ಚನ್ನೈ: ತನ್ನ ಪಕ್ಷದ ಶಾಸಕರನ್ನು ಖರೀದಿಸಲು ಯತ್ನ ನಡೆಯುತ್ತಿದೆ ಎಂದು ಎಐಎಡಿಎಂಕೆ ಪಕ್ಷ ಆರೋಪಿಸಿದೆ.
ಪುದುಚೇರಿ ರೆಸಾರ್ಟ್ನಲ್ಲಿರುವ ತಮ್ಮ ಪಕ್ಷದ ಶಾಸಕರನ್ನು ಖರೀದಿಸಲು ಟಿವಿಕೆ ಶಾಸಕರು ಯತ್ನ ನಡೆಸಿದ್ದಾರೆ ಎಂದು ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಎಐಎಡಿಎಂಕೆ ಪಕ್ಷದ ಎಡಪ್ಪಾಡಿ ಪಳನಿಸ್ವಾಮಿ ಆರೋಪಿಸಿದ್ದಾರೆ. ಈಗಾಗಲೇ ಟಿವಿಕೆ ಪಕ್ಷದ ವಿಜಯ್ಗೆ ಬೆಂಬಲ ನೀಡುವ ಸಂಬಂಧ ಎಐಎಡಿಎಂಕೆಯಲ್ಲಿ ಎರಡು ಬಣಗಳಾಗಿ ಒಂದು ಬಣ ವಿಜಯಗೆ ಬೆಂಬಲ ಸೂಚಿಸುವ ವಿಷಯದಲ್ಲಿ ಒಲವು ವ್ಯಕ್ತಪಡಿಸಿದೆ ಈ ಹಿನ್ನೆಲೆಯಲ್ಲಿ 20ಕ್ಕೂ ಹೆಚ್ಚು ಶಾಸಕರು ಪುದುಚೇರಿಯ ರೆಸಾರ್ಟ್ನಲ್ಲಿ ಬೀಡು ಬಿಟ್ಟಿದ್ದಾರೆ. ಆ ಶಾಸಕರನ್ನು ಸಂಪರ್ಕಿಸುವ ಯತ್ನವನ್ನು ಟಿವಿಕೆ ಮಾಡುತ್ತಿದೆ ಎಂದು ಆರೋಪಿಸಲಾಗಿದೆ. ಈ ಎಲ್ಲದರ ಮಧ್ಯೆ ವಿಜಯ್ಗೆ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲು ಹಲವು ಅಡ್ಡಿಗಳನ್ನು ಒಡ್ಡಲಾಗುತ್ತಿದೆ ಎಂದು ಆರೋಪಿಸಿ ಟಿವಿಕೆ ಮತ್ತು ಕಾಂಗ್ರೆಸ್ ತಮಿಳುನಾಡಿನಲ್ಲಿ ಪ್ರತಿಭಟನೆ ನಡೆಸಿವೆ.
ಟಿವಿಕೆ ಪಕ್ಷದ ಕಾರ್ಯಕರ್ತರು ಚನ್ನೈನ ಲೋಕಭವನದ ಮುಂದೆ ಪ್ರತಿಭಟನೆ ನಡೆಸಿ ರಾಜ್ಯಪಾಲರು ಅನಗತ್ಯ ವಿಳಂಬ ದೋರಣೆ ತೋರುತ್ತಿದ್ದಾರೆ ಎಂದು ಆರೋಪಿಸಿ ಪ್ರತಿಭಟನೆ ನಡೆಸಲಾಗುತ್ತಿದೆ. ಕೇಂದ್ರ ಸರ್ಕಾರದ ಅನಗತ್ಯ ಅಡ್ಡಿಯಿಂದಾಗಿ ಈ ಕ್ರಮ ಅನುರಿಸಲಾಗಿದೆ ಎಂದು ಅಸಮಾಧಾನ ಹೊರ ಹಾಕಿದ್ದಾರೆ. ಈ ಸಂದರ್ಭದಲ್ಲಿ ಪೊಲೀಸರು ಪ್ರತಿಭಟನಾಕಾರರನ್ನು ವಶಕ್ಕೆ ಪಡೆದು ಲೋಕಭವನದ ಮುಂದೆ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದಾರೆ.
ಕಾಂಗ್ರೆಸ್ ಪಕ್ಷವು ಸಹ ರಾಜ್ಯಪಾಲರ ದೋರಣೆ ವಿರೋಧಿಸಿ ತಮಿಳುನಾಡು ಜಿಲ್ಲೆಯಾದ್ಯಂತ ಪ್ರತಿಭಟನೆ ನಡೆಸಿದೆ.
ಕುದುರೆ ವ್ಯಾಪಾರದ ಕಿಡಿ ಟಿವಿಕೆ ಶಾಸಕನ ವಿರುದ್ಧ ಎಐಎಡಿಎಂಕೆ ಪಳನಿಸ್ವಾಮಿ ಆರೋಪ



