190 ಕೋಟಿ ರೂ, ಉದ್ಯಾನವನಗಳ ಅಭಿವೃದ್ದಿಗೆ 12.40 ಕೋಟಿ ರೂ, ಅರ್ಕಾವತಿ ನದಿಗೆ ಅಡ್ಡಲಾಗಿ ಇನ್ನು 4 ಸೇತುವೆಗಳ ನಿರ್ಮಾಣದ ಅಗತ್ಯವಿದ್ದು, ಇದಕ್ಕೆ 25 ಕೋಟಿ ರೂ, ನಗರಸಭೆ ವ್ಯಾಪ್ತಿಯಲ್ಲಿ ಹಾದು ಹೋಗಿರುವ ಬೆಂಗಳೂರು-ಮೈಸೂರು ಹೆದ್ದಾರಿ ರಸ್ತೆಯ ಸಮಗ್ರ ಅಭಿವೃದ್ದಿಗೆ 70 ಕೋಟಿ ರೂ, ಸೀರಹಳ್ಳಕ್ಕೆ ತಡೆಗೋಡಿ ನಿರ್ಮಿಸಲು 20 ಕೋಟಿ ರೂ, ನೆಟ್ಕಲ್ ಯೋಜನೆಗೆ ಸಂಬAಧಿಸಿದAತೆ ಒಳಚರಂಡಿ ಮಂಡಳಿಯಲ್ಲಿ ಡಿಜಟಲೀಕರಣ ವ್ಯವಸ್ಥೆಗೆ 60 ಕೋಟಿ ರೂ, ನಗರಕ್ಕೆ ಐದು ಪ್ರವೇಶದ್ವಾರಗಳನ್ನು ನಿರ್ಮಿಸಲು 2 ಕೋಟಿ ರೂ, ಅರ್ಕಾವತಿ ನದಿ ದಂಡೆಯ ಮೇಲಿರುವ ಐಡಿಎಸ್ಎಂಟಿ (ಡಾ.ರಾಜ್ಕುಮಾರ್) ಕಾಂಪ್ಲೆಕ್ಸ್ ನವೀಕರಣಕ್ಕೆ 5 ಕೋಟಿ ರೂ, ಸ್ಮಶಾನಗಳ ಅಭಿವೃದ್ದಿಗೆ 5 ಕೋಟಿ ರೂ, ನಗರಸಭೆ ಕಚೇರಿ ಪಕ್ಕ ವಾಣಿಜ್ಯ ಸಂಕಿರ್ಣ ನಿರ್ಮಿಸಲು 25 ಕೋಟಿ ರೂ, ಅಂಬೇಡ್ಕರ್ ಭವನದ ನವೀಕರಣಕ್ಕೆ 5 ಕೋಟಿ ರೂ, ಪಿ.ಡಬ್ಲು.ಡಿ ವೃತ್ತದಿಂದ ರೈಲ್ವೆ ನಿಲ್ದಾಣ ವೃತ್ತದವರೆಗಿನ ರಸ್ತೆ ಅಭಿವೃದ್ದಿಗೆ 5 ಕೋಟಿ ರೂ, ರೈಲು ನಿಲ್ದಾಣ ವೃತ್ತ, ಬಸ್ ನಿಲ್ದಾಣ ವೃತ್ತ, ಕೆಂಪೇಗೌಡ ವೃತ್ತಗಳ ಸೌಂದರ್ಯೀಕರಣಕ್ಕೆ 6 ಕೋಟಿ ರೂ, ಬಕ್ಷಿ ಕೆರೆ ಮತ್ತು ಬೋಳಪ್ಪನಹಳ್ಳಿ ಅಮಾನಿಕೆರೆಗಳ ಅಭಿವೃದ್ದಿಗೆ 20 ಕೋಟಿ ರೂ, ನಗರ ಪೊಲೀಸ್ ಠಾಣೆ ಎದುರಿಗೆ ವಾಣಿಜ್ಯ ಸಂಕಿರ್ಣ ನಿರ್ಮಿಸಲು 5 ಕೋಟಿ ರೂ, ಯುಐಡಿಎಫ್ ಯೋಜನೆಯಡಿ ನಗರಸಭೆಯ ಪಾಲು ಶೇ 15 ತುಂಬಿಸಲು 12.30 ಕೋಟಿ ರೂ ಹೀಗೆ 772.70 ಕೋಟಿ ರೂಗಳ ಅನುದಾನ ಒದಗಿಸುವಂತೆ ಮನವಿ ಮಾಡಿದರು.ರಾಮನಗರದ ಅಭಿವೃಧ್ದಿಗೆ ಮುಖ್ಯಮಂತ್ರಿಗಳು ಅನೇಕ ಬಾರಿ ಆಸಕ್ತಿ ವ್ಯಕ್ತಪಡಿಸಿದ್ದಾರೆ. ಎಲ್ಲರ ಆಶಯದಂತೆ ಅವರು ಮುಖ್ಯಮಂತ್ರಿಗಳಾಗಿದ್ದಾರೆ, ಜಿಲ್ಲಾ ಕೇಂದ್ರ ಸೇರಿದಂತೆ ಜಿಲ್ಲೆಯ ಅಭಿವೃದ್ದಿಗೆ ಇದೊಂದು ಸುವರ್ಣ ಅವಕಾಶ ಸಿಕ್ಕಿದಂತಾಗಿದೆ. ಅವರ ದರ್ಶನವನ್ನು ಪಡೆಯುವುದು ಸಹ ಎಲ್ಲರ ಆಸೆಯಾಗಿತ್ತು. ಜೊತೆಗೆ ಅಭಿವೃಧ್ದಿಯ ವಿಚಾರದಲ್ಲಿ ಭೇಟಿ ಮಾಡಿ ಮನವಿಯನ್ನು ಸಲ್ಲಿಸಿರುವುದಾಗಿ ಶೇಷಾದ್ರಿ ತಿಳಿಸಿದರು. ಬೆಂಗಳೂರು ನಗರವನ್ನು ವಿಶ್ವದ ಗಮನ ಸೆಳೆಯುವ ಉದ್ದೇಶ ಮುಖ್ಯಮಂತ್ರಿಗಳಿಗಿದೆ. ಇದರೊಟ್ಟಿಗೆ ನಮ್ಮನ್ನು (ನಗರಸಭೆ ವ್ಯಾಪ್ತಿ) ಸಹ ಜೊತೆಗೆ ಕರೆದೊಯ್ಯಬೇಕು. ವಿಶ್ವ ಭೂಪಟದಲ್ಲಿ ಗುರುತಿಸುವಂತೆ ಮಾಡಬೇಕು ಎಂದು ಶಶಿ ಮನವಿ ಮಾಡಿದರು.ನಗರಸಭಾಧ್ಯಕ್ಷ ಕೆ.ಶೇಷಾದ್ರಿ ಅವರು ನೀಡಿದ ಮನವಿಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಡಿ.ಕೆ.ಶಿವಕುಮರ್, ಚುನಾವಣಾ ಸಂದರ್ಭದಲ್ಲಿ ನಗರಸಭಾ ವ್ಯಾಪ್ತಿಯ ಅಭಿವೃದ್ದಿಗೆ ಭರವಸೆ ನೀಡಲಾಗಿತ್ತು. ರಾಮನಗರ ಟೌನ್ ಮಾತ್ರವಲ್ಲದೇ ಇಡೀ ಬೆಂಗಳೂರು ದಕ್ಷಿಣ ಜಿಲ್ಲೆಗೆ ವಿಶೇಷವಾದ ರೂಪ ಕೊಡಬೇಕು ಎಂಬುದು ನನ್ನ ಉದ್ದೇಶ. ಈಗ ಆಗದಿದ್ದರೆ, ಇನ್ನೆಂದಿಗೂ ಆಗುವುದಿಲ್ಲ ಎಂಬ ಅರಿವಿದೆ. ಅಭಿವೃದ್ದಿ ವಿಚಾರದಲ್ಲಿ ಹಿಂದೆ ಏನೇನಾಗಿತ್ತು, ಎಂಬುದು ಹೇಳಿದರೆ ರಾಜಕೀಯ ಬಣ್ಣ ಪಡೆದುಕೊಳ್ಳುತ್ತೆ. ಈಗ ನಮ್ಮ ಜವಾಬ್ದಾರಿ ಇದೆ. ಜಿಲ್ಲೆಯ ಕ್ಷೇತ್ರಗಳ ಅಭಿವೃಧ್ದಿ ವಿಚಾರದಲ್ಲಿ ಈ ಇನ್ನುಳಿದ ಶಾಸಕರು ಸೇರಿ ಮುಖ್ಯಮಂತ್ರಿಗಳಾಗಿದ್ದ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದ್ದರು. ಅವರು ಸಹ ಸಹಾಯ ಮಾಡಬೇಕು ಎಂದು ತೀರ್ಮಾನ ಮಾಡಿದ್ದರು. ಈಗ ನೀಡಿರುವ ಮನವಿಯನ್ನು ಗಮನದಲ್ಲಿಟ್ಟುಕೊಂಡು ಯಾವ ರೀತಿ ಅನುದಾನ ಕೊಡಬೇಕು, ಬಡವರಿಗೆ ಯಾವ ರೀತಿ ನಿವೇಶನಗಳನ್ನು ಕೊಡಬೇಕು ಎಂಬುದರ ಬಗ್ಗೆ ಶಾಸಕ ಇಕ್ಬಾಲ್ ಹುಸೇನ್ ಅವರಿಗೆ ತಿಳಿಸುತ್ತೇನೆ. ಬಡವರಿಗೆ ನಿವೇಶನಗಳನ್ನು ಕಲ್ಪಿಸಲು ಸಿದ್ದರಾಮಯ್ಯನವರು ಸ್ವಲ್ಪ ಅನು ದಾನವನ್ನು ಮಂಜೂರು ಮಾಡಿದ್ದರು ಎಂದು ತಿಳಿಸಿದರು.ಬೆಂಗಳೂರು ದಕ್ಷಿಣ ಜಿಲ್ಲೆ ಎಂದು ನಾಮಕರಣ ಮಾಡಿದ ನಂತರ ಜಿಲ್ಲೆಯ ಗೌರವ ಹೆಚ್ಚಾಗಿದೆ ಎಂಬುದನ್ನು ಎಲ್ಲರ ಗಮನಕ್ಕೆ ಬಂದಿದೆ. ಹೀಗಾಗಿ ಎಲ್ಲರನ್ನು ವಿಶ್ವಾಸಕ್ಕೆ ಪಡೆಯಿರಿ, ಮುಂದಿನ ಚುನಾವಣೆಗಳು ಸುಲಭವಾಗಲಿ ಎಂದು ಕೌನ್ಸಿಲರ್ಗಳನ್ನು ಉದ್ದೇಶಿಸಿ ತಿಳಿಸಿದರು. ಅಭಿವೃಧ್ದಿ ವಿಚಾರದಲ್ಲಿ ನೀವಿಟ್ಟಿರುವ ವಿಶ್ವಾಸವನ್ನು, ಗೌರವವನ್ನು ಕಾಪಾಡಿಕೊಳ್ಳುತ್ತೇನೆ ಎಂದರು.ಮತದಾರರಿಗೆ ಕೃತಜ್ಞತೆಗಳನ್ನು ಸಲ್ಲಿಸುವ ಸಭೆಗಳನ್ನು ಆಯೋಜಿಸು ವಂತೆ ತಿಳಿಸಿದರು. ಅಭಿವೃದ್ದಿ ವಿಚಾರದಲ್ಲಿ ನಾನು ಸ್ಪಂದಿಸುತ್ತೇನೆ. ಡಿ.ಕೆ.ಸುರೇಶ್, ಸಿ.ಪಿ.ಯೋಗೇಶ್ವರ್, ಎಚ್.ಸಿ.ಬಾಲಕೃಷ್ಣ, ಇಕ್ಬಾಲ್ ಹುಸೇನ್ ಅವರಿಗೂ ಅಭಿವೃದ್ದಿ ವಿಚಾರಗಳ ಬಗ್ಗೆ ತಿಳಿಸುತ್ತೇನೆ ಎಂದು ಸಿಎಂ ಶಿವಕುಮಾರ್ ಹೇಳಿದರು.



