ಮಳವಳ್ಳಿ: ಪಟ್ಟಣದ ಅನಂತರಾಮಯ್ಯ ಸರ್ಕಲ್ ನಲ್ಲಿ ನೂತನ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುತ್ತಿರುವ ಹಿನ್ನೆಲೆಯಲ್ಲಿ ಡಿಕೆ ಶಿವಕುಮಾರ್ ಅಭಿಮಾನಿಗಳ ಬಳಗದ ವತಿಯಿಂದ ಇಂದು ಪಟಾಕಿ ಸಿಡಿಸಿ ಸಿಹಿ ಸಂಭ್ರಮಿಸಿದರು.
ತಾಲ್ಲೂಕು ಒಕ್ಕಲಿಗರ ಸಂಘದ ಅಧ್ಯಕ್ಷರಾದ ನಾಗೇಶ್ ಮಾತನಾಡಿ ಡಿಕೆ ಶಿವಕುಮಾರ್ ರವರು ಇಂದು ಪ್ರಮಾಣ ವಚನ ಸ್ವೀಕಾರ ಮಾಡುತ್ತಿದ್ದಾರೆ. ಅವರಿಗೆ ದೇವರು ಆಯಸ್ಸು ಆರೋಗ್ಯ ಕರುಣಿಸಲಿ ರಾಜ್ಯದಲ್ಲಿ ಇನ್ನೂ ಉತ್ತಮ ರೀತಿಯಲ್ಲಿ ಆಡಳಿತ ನಡೆಸಲು ದೇವರು ಶಕ್ತಿಯನ್ನು ನೀಡಲಿ ಎಂದರು. ಚೊಟ್ಟನಹಳ್ಳಿ ರಮೇಶ್ ನವರು ಮಾತನಾಡಿ ರಾಜ್ಯದಲ್ಲಿ ಉಪಮುಖ್ಯಮಂತ್ರಿಯಾಗಿ ಡಿಕೆ ಶಿವಕುಮಾರ್ ಅವರು ಒಳ್ಳೆ ಆಡಳಿತ ನಡೆಸಿದ್ದಾರೆ. ಇಂದು ಮುಖ್ಯಮಂತ್ರಿ ಆಗಿ ಪ್ರಮಾಣ ವಚನ ಸ್ವೀಕರಿಸುತ್ತಿದ್ದಾರೆ ಅವರು ಇನ್ನು ಹೆಚ್ಚಿನ ಅಧಿಕಾರವನ್ನು ನಡೆಸಲಿ ಎಂದು ಆಶಿಸಿದರು. ಈ ಸಂದರ್ಭದಲ್ಲಿ ಮಾಜಿ ಪುರಸಭೆ ಅಧ್ಯಕ್ಷರಾದ ಚಿಕ್ಕರಾಜು ದಯಶಂಕರ್ ಮಹೇಶ್ ಕುಮಾರ್ ಎಂಎನ್ ಜಯರಾಜು ಹಲವರು ಪಾಲ್ಗೊಂಡಿದ್ದರು.
ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ: ಮಳವಳ್ಳಿ ಪಟ್ಟಣದಲ್ಲಿ ಡಿಕೆಶಿ ಅಭಿಮಾನಿಗಳಿಂದ ಸಂಭ್ರಮ



