ಹೊರಬಂತು `ಮದನಿಕ’ ಟೀಸರ್ ಮತ್ತು ಹಾಡು
ಹೊಸ ಅವತಾರದಲ್ಲಿ ಗ್ಲಾಮರ್ ಗರ್ಲ್ ರಾಗಿಣಿ
ತೆರೆಗೆ ಬರಲು ತಯಾರಾಗುತ್ತಿದೆ `ಮದನಿಕ’
ಹಳೇಗನ್ನಡ-ಹೊಸಗನ್ನಡದ ಸಂಗಮದಲ್ಲಿ ಅರಳಿದ `ಮದನಿಕೆ’
ಇಲ್ಲಿಯವರೆಗೆ ಗ್ಲಾಮರಸ್ ಮತ್ತು ಆ್ಯಕ್ಷನ್ ಪಾತ್ರಗಳ ಮೂಲಕ ಕನ್ನಡ ಸಿನಿಪ್ರಿಯರ ಗಮನ ಸೆಳೆದಿರುವ ನಟಿ ರಾಗಿಣಿ ದ್ವಿವೇದಿ ಈ ಬಾರಿ `ಮದನಿಕ’ ಎಂಬ ಪಿರಿಯಾಡಿಕ್ ಪಾತ್ರದ ಮೂಲಕ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ. ಮದನಿಕ’ ಎಂಬುದು ದೇವಾಲಯಗಳಲ್ಲಿ ಕಾಣುವಂಥ ಶಿಲ್ಪಕಲೆಯ ಒಂದು ಪ್ರಾಕಾರವಾಗಿದ್ದು, ಚಿತ್ರದ ಕಥೆಗೆ ಸೂಕ್ತವೆಂಬ ಕಾರಣಕ್ಕೆ ಚಿತ್ರತಂಡ ಈ ಹೆಸರನ್ನು ತಮ್ಮ ಚಿತ್ರಕ್ಕೆ ಇಟ್ಟುಕೊಂಡಿದೆ. ಈಗಾಗಲೇ ಸದ್ದಿಲ್ಲದೆ `ಮದನಿಕ’ ಸಿನಿಮಾದ ಬಹುತೇಕ ಕೆಲಸಗಳು ಪೂರ್ಣಗೊಂಡಿದ್ದು, ಇದೀಗ ಚಿತ್ರತಂಡ `ಮದನಿಕ’ ಚಿತ್ರದ ಟೀಸರ್ ಮತ್ತು ಆಡಿಯೋವನ್ನು ಬಿಡುಗಡೆಗೊಳಿಸಿದೆ.
`ಎಸ್.ಪಿ.ಆರ್ ಪ್ರೊಡಕ್ಷನ್ಸ್’ ಮತ್ತು `ಸಖರ್ಥ್ ಡಿಜಿಟಲ್ ಹೌಸ್’ ಬ್ಯಾನರಿನಲ್ಲಿ ಸುಜಾತ ಲಕ್ಷಿ÷್ಮÃ, ಕುಮಾರಸ್ವಾಮಿ ನಿರ್ಮಿಸಿರುವ `ಮದನಿಕ’ ಚಿತ್ರಕ್ಕೆ ಬಿ. ಎಸ್. ಸಂಜಯ್ ನಿರ್ದೇಶನವಿದೆ. ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಚಿತ್ರತಂಡದ ಸದಸ್ಯರು ಹಾಜರಿದ್ದು, `ಮದನಿಕ’ ಚಿತ್ರದ ಟೀಸರ್ ಮತ್ತು ಹಾಡನ್ನು ಬಿಡುಗಡೆಗೊಳಿಸಿ ಚಿತ್ರದ ಬಗ್ಗೆ ಮಾತನಾಡಿದರು.
ಮೊದಲಿಗೆ `ಮದನಿಕ’ ಬಗ್ಗೆ ಮಾತನಾಡಿದ ಚಿತ್ರದ ನಿರ್ದೇಶಕ ಬಿ. ಎಸ್. ಸಂಜಯ್, `ಇದೊಂದು ಕಾಲ್ಪನಿಕ ಕಥೆ. ಸುಮಾರು ನಾಲ್ಕು ನೂರು ವರ್ಷಗಳ ಹಿಂದಿನಲ್ಲಿ ನಡೆಯುವಂಥ ಕಥೆಯಿದು. ಸಿನಿಮಾದಲ್ಲಿ ಎರಡು ಕಾಲಘಟ್ಟದ ಹಿನ್ನೆಲೆಯಲ್ಲಿ ಈ ಕಥೆ ತೆರೆದುಕೊಳ್ಳುತ್ತದೆ. ಹಳೇ ಗನ್ನಡ ಮತ್ತು ಹೊಸ ಕನ್ನಡ ಎರಡೂ ಶೈಲಿಯನ್ನೂ ಸಂದರ್ಭಕ್ಕೆ ತಕ್ಕಂತೆ ಈ ಸಿನಿಮಾದ ಸಂಭಾಷಣೆಯಲ್ಲಿ ಬಳಸಿಕೊಂಡಿದ್ದೇವೆ. ಸುಮಾರು ಎರಡು ವರ್ಷಗಳ ಕಾಲ ಸಿನಿಮಾದ ಪೋಸ್ಟ್ ಪ್ರೊಡಕ್ಷನ್ಸ್ ಕೆಲಸಗಳಿಗೆ ಸಮಯ ತೆಗೆದುಕೊಂಡಿದ್ದೇವೆ’ ಎಂದರು.
`ಸಿನಿಮಾದ ಕಥೆಗೆ ತಕ್ಕಂತೆ ಸುಮಾರು ಹತ್ತು ಹಾಡುಗಳು ಈ ಸಿನಿಮಾದಲ್ಲಿದೆ. ಎಲ್ಲಾ ಹಾಡುಗಳು ಕೂಡ ಶಾಸ್ತ್ರೀಯವಾಗಿ ಮೂಡಿಬಂದಿದೆ. ಹಳೆಗನ್ನಡದ ಮತ್ತು ಹೊಸಕನ್ನಡ ಶೈಲಿಯಲ್ಲಿ ಸಾಹಿತ್ಯವಿದೆ’ ಎಂದು ಚಿತ್ರದ ಹಾಡುಗಳು ಮತ್ತು ಸಾಹಿತ್ಯದ ಬಗ್ಗೆ ಮಾಹಿತಿ ನೀಡಿದರು ಸಂಗೀತ ನಿರ್ದೇಶಕ ಸಲಾಂ ವೇರೋಲಿ.
`ಮದನಿಕ’ ಚಿತ್ರದ ಬಗ್ಗೆ ಮಾತನಾಡಿ ನಟಿ ರಾಗಿಣಿ ದ್ವಿವೇದಿ, `ಇದೊಂದು ಟೈಂ ಟ್ರಾವೆಲ್ ಸಿನಿಮಾ. ಎರಡು ಕಾಲಘಟ್ಟದಲ್ಲಿ ಈ ಸಿನಿಮಾದ ಕಥೆ ಸಾಗುತ್ತದೆ. ನನಗೂ ಕೂಡ ಈ ಸಿನಿಮಾದಲ್ಲಿ ಎರಡು ಥರದ ಶೇಡ್ ಇರುವಂಥ ಪಾತ್ರವಿದೆ. ಲವ್, ಆ್ಯಕ್ಷನ್, ಥ್ರಿಲ್ಲರ್, ಕ್ಲಾಸಿಕಲ್ ಮ್ಯೂಸಿಕ್ ಎಲ್ಲವೂ ಈ ಸಿನಿಮಾದಲ್ಲಿದೆ. ಇದು ನಮ್ಮ ನೇಟಿವಿಟಿಯನ್ನು ಇಟ್ಟುಕೊಂಡು ಮಾಡಿರುವ ಸಿನಿಮಾ. ಕಲಾವಿದರಿಗೆ ತಮ್ಮ ವೃತ್ತಿ ಜೀವನದಲ್ಲಿ ಬಹಳ ಅಪರೂಪಕ್ಕೆ ಇಂಥ ಪಾತ್ರಗಳು ಸಿಗುತ್ತದೆ. ಅಂಥ ಅಪರೂಪದ ಪಾತ್ರ ಈ ಸಿನಿಮಾದಲ್ಲಿ ನನಗೆ ಸಿಕ್ಕಿದೆ. `ಮದನಿಕ’ ಸಿನಿಮಾದಲ್ಲಿ ಅಭಿನಯಿಸಿದ್ದು, ತುಂಬ ಒಳ್ಳೆಯ ಅನುಭವ. ಆದಷ್ಟು ಬೇಗ ಸಿನಿಮಾ ತೆರೆಗೆ ಬರಲಿದ್ದು, ಸಿನಿಮಾದ ಮೇಲೆ ಸಾಕಷ್ಟು ನಿರೀಕ್ಷೆಯಿದೆ’ ಎಂದು ತಮ್ಮ ಪಾತ್ರ ಪರಿಚಯ ಮಾಡಿಕೊಟ್ಟರು.
`ಮದನಿಕ’ ಚಿತ್ರದಲ್ಲಿ ರಾಗಿಣಿ ದ್ವಿವೇದಿ ಅವರೊಂದಿಗೆ ಧರ್ಮ ಕೀರ್ತಿರಾಜ್, ದೇವ್ ಗಿಲ್, ಹರೀಶ್ ರಾಜ್, ರಾಜ್ವಿ, ಶಶಿಕುಮಾರ್ ಮೊದಲಾದ ಕಲಾವಿದರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. `ಮದನಿಕ’ ಚಿತ್ರಕ್ಕೆ ಆರ್. ಗಿರಿ ಛಾಯಾಗ್ರಹಣ, ಚಿತ್ರದಲ್ಲಿ ಒಟ್ಟು ಹತ್ತು ಹಾಡುಗಳಿದ್ದು ಶಾಸ್ತ್ರೀಯ ಶೈಲಿಯಲ್ಲಿರುವ ಈ ಹಾಡುಗಳಿಗೆ ಸಲಾಂ ವೇರೋಲಿ ಸಂಗೀತ ಸಂಯೋಜಿಸಿದ್ದು, ಕೆ. ಕಲ್ಯಾಣ್, ಡಾ. ದೇವಾನಂದ್ ಮೊದಲಾದವರು ಸಾಹಿತ್ಯ ಒದಗಿಸಿದ್ದಾರೆ. ಮದನ್ ಹರಿಣಿ, ತ್ರಿಭುವನ್ ಹಾಡುಗಳಿಗೆ ನೃತ್ಯ ಸಂಯೋಜಿಸಿದ್ದಾರೆ. ಅಂದಹಾಗೆ ಇದೇ ಜುಲೈ ವೇಳೆಗೆ `ಮದನಿಕ’ ಸಿನಿಮಾವನ್ನು ತೆರೆಗೆ ತರುವ ಯೋಜನೆಯಲ್ಲಿದೆ ಚಿತ್ರತಂಡ.
`ಮದನಿಕ’ ಟೀಸರ್, ಆಡಿಯೋ ಬಿಡುಗಡೆ `ಮದನಿಕ’ ಹಾಡುಗಳ ಸಂಭ್ರಮ



