ಬೆಂಗಳೂರು: ರಾಷ್ಟ್ರದಲ್ಲಿ ನಡೆದ ಪಂಚರಾಜ್ಯಗಳ ಚುನಾವಣೆ ಮತ ಎಣಿಕೆ ನಡೆದಿದ್ದು, ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೆರಿಯಲ್ಲಿ ಭಾರತೀಯ ಜನತಾಪಕ್ಷ ಹೆಚ್ಚಿನ ಸ್ಥಾನ ಗಳಿಸಿ ಮುನ್ನಡೆ ಸ್ಥಾನದಲ್ಲಿದೆ. ಕೇರಳದಲ್ಲಿ ಯುಡಿಎಫ್, ತಮಿಳುನಾಡಿನಲ್ಲಿ ಹೊಸದಾಗಿ ಪಕ್ಷ ಸ್ಥಾಪಿಸಿದ್ದ ದಳಪತಿ ವಿಜಯ ನೇತೃತ್ವ ಟಿವಿಕೆ ಪಕ್ಷ ಅತಿ ಹೆಚ್ಚು ಸ್ಥಾನಗಳನ್ನು ಗಳಿಸಿ ಮುನ್ನಡೆ ಸಾಧಿಸಿದೆ.ಪಶ್ಚಿಮ ಬಂಗಾಳದಲ್ಲಿ 293 ಸ್ಥಾನಗಳ ಪೈಕಿ ಬಿಜೆಪಿ 181, ತೃಣಮೂಲ ಕಾಂಗ್ರೆಸ್ 105, ಕಾಂಗ್ರೆಸ್ 5 ಇತರೆ 2 ಸ್ಥಾನಗಳಲ್ಲಿ ಮುಂದಿದ್ದಾರೆ. ತಮಿಳುನಾಡಿನ ಆಡಳಿತಾರೂಢ ಪಕ್ಷವಾಗಿದ್ದ ಡಿಎಂಕೆ ಪಕ್ಷದ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರಿಗೆ ಕೊಳತ್ತೂರು ಕ್ಷೇತ್ರದಲ್ಲಿ ಹಿನ್ನಡೆಯಾಗಿದೆ. ಟಿವಿಕೆ ಪಕ್ಷ 108, ಎಐಎಡಿಎಂಕೆ 73 ಕ್ಷೇತ್ರಗಳಲ್ಲಿ ಡಿಎಂಕೆ ಪಕ್ಷ 13 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದ್ದಾರೆ. ಅಸ್ಸಾಂನಲ್ಲಿ 126 ಕ್ಷೇತ್ರಗಳ ಪೈಕಿ 23 ಕ್ಷೇತ್ರಗಳಲ್ಲಿ ಕಾಂಗ್ರೆಸ್, 101 ಕ್ಷೇತ್ರದಲ್ಲಿ ಬಿಜೆಪಿ, 2 ಕ್ಷೇತ್ರದಲ್ಲಿ ಇತರರು ಮುನ್ನಡೆ ಸಾಧಿಸಿದ್ದಾರೆ. ಕೇರಳದ 140 ಕ್ಷೇತ್ರಗಳ ಪೈಕಿ ಯುಡಿಎಫ್ 96, ಎಲ್ಡಿಎಫ್ 42, ಎನ್ಡಿಎ 2 ಕ್ಷೇತ್ರಗಳಲ್ಲಿ ಪುದಚೇರಿಯಲ್ಲಿ 30 ಕ್ಷೇತ್ರಗಳ ಪೈಕಿ ಬಿಜೆಪಿ 20 ಕಾಂಗ್ರೆಸ್ 7 ಹಾಗೂ ಇತರರು 3 ಕ್ಷೇತ್ರಗಳಲ್ಲಿ ಮುನ್ನಡೆಯಲಿದ್ದಾರೆ. ಒಟ್ಟಾರೆ ಪಶ್ಚಿಮ ಬಂಗಾಳದಲ್ಲಿ ಮೂರು ಅವಧಿಗೆ 17 ವರ್ಷಗಳ ಕಾಲ ಆಡಳಿತ ನಡೆಸಿದ್ದ ತೃಣಮೂಲ ಕಾಂಗ್ರೆಸ್ನ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಹಿನ್ನಡೆಯಾಗಿದೆ.
ಪಶ್ಚಿಮ ಬಂಗಾಳ, ಅಸ್ಸಾಂ, ಪುದುಚೆರಿಯಲ್ಲಿ ಬಿಜೆಪಿ ಮುನ್ನಡೆ ಕೇರಳದಲ್ಲಿ ಯುಡಿಎಫ್, ತಮಿಳುನಾಡಿನಲ್ಲಿ ಟಿವಿಕೆ ಮುನ್ನಡೆ



