ಚನ್ನೈ: ತಮಿಳುನಾಡಿನಲ್ಲಿ ಸರ್ಕಾರ ರಚಿಸುವ ಸಂಬಂಧ ಟಿವಿಕೆ ಮುಖ್ಯಸ್ಥ ವಿಜಯ್ ಪ್ರಯತ್ನ ನಡೆಸುತ್ತಿರುವ ಬೆನ್ನಲ್ಲೇ ಇತ್ತ ಎಐಎಡಿಎಂಕೆ ಸರ್ಕಾರ ರಚಿಸಲಿದೆ ಎಂದು ಆ ಪಕ್ಷದ ಸಂಸದ ತಂಬಿದೊರೈ ಹೇಳಿಕೆ ನೀಡುವ ಮೂಲಕ ಆಶ್ಚರ್ಯ ಮೂಡಿಸಿದ್ದಾರೆ. ಎಐಎಡಿಎಂಕೆ ಹಾಗೂ ಡಿಎಂಕೆ ಒಟ್ಟುಗೂಡಿ ಸರ್ಕಾರ ರಚಿಸುತ್ತೇವೆ ಎಂದು ತಿಳಿಸಿದ್ದಾರೆ.
ವಿಜಯ್ ಅವರನ್ನು ಅಧಿಕಾರದಿಂದ ದೂರವಿಡುವ ನಿಟ್ಟಿನಲ್ಲಿ ಈ ಪ್ರಯತ್ನ ನಡೆಯುತ್ತಿದೆ ಎಂದು ಅವರು ತಿಳಿಸಿದ್ದಾರೆ. ತಂಬಿದರೈ ಅವರ ಹೇಳಿಕೆ ತಮಿಳುನಾಡು ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ. ಎನ್ಡಿಎ ಮೈತ್ರಿಕೂಟದಲ್ಲಿ ಗುರುತಿಸಿಕೊಂಡಿರುವ ಎಐಎಡಿಎಂಕೆ ಪಕ್ಷ ಶೀಘ್ರದಲ್ಲಿಯೇ ಮೈತ್ರಿಕೂಟದಿಂದ ಹೊರ ಬರಲಿದೆ ಎಂದು ಹೇಳಲಾಗಿದೆ.
ಎಐಎಡಿಎಂಕೆ ಹಾಗೂ ಡಿಎಂಕೆ ಮೈತ್ರಿಯನ್ನು ಕಾಂಗ್ರೆಸ್ ಪಕ್ಷದ ಮುಖಂಡ ಮಾಣಿಕ್ ಠಾಗೂರ್ ತೀವ್ರವಾಗಿ ವಿರೋಧಿಸಿದ್ದಾರೆ. ಜಾತ್ಯಾತೀತ ಕಾರಣ ಹಾಗೂ ತಮಿಳುನಾಡು ಹಿತಕ್ಕಾಗಿ ಈ ಎರಡು ಪಕ್ಷಗಳು ಒಂದಾಗುತ್ತಿಲ್ಲ. ವಿಜಯ್ ಅವರನ್ನು ಅಧಿಕಾರದಿಂದ ದೂರವಿಡುವುದೇ ಇವರ ಉದ್ದೇಶವಾಗಿದೆ ಎಂದು ದೂರಿದ್ದಾರೆ.
ಎಐಎಡಿಎಂಕೆ ಸರ್ಕಾರ ತಂಬಿದೊರೈ ಹೇಳಿಕೆ



