ಬೆಂಗಳೂರು: ಟೀಮ್ ಇಂಡಿಯಾದ ಆಲ್-ರೌಂಡರ್ ಹಾರ್ದಿಕ್ ಪಾಂಡ್ಯ ತಮ್ಮ ತರಬೇತಿ ಕೇಂದ್ರವನ್ನು ಮುಂಬೈನಿಂದ ಬೆಂಗಳೂರಿಗೆ ಅಧಿಕೃತವಾಗಿ ಸ್ಥಳಾಂತರಿಸಿದ್ದಾರೆ.ಗಾಯದ ಸಮಸ್ಯೆಯಿಂದ ಚೇತರಿಸಿಕೊಳ್ಳುತ್ತಿರುವ ಅವರು ಬೆಂಗಳೂರಿನಲ್ಲಿರುವ ಬಿಸಿಸಿಐನ ನೂತನ ಸೆಂಟರ್ ಆಫ್ ಎಕ್ಸಲೆನ್ಸ್ ಅನ್ನು ತಮ್ಮ ಉಳಿದ ಕ್ರಿಕೆಟ್ ವೃತ್ತಿಜೀವನದ ಖಾಯಂ ತರಬೇತಿ ನೆಲೆಯನ್ನಾಗಿ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ. ಈ ಮೂಲಕ ಈ ರೀತಿಯ ಸುದೀರ್ಘ ವ್ಯವಸ್ಥೆಯನ್ನು ಅಳವಡಿಸಿಕೊಂಡ ಮೊದಲ ಪ್ರಮುಖ ಸಕ್ರಿಯ ಭಾರತೀಯ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.ಮೂಲತಃ ಗುಜರಾತ್ನ ಬರೋಡಾದವರಾದ ಹಾರ್ದಿಕ್ ಪಾಂಡ್ಯ, ಕಳೆದ ಒಂದು ದಶಕದಿಂದ ಮುಂಬೈನ ಲೋವರ್ ಪ್ಯಾರಲ್ನಲ್ಲಿ ನೆಲೆಸಿದ್ದರು. ಆದರೆ ಮುಂಬೈನ ಟ್ರಾಫಿಕ್ ಹಾಗೂ ಪ್ರತಿದಿನ ತರಬೇತಿಗಾಗಿ ಘನ್ಸೋಲಿಯಲ್ಲಿರುವ ಮುಂಬೈ ಇಂಡಿಯನ್ಸ್ ಹೈ-ಪರ್ಫಾರ್ಮೆನ್ಸ್ ಸೆಂಟರ್ಗೆ ಪ್ರಯಾಣಿಸುವುದು ಅವರಿಗೆ ಕಷ್ಟಕರವಾಗಿತ್ತು. ಈ ಕಾರಣಕ್ಕಾಗಿ ಅವರು ಮುಂಬೈ ತೊರೆದು, ಬೆಂಗಳೂರಿನ ಹೊರವಲಯದಲ್ಲಿರುವ ಬಿಸಿಸಿಐನ `ಸೆಂಟರ್ ಆಫ್ ಎಕ್ಸಲೆನ್ಸ್’ ಸಮೀಪವೇ ಆಸ್ತಿಯೊಂದನ್ನು ಬಾಡಿಗೆಗೆ ಪಡೆದು ಶಿಫ್ಟ್ ಆಗಿದ್ದಾರೆ.
ಮುಂಬೈ ತೊರೆದು ಬೆಂಗಳೂರಿಗೆ ಹಾರ್ದಿಕ್ ಪಾಂಡ್ಯ ಶಿಫ್ಟ್



