ಬೆಂಗಳೂರು: ಬಂಧನ್ ಮ್ಯೂಚುಯಲ್ ಫಂಡ್ ತನ್ನ ಹೊಸ ಟ್ಯಾಗ್ಲೈನ್ `ಬಡ್ತೇ ರಹೋ’ ಅನಾವರಣಗೊಳಿಸಿದ್ದು ಜೀವನವನ್ನು ಶ್ರೀಮಂತಗೊಳಿಸಲು ಆಹ್ವಾನಿಸುತ್ತಿದೆ. ಈ ಟ್ಯಾಗ್ ಲೈನ್ ಅನ್ನು ಹಣಕಾಸು ಭದ್ರತೆಯು ನಮಗೆ ನಮ್ಮ ಜೀವನವನ್ನು ಪೂರ್ಣ ಮತ್ತು ಸಂತೃಪ್ತಿಕರವಾಗಿ ಕಳೆಯಲು ಉತ್ತೇಜಿಸುವ ತತ್ವವನ್ನು ಹೊಂದಿದ್ದು ಪ್ರತಿಯೊಬ್ಬರಿಗೂ ಪ್ರತಿ ಸಂತೋಷವನ್ನು ಸಂಭ್ರಮಿಸಲು, ಸವಾಲುಗಳನ್ನು ವಿಶ್ವಾಸದಿಂದ ಎದುರಿಸಲು ಮತ್ತು ಸತತವಾಗಿ ಪ್ರಗತಿಯ ಪ್ರಯಾಣ ಕೈಗೊಳ್ಳಲು ಉತ್ತೇಜಿಸುತ್ತದೆ.
ಉಜ್ವಲ ಸ್ಫೂರ್ತಿಯ, ನವ ಉತ್ಸಾಹದ ದೃಶ್ಯ ವಿನ್ಯಾಸದ ಭಾಷೆಯು ಲಾಂಛನದಲ್ಲಿರು ದೀಪದ ಚಲನಶೀಲತೆಯನ್ನು ಹೆಚ್ಚಿಸುವ ಮೂಲಕ ಅವಿಷ್ಕಾರವನ್ನು ಬಿಂಬಿಸುತ್ತದೆ, ಯಥಾಸ್ಥಿತಿಗೆ ಸವಾಲೆಸೆಯುವ ಮತ್ತು ಸಂಪತ್ತು ನಿರ್ವಹಣೆಗೆ ಆಟದ ಮತ್ತು ಶಕ್ತಿಯುತ ವಿಧಾನವನ್ನು ಹೊಂದಲು ಸೂಚಿಸುತ್ತದೆ.
ಬಂಧನ್ ಎಎಂಸಿಯ ಸಿಇಒ ವಿಶಾಲ್ ಕಪೂರ್, `ನಾವು ಆಗಾಗ್ಗೆ ಭವಿಷ್ಯಕ್ಕೆ ತಮ್ಮ ಸಂಪತ್ತು ನಿರ್ಮಿಸಲು ಕಾಳಜಿ ಹೊಂದಿರುವ ಜನರನ್ನು ಕಾಣುತ್ತೇವೆ ಮತ್ತು ತಿಳಿದಿದ್ದೇವೆ, ಅವರು ಪ್ರಸ್ತುತವನ್ನು ಆನಂದಿಸುವುದನ್ನು ಮರೆತಿರುತ್ತಾರೆ. ಹಣಕಾಸು ಭದ್ರತೆಯು ಜನರಿಗೆ ಭವಿಷ್ಯದ ಬಗ್ಗೆ ಚಿಂತಿಸದೆ ಅವರ ಜೀವನದ ಶ್ರೇಷ್ಠ ಸಂಗತಿಗಳನ್ನು ಆನಂದಿಸಲು ಅವಕಾಶ ನೀಡುತ್ತದೆ. ನಮ್ಮ ವಿಶಿಷ್ಟ ಪ್ರಸ್ತಾವನೆ ಎಂದರೆ ಜನರಿಗೆ ಅವರ ಹಣವನ್ನು ಇಂದೇ ಆನಂದಿಸಲು ನೆರವಾಗುತ್ತಲೇ ನಾಳೆಗೆ ಸಂಪತ್ತನ್ನು ಜವಾಬ್ದಾರಿಯಿಂದ ನಿರ್ಮಿಸುವುದು.
ಬಡ್ತೇ ರಹೊ ನಮ್ಮ ಪ್ರವೃತ್ತಿಯ ಅಂತಃಸ್ಸತ್ವವನ್ನು ಶೋಧಿಸುತ್ತದೆ ಮತ್ತು ನಮ್ಮ ಮೌಲ್ಯಗಳು, ಧ್ಯೇಯ ಮತ್ತು ಬದ್ಧತೆಯ ಸರಳ ಆದರೆ ಸದೃಢ ಸ್ಟೇಟ್ ಮೆಂಟ್ ನ ಭರವಸೆ ನೀಡುತ್ತದೆ. ಇದು ಪ್ರಸ್ತುತವನ್ನು ಆನಂದಿಸುವ ಕರೆ, ಸಕಾರಾತ್ಮಕವಾಗಿರುವ, ಆನಂದ ಹಂಚಿಕೊಳ್ಳುವ ಮತ್ತು ಭವಿಷ್ಯದ ಸಾಧ್ಯತೆಗಳನ್ನು ಆವಿಷ್ಕರಿಸುವ ಕರೆಯಾಗಿದೆ’ ಎಂದರು.
ಹೊಸ ಬ್ರಾಂಡ್ ಧ್ವನಿಯನ್ನು ಆಟ ಮತ್ತು ಸೃಜನಶೀತೆಯ ಸ್ಪರ್ಶದಿಂದ ರೂಪಿಸಲಾಗಿದ್ದು ಪ್ರೇಕ್ಷಕರನ್ನು ಸಕ್ರಿಯಗೊಳಿಸುವ ಮತ್ತು ಅವರ ಭಾವನೆಗಳನ್ನು ಅನುರಣಿಸುವಂತೆ ಮಾಡಿದ್ದು ಬಂಧನ್ ಮ್ಯೂಚುಯಲ್ ಫಂಡ್ ಇತರೆ ಫಂಡ್ ಹೌಸ್ ಗಳಿಗಿಂತ ಭಿನ್ನ ಎನ್ನುವುದನ್ನು ತೋರುತ್ತದೆ. ಈ ಟ್ಯಾಗ್ ಲೈನ್ ಗೆ ಜೀವ ತುಂಬಲು ಬಂಧನ್ ಮ್ಯೂಚುಯಲ್ ಫಂಡ್ `ದಾಲ್ ಡಿಲೈಟ್’ ಮತ್ತು `ಟ್ಯೂಸ್ ಡೇ ಸೆಲೆಬ್ರೇಷನ್’ಎಂಬ ಎರಡು ಟಿ.ವಿ. ಜಾಹೀರಾತಿಗಳನ್ನು ಬಿಡುಗಡೆ ಮಾಡಿದ್ದು ಇವು ಜೀವನದ ಸಣ್ಣ ಕ್ಷಣಗಳನ್ನು ಆನಂದಿಸಲು ಆದ್ಯತೆ ನೀಡುತ್ತವೆ. ಈ ಮಲ್ಟಿಮೀಡಿಯಾ ಅಭಿಯಾನವು ಟಿ.ವಿ. ಜಾಹೀರಾತುಗಳಲ್ಲಿ, ಸಿನಿಮಾ ಜಾಹೀರಾತು, ಡಿಜಿಟಲ್ ಪ್ಲಾಟ್ ಫಾರಂಗಳು, ಹೊರಾಂಗಣ ಮತ್ತು ವಿಮಾನದ ಒಳಗಿನ ಪತ್ರಿಕೆಗಳಲ್ಲಿ ಪ್ರಸಾರವಾಗಲಿದೆ.
ಬಡ್ತೇ ರಹೊ ವಿಥ್ ಬಂಧನ್ ಮ್ಯೂಚುಯಲ್ ಫಂಡ್ ಟಿ.ವಿ. ಜಾಹೀರಾತು: ಈ ಜಾಹೀರಾತು ನೆಮಾ ಕುಟುಂಬದ ಪ್ರತಿಯೊಬ್ಬರೂ ಪ್ರತಿ ಕ್ಷಣವನ್ನೂ ಆನಂದಿಸುವ ಮತ್ತು ಜೀವನದ ಸಣ್ಣ ಪುಟ್ಟ ಸಂತೋಷಗಳನ್ನು ಸಂಭ್ರಮಿಸುವುದನ್ನು ತೋರಿಸುತ್ತದೆ. ಮೊದಲ ಟಿ.ವಿ. ಜಾಹೀರಾತು ದಾಲ್ ಡಿಲೈಟ್ ನೆಮಾ ಕುಟುಂಬವು ಮನೆಯಲ್ಲಿ ಪತಿ ತಯಾರಿಸಿದ ದಾಲ್ ಆನಂದಿಸುತ್ತಿರುತ್ತಾರೆ. ನೆರೆ ಮನೆಯವರು ಅದನ್ನು ಅಸೂಯೆಯಿಂದ ನೋಡುತ್ತಾರೆ. ದಾಲ್ ಡಿಲೈಟ್ ವೀಕ್ಷಿಸಿ:https://www.youtube.com/watch?v=afHwOQ1cdqs
ಎರಡನೆಯ ಟಿ.ವಿ.ಜಾಹೀರಾತಿನಲ್ಲಿ ವ್ಯಕ್ತಿಯು ಮನೆಗೆ ಪಾರ್ಸೆಲ್ ನೀಡುತ್ತಾ ಮನೆಯಲ್ಲಿನ ಸಂಭ್ರಮಾಚರಣೆ ಬಗ್ಗೆ ಪಕ್ಕದ ಮನೆಯವರಲ್ಲಿ ಕೇಳುತ್ತಾನೆ. ನೆರೆಯ ವ್ಯಕ್ತಿ ಮೊದಲ ಟಿ.ವಿ. ಜಾಹೀರಾತಿನಲ್ಲಿದ್ದಂತೆ ನೆಮಾ ಕುಟುಂಬಕ್ಕೆ ಸಂಭ್ರಮಿಸಲು ಸಂದರ್ಭವೇ ಬೇಕಿಲ್ಲ ಎನ್ನುತ್ತಾರೆ. ಅವರು ಮಂಗಳವಾರ ಒಳಗೊಂಡು ಎಲ್ಲವನ್ನೂ ಸಂಭ್ರಮಿಸುತ್ತಾರೆ ಎನ್ನುತ್ತಾರೆ. ಟ್ಯೂಸ್ ಡೇ ಸೆಲೆಬ್ರೇಷನ್ ಇಲ್ಲಿ ವೀಕ್ಷಿಸಿ: –https://www.youtube.com/watch?