ಬೆಂಗಳೂರು: 2026ರ ಐಪಿಎಲ್ ಫೈನಲ್ ಪಂದ್ಯ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯೋದು ಡೌಟ್ ಎನ್ನಲಾಗುತ್ತಿದೆ.ಹಾಲಿ ಚಾಂಪಿಯನ್ಸ್ ಆರ್ಸಿಬಿಯ ತವರು ತಾಣ ಬೆಂಗಳೂರಿನ ಚಿನ್ನಸ್ವಾಮಿಯಲ್ಲಿ ನಡೆಯಬೇಕಿರುವ ಫೈನಲ್ ಪಂದ್ಯ ಬೇರೆಡೆಗೆ ಸ್ಥಳಾಂತರಗೊಳ್ಳುವ ಸಾಧ್ಯತೆಯಿದೆ. ಕರ್ನಾಟಕದ ಎಂಎಲ್ಎ, ಎಂಎಲ್ಸಿ ಮತ್ತು ಎಂಪಿ
ಗಳಿಗೆ ವಿತರಿಸಲಾಗುತ್ತಿರುವ ಉಚಿತ ಟಿಕೆಟ್ನ ವಿಚಾರದಿಂದಾಗಿ ಉಂಟಾಗಿರುವ ವಿವಾದ ಇದಕ್ಕೆಲ್ಲ ಕಾರಣ ಎಂದು ಮೂಲಗಳು ತಿಳಿಸಿವೆ.ಐಪಿಎಲ್ನಲ್ಲಿ ವಾಡಿಕೆಯಂತೆ ಹಾಲಿ ಚಾಂಪಿಯನ್ಗಳ ತವರು ತಾಣದಲ್ಲಿ ಫೈನಲ್ ಪಂದ್ಯ ನಡೆಯುತ್ತದೆ. ಅದರಂತೆ ಈ ಬಾರಿಯೂ 1 ಪ್ಲೇಆಫ್ ಮತ್ತು ಫೈನಲ್ ಪಂದ್ಯ ಚಿನ್ನಸ್ವಾಮಿಯಲ್ಲಿ ನಡೆಯುತ್ತದೆ ಎಂದು ನಿರೀಕ್ಷಿಸಲಾಗಿತ್ತು, ಆದರೆ, ಎಂಎಲ್ಎ, ಎಂಎಲ್ಸಿ ಮತ್ತು ಎಂಪಿ ಹೀಗೆ ಸುಮಾರು 299 ಮಂದಿಗೆ ತಲಾ 2ರಂತೆ ಉಚಿತ ಟಿಕೆಟ್ಗಳನ್ನು ನೀಡಲಾಗುತ್ತಿದ್ದರೂ, ಪ್ರತಿಯೊಬ್ಬರಿಗೆ ತಲಾ 4-5 ಟಿಕೆಟ್ ನೀಡಬೇಕೆನ್ನುವ ಒತ್ತಡ ಕೇಳಿಬ
ರುತ್ತಿದೆ. ಹೀಗಾಗಿ ಫೈನಲ್ ಪಂದ್ಯವನ್ನು ಬೇರೆಡೆಗೆ ಸ್ಥಳಾಂತರಿಸುವ ಮೂಲಕ ಈ `ಎಂಎಲ್ಎ ಟಿಕೆಟ್ಕಿರಿಕಿರಿ’ಯಿಂದಲೇ ದೂರ ಉಳಿಯಲು ಬಿಸಿಸಿಐ ಯೋಚಿಸುತ್ತಿದೆ ಎನ್ನಲಾಗಿದೆ.ಕಳೆದ ಬಾರಿ ಕಾಲ್ತುಳಿತದಲ್ಲಿ 11 ಮಂದಿ ಸಾವಿಗೀಡಾದ ಬಳಿಕ ಚಿನ್ನಸ್ವಾಮಿಯಲ್ಲಿ ಪ್ರಮುಖ ಪಂದ್ಯಗಳೇ ನಿಲುಗಡೆಯಾಗಿದ್ದವು. ಸದ್ಯ ಮತ್ತೆ ಪಂದ್ಯಗಳನ್ನು ನಡೆಸಲು ಅನುಮತಿ ಸಿಕ್ಕಿದೆಯಾದರೂ ಈ ಮಧ್ಯೆ ಎಂಎಲ್ಎಗಳ ಫ್ರೀ ಟಿಕೆಟ್ ಕಿರಿಕಿರಿ ಜೋರಾಗುತ್ತಿದೆ ಎನ್ನಲಾಗುತ್ತಿದೆ. ರಾಜ್ಯದ ಸುಮಾರು 299 ಜನಪ್ರತಿನಿಧಿಗಳಿಗೆ ತಲಾ 2ರಂತೆ 598 ತಲಾ 4-5ಕ್ಕೆ ಹೆಚ್ಚಿಸಿದರೆ ಕ್ರಿಕೆಟ್ ಸಂಸ್ಥೆಗಳಿಗೆ ಇನ್ನೂ ದೊಡ್ಡ ಹೊರೆಯಾಗುತ್ತದೆ. ಇದೇ ಬಿಸಿಸಿಐಗೆ ತಲೆನೋವಾಗಿರುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ
ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಐಪಿಎಲ್ ಫೈನಲ್ ಡೌಟ್?



