ದೊಡ್ಡಬಳ್ಳಾಪುರ: ವಿಧಾನ ಸೌದದಲ್ಲಿ ಪಾಕಿಸ್ತಾನದ ಪರ ಘೋಷಣೆ ಕೂಗಿದವರನ್ನು ದೇಶದ್ರೋಹದ ಕೇಸ್ ದಾಖಲು ಮಾಡಿ ಈ ಕೂಡಲೇ ಬಂಧಿಸುವಂತೆ ಒತ್ತಾಯಿಸಿ ತಾಲ್ಲೂಕು ಬಿಜೆಪಿ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಮುಖಂಡರು ರಾಜ್ಯ ಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಾಸಿರ್ ಹುಸೇನ್ ಜಯಗಳಿಸಿದ ಹಿನ್ನೆಲೆಯಲ್ಲಿ ಅವರ ಬೆಂಬಲಿಗರು ವಿಧಾನಸೌಧದ ಒಳಗಡೆ ಶತ್ರು ರಾಷ್ಟ್ರ ಪಾಕಿಸ್ತಾನ್ ಕೀ ಜಯ್ ಎಂದು ಘೋಷಣೆಗಳನ್ನು ಕೂಗಿ ದೇಶದ ಅಸ್ಮೀತೆ ಹಾಳು ಮಾಡಿದ್ದಾರೆ ಎಂದು ಆರೋಪಿಸಿದರು.
ದೇಶ ದ್ರೋಹಿ ಕೆಲಸ ಮಾಡಿದ ನಾಸಿರ್ ಬೆಂಬಲಿಗರನ್ನು ರಕ್ಷಿಸುವ ಬರದಲ್ಲಿ ಮಾಧ್ಯಮ ಮಿತ್ರರನ್ನು ಹೇ ನಡಿಯೋ ನಡಿಯೋ ಎಂದು ಉದ್ದಟತನ ಮೆರೆಯುವುದರ ಜೊತೆ ಮಾಧ್ಯಮದವರೊಂದಿಗೆ ಗೂಂಡಾ ರೀತಿ ವರ್ತಿಸಿ ದೇಶ ದ್ರೋಹಿ ಬೆಂಬಲಿಗರನ್ನು ಬೆಂಬಲಿಸಿರುವ ನಾಸಿರ್ ಹುಸೇನ್ ಅವರ ವಿರುದ್ದ ಹಾಗೂ ಶತ್ರು ರಾಷ್ಟ್ರ ಪಾಕಿಸ್ತಾನ್ ಕೀ ಜೈ ಎಂದ ದೇಶ ದ್ರೋಹಿಗಳನ್ನು ದೇಶ ದ್ರೋಹದ ಕೇಸ್ ದಾಖಲು ಮಾಡಿ ಈ ಕೂಡಲೇ ಬಂದಿಸುವಂತೆ ಒತ್ತಾಯಿಸಿದರು.
ನಗರದ ತಾಲ್ಲೂಕು ಕಛೇರಿ ವೃತ್ತದ ಬಳಿ ಪ್ರತಿಭಟಿನೆ ನಡೆಸಿದ ಪ್ರತಿಭಟನಾಕಾರರು ತಾಲ್ಲೂಕು ದಂಡಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು.ಈ ಸಂದರ್ಭದಲ್ಲಿ ತಾಲ್ಲೂಕು ಅಧ್ಯಕ್ಷರಾದ ನಾಗೇಶ್, ನಗರ ಅಧ್ಯಕ್ಷರಾದ ಮುದ್ದಪ್ಪ, ತಾ.ಪ್ರ.ಕಾರ್ಯದರ್ಶಿ ರಾಜಘಟ್ಟ ಕಾಂತರಾಜು, ನ.ಪ್ರ.ಕಾರ್ಯದರ್ಶಿ ಮುನಿರಾಜು, ಸಂಚಾಲಕರಾದ ವೆಂಕಟರಾಜು, ನಿಕಟ ಪೂರ್ವ ಜಿ.ಪ್ರ.ಕಾರ್ಯದರ್ಶಿ ಗೋವಿಂದರಾಜ್. ನಿಕಟ ಪೂರ್ವ ರಾಜ್ಯ ಕಾರ್ಯದರ್ಶಿ ಬಿ.ಸಿ ನಾರಾಯಣಸ್ವಾಮಿ ನಿಕಟ ಪೂರ್ವ ಮಂಡಲ ಕಾರ್ಯದರ್ಶಿ ಶ್ರೀ ಮತಿ ವತ್ಸಲ, ನಗರ ಸಭಾ ಸದಸ್ಯರುಗಳಾದ ಪದ್ಮನಾಭ್,
ಶ್ರೀಮತಿ ವತ್ಸಲ,ಶ್ರೀಮತಿ ನಾಗರತ್ನಮ್ಮ ಕೃಷ್ಣಮೂರ್ತಿ, ಶ್ರೀಮತಿ ಹಂಸಪ್ರೀಯ ದೇವರಾಜ್, ಮಾಜಿ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎನ್.ಕೆ ರಮೇಶ್ ಮುಖಂಡರುಗಳಾದ ಜೆ ಮಂಜುನಾಥ್ , ಶ್ರೀ ಮತಿ ಉಮಾಮಹೇಶ್ವರಿ, ಎಸ್ಎಸ್. ಟಿ ಮಂಜುನಾಥ್ ತಿರುಮಲ ಮಂಜುನಾಥ್, ವಕೀಲರಾದ ಆನಂದ್,ಅಜಯ್, ಮುನಿನಾರಾಯಣಸ್ವಾಮಿ, ನಾಗರಾಜ್ ಬಾಬು, ಮುನಿಶಂಕರ್, ನಟರಾಜ್, ವಾಣಿ, ಲಕ್ಷ್ಮಣ್, ಮಧು ಬೇಗಲಿ, ಶಂಬು, ನರೇಂದ್ರ, ವಾಸು, ಮತ್ತಿತರರು ಉಪಸ್ಥಿತರಿದ್ದರು.