ಬೆಂಗಳೂರು : ರಾಜಸ್ಥಾನ್ ಮೂಲದ ಲಕ್ಕಿ ಶೈನ್(24) ಎಂಬ ಯುವಕ ಮಧ್ಯರಾತ್ರಿ 3:45 ರ ಸುಮಾರಿಗೆ ನಿಂತಿದ್ದ ಲಾರಿಗೆ ಹಿಂದಗಡೆಯಿಂದ ಮೃತ ಓಡಿಸುತ್ತಿದ್ದ ಬೊಲೆರೋ ಪಿಕಪ್ ಗಾಡಿ ಡಿಕ್ಕಿ ಹೊಡೆದುಕೊಂಡು ಚಾಲಕ ಮೃತಪಟ್ಟಿರುತ್ತಾನೆ. ಮೃತ ಲಕ್ಕಿ ಶೈನ್ ಹಾಗೂ ಇವನ ಅಣ್ಣ ಇಬ್ಬರು ಕೆಲಸದ ನಿಮಿತ್ತ ಹೊರಗಡೆ ಹೋಗಿ ಬರುವಾಗ ಹೆಬ್ಬಾಳ ಫ್ಲೈ ಓವರ್ ಬಳಿ ನಿಂತಿದ್ದ ಲಾರಿಗೆ ಡಿಕ್ಕಿ ಹೊಡೆದುಕೊಂಡು ತಮ್ಮ ಚಾಲಕ ಮೃತಪಟ್ಟರೆ ಅಣ್ಣ ತೀವ್ರತರವಾದ ಗಾಯ ಸಂಭವಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುತ್ತಾನೆ. ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.



