ಅಹಮದಾಬಾದ್: ಟೆಸ್ಟ್ ಪಂದ್ಯದಲ್ಲಿ ಒಂದು ದಿನಕ್ಕೆ 90 ಓವರ್ ಗಳೆಂದು ನಿಗದಿಯಾಗಿದ್ದರೂ ಮಂದ ಬೆಳಕಿ (Bad Light) ನಿಂದಾಗಿ ಬಹಳಷ್ಟು ವೇಳೆ ಕಡ್ಡಾಯ 85 ಓವರ್ ಗಳನ್ನೂ ಆಡಲು ಸಾಧ್ಯವಾಗುವುದಿಲ್ಲ. ಈ ಕಾರಣಕ್ಕೆ ಪಂದ್ಯ ಸ್ಥಗಿತಗೊಳ್ಳುವ ಸಮಸ್ಯೆಯನ್ನು ನಿಯಂತ್ರಿಸಲು, ಕೆಂಪು ಚೆಂಡಿನ ಬದಲಾಗಿ ಪಿಂಕ್ (ಗುಲಾಬಿ) ಬಣ್ಣ ಚೆಂಡನ್ನು ಬಳಸುವ ಪ್ರಾಯೋಗಿಕ ಯೋಜನೆಗೆ ಇದೀಗ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅನುಮೋದನೆ ನೀಡಿದೆ.
ಅಹಮದಾಬಾದ್ನಲ್ಲಿ ನಡೆದ ಐಸಿಸಿಯ ವಾರ್ಷಿಕ ಮಂಡಳಿ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದ್ದು, ಪಂದ್ಯದ ಓವರ್ಗಳನ್ನು ಪೂರ್ಣಗೊಳಿಸಲು ಫ್ಲಡ್ಲೈಟ್ಗಳನ್ನು ಬಳಸಲು ಅನುಮತಿ ನೀಡಲಾಗಿದೆ. ಆದರೆ ಸರಣಿ ಆರಂಭಕ್ಕೂ ಮುನ್ನ ಎರಡೂ ತಂಡಗಳು ಒಪ್ಪಿಗೆ ಸೂಚಿಸಿದರೆ ಮಾತ್ರ
ಈ ನಿಯಮ ಅನ್ವಯವಾಗುತ್ತದೆ.
ಎರಡು ದಿನಗಳ ಕಾಲ ನಡೆದ ಈ ಸಭೆಯಲ್ಲಿ ಹಲವು ಪ್ರಮುಖ ನಿಯಮಗಳ ಬದಲಾವಣೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಟೆಸ್ಟ್ ಪಂದ್ಯದ ಪಾನೀಯ ವಿರಾಮ (ಆಡಿiಟಿಞ ಃಡಿeಚಿಞ) ವೇಳೆ ಮುಖ್ಯ ತರಬೇತುದಾರರು ಮೈದಾನಕ್ಕೆ ಪ್ರವೇಶಿಸಲು ಅನುಮತಿ, ಅಕ್ರಮ ಬೌಲಿಂಗ್ ಶೈಲಿಯನ್ನು ಪರಿಶೀಲಿಸಲು ಪಂದ್ಯದ ಅಧಿಕಾರಿಗಳಿಗೆ ಹಾಕ್-ಐ ಡೇಟಾ ಲಭ್ಯವಾಗುವಂತೆ ಮಾಡುವುದು ಮತ್ತು ಲೆಗ್-ಸೈಡ್ ವೈಡ್ ಪ್ರಾಯೋಗಿಕ ನಿಯಮವನ್ನು ಕಾಯಂಗೊಳಿಸುವುದು ಇದರಲ್ಲಿ ಸೇರಿವೆ. ಇದರೊಂದಿಗೆ, ಸದಸ್ಯತ್ವದ ಜವಾಬ್ದಾರಿಗಳನ್ನು ಉಲ್ಲಂಘಿಸಿದ ಕಾರಣಕ್ಕೆ ಕ್ರಿಕೆಟ್ ಕೆನಡಾವನ್ನು ಅಮಾನತುಗೊಳಿಸಲಾಗಿದೆ ಮತ್ತು ಬಾಂಗ್ಲಾದೇಶ ಕ್ರಿಕೆಟ್ ಮಂಡಳಿಯ ಚುನಾವಣೆಯ ಮೇಲ್ವಿಚಾರಣೆಗೆ ಹಿರಿಯ ಐಸಿಸಿ ಅಧಿಕಾರಿಗಳನ್ನು ನಿಯೋಜಿಸಲಾಗಿದೆ.
ಸಾಮಾನ್ಯವಾಗಿ ಟೆಸ್ಟ್ ಕ್ರಿಕೆಟ್ನಲ್ಲಿ ಒಂದು ದಿನಕ್ಕೆ 90 ಓವರ್ಗಳನ್ನು ನಿಗದಿಪಡಿಸಲಾಗಿರುತ್ತದೆ. ಪಂದ್ಯವು ಸಾಂಪ್ರದಾಯಿಕ ಕೆಂಪು ಚೆಂಡಿನಲ್ಲೇ ಆರಂಭವಾಗುತ್ತದೆ. ಒಂದು ವೇಳೆ ಕೆಂಪು ಚೆಂಡಿನಲ್ಲಿ 75 ಓವರ್ಗಳು ಮುಗಿದ ನಂತರ ಮಂದಬೆಳಕಿನ ಸಮಸ್ಯೆ ಎದುರಾಗಿ, ಉಳಿದ 15 ಓವರ್ಗಳನ್ನು ಆಡಿಸಲು ಸಾಧ್ಯವಾಗದಿದ್ದರೆ, ಆಗ ಫ್ಲಡ್ಲೈಟ್ಗಳನ್ನು ಆನ್ ಮಾಡಿ ಪಿಂಕ್ ಚೆಂಡಿನ ಮೂಲಕ ಆ ಓವರ್ಗಳನ್ನು ಪೂರ್ಣಗೊಳಿಸಬಹುದು. ಟೆಸ್ಟ್ ಕ್ರಿಕೆಟ್ನಲ್ಲಿ ಸಮಯ ವ್ಯರ್ಥವಾಗುವುದನ್ನು ತಡೆಯಲು ಈ ಮಾದರಿಯನ್ನು ರೂಪಿಸಲಾಗಿದೆ.
ಟೆಸ್ಟ್ ಕ್ರಿಕೆಟ್ನಲ್ಲಿ ಬ್ಯಾಡ್ ಲೈಟ್ ಸಮಸ್ಯೆಗೆ ಮುಕ್ತಿ



