ಬ್ರಿಸ್ಟಲ್: ಇಂಗ್ಲೆಂಡ್ ವಿರುದ್ಧ ನಡೆಯುತ್ತಿರುವ ಐದು ಪಂದ್ಯಗಳ ಟಿ20 ಸರಣಿಯ ಮೂರನೇ ಪಂದ್ಯದಲ್ಲಿ ಭಾರತ ತಂಡವು 125 ರನ್ಗಳ ಹೀನಾಯ ಸೋಲು ಅನುಭವಿಸಿತು. ಈ ಸೋಲಿನೊಂದಿಗೆ ಸರಣಿಯಲ್ಲಿ 2-0 ಅಂತರದ ಹಿನ್ನಡೆಯನ್ನು ಅನುಭವಿಸಿತು. ಇದೀಗ ಟೀಂ ಇಂಡಿಯಾ ಸರಣಿ ಗೆಲ್ಲಲು ಸಾಧ್ಯವಿಲ್ಲ. ಕಡೆಯ ಪಕ್ಷ ಸರಣಿಯನ್ನು 2-2 ರ ಸಮಬಲದೊಂದಿಗೆ ಅಂತ್ಯಗೊಳಿಸಲು ಟೀಂ ಇಂಡಿಯಾ ಪ್ರಯತ್ನಿಸಬೇಕಿದೆ. ತಂಡದಲ್ಲಿ ಸ್ಟಾರ್ ಆಟಗಾರರ ದಂಡೇ ಇದ್ದರೂ ಅವರ್ಯಾರು ತಂಡಕ್ಕೆ ಗೆಲುವು ತಂದುಕೊಡುವAತಹ ಪ್ರದರ್ಶನ ನೀಡುತ್ತಿಲ್ಲ. ಹೀಗಾಗಿ ಶ್ರೇಯಸ್ ಅಯ್ಯರ್ ಪಡೆಗೆ ಗೆಲುವು ಎಂಬುದು ಮರಿಚಿಕೆಯಾಗಿ ಉಳಿದಿದೆ. ಹೀಗಾಗಿ 4ನೇ ಟಿ20 ಪಂದ್ಯವನ್ನು ಗೆಲ್ಲಬೇಕಾದರೆ, ಟೀಂ ಇಂಡಿಯಾ ವಿಶೇಷ ತಂತ್ರದೊಂದಿಗೆ ಹಾಗೂ ಬಲಿಷ್ಠ ಪ್ಲೇಯಿಂಗ್ 11ನೊಂದಿಗೆ ಕಣಕ್ಕಿಳಿಯಬೇಕಿದೆ.
ನಾಯಕನ ಸ್ಥಾನಕ್ಕೆ ಬಡ್ತಿ ಪಡೆದ ನಂತರ ಮೊದಲ ಗೆಲುವಿನ ಹುಡುಕಾಟದಲ್ಲಿರುವ ಶ್ರೇಯಸ್ ಅಯ್ಯರ್ ನಿರ್ಧಾರಗಳ ಜತೆಗೆ ಮುಖ್ಯ ಕೋಚ್ ಗಂಭೀರ್ ಮತ್ತು ಮುಖ್ಯ ಆಯ್ಕೆಗಾರ ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆ ಸಮಿತಿ ಹಲವು ಟೀಕೆ ಎದುರಿಸುತ್ತಿವೆ. ಮೂರು ಪಂದ್ಯಗಳ ವೈಲ್ಯದ ನಂತರ ಹನ್ನೊಂದರ ಬಳಗದಿಂದ ಸಂಜು ಸ್ಯಾಮ್ಸನ್ರನ್ನು ಹೊರಗಿಟ್ಟ ನಂತರ, ಉಪನಾಯಕ ತಿಲಕ್ ವರ್ಮರನ್ನೂ ಕೈಬಿಡಬೇಕೆಂಬ
ಅಭಿಪ್ರಾಯ ವ್ಯಕ್ತವಾಗಿದೆ.
2012ರ ನಂತರ ಇಂಗ್ಲೆAಡ್ ವಿರುದ್ಧ ಟಿ20 ಸರಣಿ ಸೋಲದ ಅಜೇಯ ದಾಖಲೆಯನ್ನು ಉಳಿಸಿಕೊಳ್ಳಲು ಭಾರತಕ್ಕೆ ಗೆಲುವು ಅನಿವಾರ್ಯ ಎನಿಸಿದೆ. ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮ ಆರಂಭಿಕರಾಗಿ ಮುಂದುವರಿಯಲಿದ್ದು, ವಿಕೆಟ್ ಕೀಪರ್-ಬ್ಯಾಟರ್ ಆಗಿ ಇಶಾನ್ ಕಿಶನ್ ಮೇಲೆ ಹೆಚ್ಚಿನ ನಿರೀಕ್ಷೆ ಇದೆ. ತಿಲಕ್ ವರ್ಮ ರನ್ಗಳಿಸಲು ಪರದಾಡುತ್ತಿರುವುದು ಮಧ್ಯಮ ಕ್ರಮಾಂಕದಲ್ಲಿ ಸಮಸ್ಯೆ ಎನಿಸಿದೆ. ಬೌಲಿಂಗ್ ವಿಭಾಗದಲ್ಲಿಯೂ ವರುಣ್ ಚಕ್ರವರ್ತಿ ಆಡಿರುವ 2ರಲ್ಲಿ ಏಳು ಓವರ್ ಬೌಲಿಂಗ್ ನಡೆಸಿ, 1 ವಿಕೆಟ್ ಮಾತ್ರ ಕಬಳಿಸಿದ್ದಾರೆ. ಬ್ಯಾಟಿಂಗ್ ವಿಭಾಗದಲ್ಲಿ 1 ಬದಲಾವಣೆ: ಟೀಂ ಇಂಡಿಯಾದ ಬ್ಯಾಟಿಂಗ್ ವಿಭಾಗ ಸಂಪೂರ್ಣ ಹಳಿ ತಪ್ಪಿದೆ ಎಂಬುದರಲ್ಲಿ ಸುಳಿಲ್ಲ. ಟಿ20 ಸ್ಪೆಷಲಿಸ್ಟ್ಗಳೇ ತಂಡದಲ್ಲಿದ್ದರೂ ಅವರ ಕಳಪೆ ಫಾರ್ಮ್ ತಂಡಕ್ಕೆ ದೊಡ್ಡ ಹೊರೆಯಾಗಿದೆ. ಆರಂಭಿಕರಾದ ಅಭಿಷೇಕ್ ಶರ್ಮಾ ಹಾಗೂ ವೈಭವ್ ಸೂರ್ಯವಂಶಿ ತಂಡಕ್ಕೆ ಆರಂಭ ಒದಗಿಸಿಕೊಡುವಲ್ಲಿ ಎಡವುತ್ತಿದ್ದಾರೆ. ಇದು ತಂಡವನ್ನು ಒತ್ತಡಕ್ಕೆ ಸಿಲುಕಿಸುತ್ತಿದೆ. ಆದಾಗ್ಯೂ 4ನೇ ಟಿ20 ಪಂದ್ಯಕ್ಕೆ ಆರಂಭಿಕರು ಬದಲಾಗುವ ಸಾಧ್ಯತೆಗಳಿವೆ. ಆದರೆ ಮೂರನೇ ಕ್ರಮಾಂಕದಲ್ಲಿ ಬರುವ ಇಶಾನ್ ಕಿಶನ್ ಬದಲಿಗೆ ಸಂಜು ಸ್ಯಾಮ್ಸನ್ ಅವರನ್ನು ಕಣಕ್ಕಿಳಿಸಬಹುದಾಗಿದೆ. ಏಕೆಂದರೆ ಇಶಾನ್ ಕಿಶನ್ ಕಳೆದ ಐದು ಪಂದ್ಯಗಳಲ್ಲಿ ಹೇಳಿಕೊಳ್ಳುವಂತಹ ಪ್ರದರ್ಶನ ನೀಡಿಲ್ಲ.ಮಧ್ಯಮ ಕ್ರಮಾಂಕ ಹೇಗಿರಲಿದೆ?: 4ನೇ ಕ್ರಮಾಂಕದಲ್ಲಿ ಬರುವ ಶ್ರೇಯಸ್ ಅಯ್ಯರ್ ಕೂಡ ಕಳಪೆ ಫಾರ್ಮ್ನಿಂದ ಬಳಲುತ್ತಿದ್ದಾರೆ. ಆದರೆ ಅಯ್ಯರ್?ಗೆ ನಾಯಕನ ಪಟ್ಟ ಕಟ್ಟಿರುವ ಕಾರಣ ಅವರು ಈ ಪಂದ್ಯದಲ್ಲಿ ಆಡುವುದು ಖಚಿತ. ಕಳಪೆ ಸ್ಟ್ರೈಕ್ ರೇಟ್ನಿಂದ ತಂಡಕ್ಕೆ ಹೊರೆ ಎನಿಸಿರುವ ತಿಲಕ್ ವರ್ಮಾ ಅವರನ್ನು ತಂಡದಿಂದ ಕೈಬಿಡಬೇಕು ಎಂದು ಒತ್ತಾಯಿಸಲಾಗುತ್ತಿದೆ. ಆದರೆ ಉಪನಾಯಕತ್ವವಹಿಸಿಕೊಂಡಿರುವ ಕಾರಣ ತಿಲಕ್ಗೆ ಈ ಸರಣಿಯಲ್ಲಿ ಕೊನೆಯ ಅವಕಾಶ ಸಿಗುವುದು ಖಚಿತವಾಗಿದೆ. ಉಳಿದಿರುವ ಎರಡು ಪಂದ್ಯಗಳಲ್ಲಿ ತಿಲಕ್ ಮಿಂಚದಿದ್ದರೆ ಅವರಿಗೆ ಗೇಟ್ಪಾಸ್ ಖಚಿತ. ಬೌಲಿಂಗ್ ವಿಭಾಗದಲ್ಲಿ ಯಾರ್ಯಾರು?: ಇನ್ನು ಆಲ್ರೌಂಡರ್ಗಳ ಖೋಟಾದಲ್ಲಿ ಎಂದಿನAತೆ ಶಿವಂ ದುಬೆ ಹಾಗೂ ಅಕ್ಷರ್ ಪಟೇಲ್ ಕಾಣಿಸಿಕೊಳ್ಳಲಿದ್ದಾರೆ. ಹರ್ಷಿತ್ ರಾಣಾ ಕೂಡ ಬೌಲಿಂಗ್ ಜೊತೆಗೆ ಬ್ಯಾಟಿಂಗ್ನಲ್ಲೂ ಬಲ ತುಂಬಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಅರ್ಷದೀಪ್ ಸಿಂಗ್ ಹಾಗೂ ಪ್ರಿನ್ಸ್ ಯಾದವ್ ಕಾಣಿಸಿಕೊಂಡರೆ, ವರುಣ್ ಚಕ್ರವರ್ತಿ ಸ್ಪಿನ್ನರ್ ಆಗಿ ಕಾಣಿಸಿಕೊಳ್ಳಲಿದ್ದಾರೆ.
ಐಪಿಎಲ್ ಮೂಡ್ ನಿಂದ ಹೊರಬನ್ನಿ: ಜೋಫ್ರಾ ಆರ್ಚರ್ ಪಾಠ: ಐಪಿಎಲ್ ಸಮಯದಲ್ಲಿ ಭಾರತದಲ್ಲಿ ಸುಲಭದ ಪಿಚ್ ಗಳಲ್ಲಿ ಆಡಿದ ನಂತರ ಇಂಗ್ಲೆAಡ್ ಪರಿಸ್ಥಿತಿಗಳಲ್ಲಿ ಬೌಲಿಂಗ್ ಮಾಡುವುದು ಕಷ್ಟಕರವಾಗಿದ್ದರೂ ಸಹಜ ಸ್ಥಿತಿಗೆ ಮರಳಿರುವುದಾಗಿ ಇಂಗ್ಲೆAಡ್ ವೇಗದ ಬೌಲರ್ ಜೋಫ್ರಾ ಹೇಳಿದ್ದಾರೆ. ಭಾರತದ ವಿರುದ್ಧದ ಮೂರನೇ ಟಿ20 ಅಂತರರಾಷ್ಟ್ರೀಯ ಪಂದ್ಯದಲ್ಲಿ ಆರ್ಚರ್ 29 ರನ್ಗಳಿಗೆ ಮೂರು ವಿಕೆಟ್ಗಳನ್ನು ಪಡೆದರು. ಆದರೆ ಅವರ ಸಹ ವೇಗದ ಬೌಲರ್ ಜೋಶ್ ಟಾಂಗ್ 38 ರನ್ಗಳಿಗೆ ನಾಲ್ಕು ವಿಕೆಟ್ಗಳನ್ನು ಪಡೆದರು. 202 ರನ್ಗಳ ಗುರಿಯನ್ನು ಬೆನ್ನಟ್ಟಿದ ಅವರ ಅದ್ಭುತ ಪ್ರದರ್ಶನವು ಭಾರತವನ್ನು 76 ರನ್ಗಳಿಗೆ ಸರ್ವಪತನವಾಗಲು ಸಹಾಯ ಮಾಡಿತು.ಐಪಿಎಲ್ನಲ್ಲಿ ಹಲವಾರು ಭಾರತೀಯ ಬ್ಯಾಟ್ಸ್ಮನ್ಗಳನ್ನು ಎದುರಿಸಿದ ನಂತರ, ಆರ್ಚರ್ ಅವರ ಬೌಲಿಂಗ್ ಯೋಜನೆಗಳು ಎಷ್ಟು ಬದಲಾಗಿವೆ ಎಂದು ಕೇಳಲಾಯಿತು. ಇಲ್ಲಿ ಎಲ್ಲವೂ ಸಾಮಾನ್ಯ ಸ್ಥಿತಿಗೆ ಮರಳಿದೆ ಎಂದು ನಾನು ಭಾವಿಸುತ್ತೇನೆ ಎಂದು ಹೇಳಿದರು. ಐಪಿಎಲ್ನಲ್ಲಿ ಕೆಲವೊಮ್ಮೆ 200 ರನ್ಗಳು ಕೂಡ ಸುರಕ್ಷಿತವಲ್ಲ. ಆದರೆ ಇಲ್ಲಿ 200 ರನ್ಗಳ ಗುರಿಯನ್ನು ಸಾಧಿಸುವುದು ಸುಲಭವಲ್ಲ. ಎಲ್ಲರೂ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ಆರ್ಚರ್ ಹೇಳಿದರು. ನಮ್ಮ ಬೌಲರ್ಗಳಲ್ಲಿ ಪ್ರತಿಯೊಬ್ಬರೂ ಉತ್ತಮ ಪ್ರದರ್ಶನ ನೀಡಿದ್ದಾರೆ. ಭಾರತೀಯ ಬ್ಯಾಟ್ಸ್ಮನ್ಗಳಿಗೆ ಬ್ರಿಟನ್ನಲ್ಲಿನ ಪರಿಸ್ಥಿತಿಯೂ ಹೆಚ್ಚು ಸವಾಲಿನದ್ದಾಗಿದೆ ಎಂದರು. ಭಾರತವು ಐರ್ಲೆಂಡ್ ವಿರುದ್ಧ ಎರಡೂ ಪಂದ್ಯಗಳನ್ನು ಸೋತಿತು. ಇಂಗ್ಲೆಂಡ್ ವಿರುದ್ಧದ ಐದು ಪಂದ್ಯಗಳ ಸರಣಿಯಲ್ಲಿಯೂ ಹಿಂದುಳಿದಿದೆ. ಭಾರತೀಯ ಬ್ಯಾಟರ್ ಗಳು ಐಪಿಎಲ್ ಗುಂಗಿನಿAದ ಹೊರಬರಬೇಕಿದೆ ಎಂದು ಪಾಠ ಮಾಡಿದರು.
ಸರಣಿ ಸೋಲು ತಪ್ಪಿಸುವ ಒತ್ತಡದಲ್ಲಿ ಭಾರತ



