ನವದೆಹಲಿ: ವಾಹನ ಸವಾರರಿಗೆ ಮತ್ತೆ ಶಾಕ್ ಎದುರಾಗಿದೆ. 10 ದಿನಗಳಲ್ಲಿ ಮೂರನೇ ಬಾರಿಗೆ ಪೆಟ್ರೋಲ್, ಡೀಸೆಲ್ ದರ ಏರಿಕೆ ಮಾಡಲಾಗಿದೆ.
ಈಗಾಗಲೇ ಎರಡು ಬಾರಿ ಬೆಲೆ ಹೆಚ್ಚಳ ಬೆನ್ನಲ್ಲೇ ಇಂದು ಮತ್ತೆ ದರ ಏರಿಸಲಾಗಿದೆ. ಇಂದು ಪೆಟ್ರೋಲ್ ಲೀಟರ್ ಒಂದಕ್ಕೆ 87 ಪೈಸೆ ಮತ್ತು ಡೀಸೆಲ್ ಲೀಟರ್ 91 ಪೈಸೆ ಹೆಚ್ಚಳ ಮಾಡಲಾಗಿದೆ. ಇದರ ಜತೆಜತೆಯಲ್ಲೇ ಸಿಎನ್ಜಿ ದರವನ್ನು ಸಹ ಹೆಚ್ಚಿಸಲಾಗಿದೆ. ಸಿಎನ್ಜಿ ದರವೂ ಈ ಹಿಂದೆ ಅಂದರೆ 9 ದಿನದಲ್ಲಿ ಎರಡು ಬಾರಿ ಹೆಚ್ಚಳ ಮಾಡಲಾಗಿತ್ತು. ಇಂದು ಮತ್ತೆ ಕೆಜಿಗೆ 1 ರೂ. ಹೆಚ್ಚಿಸಲಾಗಿದೆ.
ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ 107.14 ರೂ. ಹಾಗೂ ಡೀಸೆಲ್ ಬೆಲೆ 95.04 ರೂ. ಆಗಿದೆ. ಪೆಟ್ರೋಲ್ ಬೆಲೆ ಈಗ ಲೀಟರ್ಗೆ 99.51 ರೂ., ಡೀಸೆಲ್ ಬೆಲೆ ಲೀಟರ್ಗೆ 92.49 ರೂ. ಆಗಿದೆ. ಮಧ್ಯಪ್ರಾಚ್ಯ ಸಂಘರ್ಷದಿAದಾಗಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಕೆಯಾಗಿದೆ. ಈ ಹಿನ್ನೆಲೆ ಮೇ 15 ರಿಂದ ಈಚೆಗೆ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳು ದರವನ್ನು ಹೆಚ್ಚಿಸಿವೆ.
ಮೇ 15 ರಂದು ಬೆಲೆಗಳನ್ನು ಲೀಟರ್ಗೆ 3 ರೂ. ಹೆಚ್ಚಿಸಲಾಯಿತು. ನಂತರ ಮೇ 19 ರಂದು 90 ಪೈಸೆ ಹೆಚ್ಚಳವಾಯಿತು. ಒಟ್ಟಾರೆಯಾಗಿ, ದರಗಳು ಲೀಟರ್ಗೆ ಸುಮಾರು 5 ರೂ.ಗಳಷ್ಟು ಹೆಚ್ಚಾಗಿದೆ.
ಮಧ್ಯಪ್ರಾಚ್ಯದಲ್ಲಿ ತಲೆದೂರಿರುವ ಯುದ್ಧದ ವಾತಾವರಣ ಮತ್ತು ಯುಎಸ್-ಇರಾನ್ ನಡುವಿನ ಶಾಂತಿ ಮಾತುಕತೆಗಳ ಸುತ್ತಲಿನ ಅನಿಶ್ಚಿತತೆಯೇ ಈ ಬೆಲೆ ಏರಿಕೆಗೆ ಪ್ರಮುಖ ಕಾರಣವಾಗಿದೆ. ಇದರಿಂದಾಗಿ ಅಂತರರಾಷ್ಟಿçÃಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ತೀವ್ರ ಏರಿಳಿತ ಕಾಣುತ್ತಿವೆ. ಶುಕ್ರವಾರ ಬ್ರೆಂಟ್ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ 104 ಡಾಲರ್ಗಿಂತ ಹೆಚ್ಚಾಗಿದ್ದರೆ, ಯುಎಸ್ ವೆಸ್ಟ್ ಟೆಕ್ಸಾಸ್ ಇಂಟರ್ಮೀಡಿಯೇಟ್ ಕಚ್ಚಾ ತೈಲವು ಬ್ಯಾರೆಲ್ಗೆ 97 ಡಾಲರ್ ಆಸುಪಾಸಿನಲ್ಲಿ ವಹಿವಾಟು ನಡೆಸಿದೆ. ಜಾಗತಿಕ ಪೂರೈಕೆಯ ಕಳವಳಗಳ ಮಧ್ಯೆ ಒಂದು ಹಂತದಲ್ಲಿ ಕಚ್ಚಾ ತೈಲದ ಬೆಲೆ ಬ್ಯಾರೆಲ್ಗೆ ಬರೋಬ್ಬರಿ 111 ಡಾಲರ್ಗೆ ತಲುಪಿತ್ತು.
ಪದೇ ಪದೇ ತೈಲ ದರ ಹೆಚ್ಚುತ್ತಿದ್ದರೂ ರಾಜ್ಯ ಸರ್ಕಾರಗಳು ತಾವು ವಿಧಿಸಿರುವ ತೆರಿಗೆಯನ್ನು ಮಾತ್ರ ಯಾವುದೇ ಕಾರಣಕ್ಕೂ ಕಡಿಮೆ ಮಾಡುತ್ತಿಲ್ಲ. ಈ ಬಗ್ಗೆ ಪೆಟ್ರೋಲ ಡಿಸೇಲ್ ಮೇಲಿನ ತೆರಿಗೆಯನ್ನು ಕಡಿಮೆ ಮಾಡಿ ಸವಾರರಿಗೆ ಹೊರೆ ಕಡಿಮೆ ಮಾಡಬಹುದಲ್ಲ ಎಂಬ ಪ್ರಶ್ನೆಗೆ, ಈ ಬಗ್ಗೆ ಪ್ರಶ್ನೆ ಮಾಡಬೇಡಿ, ಆ ಬಗ್ಗೆ ಏನು ಕೇಳಬೇಡಿ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ ಎನ್ನಲಾಗಿದೆ.
ತೈಲ ಬೆಲೆ ಪದೇ ಪದೇ ಏರಿಕೆಯಾಗುತ್ತಿದ್ದರೂ ಇದಕ್ಕೆ ಕಾರಣ ಅಮೆರಿಕ ಇರಾನ್ ನಡುವಿನ ಯುದ್ಧ ಸಂಘರ್ಷವೇ ಎಂದು ಹೇಳಲಾಗುತ್ತಿದೆ. ಆದರೆ ಯುದ್ಧವನ್ನು ನಿಲ್ಲಿಸಲು ಯಾರೂ ಸಹ ಯಾವುದೇ ರಾಷ್ಟç ಮುಂದಾಗಿರುವುದೇ ಇರುವುದು ಜನತೆಯನ್ನು ಸಂಕಷ್ಟಕ್ಕೀಡಾಗುವAತೆ ಮಾಡಲಾಗುತ್ತಿದೆ ಎಂಬ ಆಕ್ರೋಶದ ಮಾತುಗಳು ಕೇಳಿಬರುತ್ತಿವೆ.
ವಾಹನ ಸವಾರರಿಗೆ ಬಿಗ್ ಶಾಕ್ ಪೆಟ್ರೋಲ್ 87, ಡೀಸೆಲ್ 91 ಪೈಸೆ ಏರಿಕೆ 10 ದಿನದಲ್ಲಿ ಮೂರನೇ ಬಾರಿಗೆ ತೈಲ ದರ ಹೆಚ್ಚಳ



