ದೆಹಲಿ: ಲೋಕಸಭೆ ವಿಶೇಷ ಅಧಿವೇಶನದಲ್ಲಿ ಮಂಡನೆಯಾಗಿ ಚರ್ಚೆ ನಡೆಯುತ್ತಿರುವ ಮೂರು ವಿಧೇಯಕಗಳ ಅಂಗೀಕಾರ ಇದೀಗ ಸಾರ್ವಜನಿಕ ವಲಯದಲ್ಲಿ ಕುತೂಹಲ ಮೂಡಿಸಿದೆ. ಮಹಿಳಾ ಮೀಸಲಾತಿ ಸೇರಿದಂತೆ ಕ್ಷೇತ್ರ ಮರುವಿಂಗಡಣೆ ಹಾಗೂ ಕೇಂದ್ರಾಡಳಿತ ಪ್ರದೇಶ ತಿದ್ದುಪಡಿ ವಿಧೇಯಕ ಇಂದು ಸಂಜೆ 4 ಗಂಟೆಗೆ ಅಂಗೀಕಾರಕ್ಕೆ ಮತದಾನ ನಡೆಯಲಿದೆ. ವಿಧೇಯಕಗಳ ಅಂಗೀಕಾರಕ್ಕಾಗಿ ಅಗತ್ಯವಾಗಿ ಬೇಕಾಗಿರುವ ಬಹುಮತ ದೊರೆಯುತ್ತೋ ಇಲ್ಲವೋ ಎಂಬ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ. ವಿಧೇಯಕಗಳ ಅಂಗೀಕಾರಕ್ಕಾಗಿ 360 ಮತಗಳ ಅಗತ್ಯ ಬಹುಮತ ದೊರೆಯುತ್ತದೊ ಇಲ್ಲವೋ ಎಂಬ ಎನ್ಡಿಎ ಪಕ್ಷದಲ್ಲಿ ಜಿಜ್ಞಾಸೆ ತೋರುತ್ತಿದೆ. ಪ್ರಧಾನಿ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಅವರು ವಿಧೇಯಕ ಅಂಗೀಕಾರವಾಗುವ ಸಂಪೂರ್ಣ ವಿಶ್ವಾಸದಲ್ಲಿದ್ದಾರೆ. ಆದರೆ ಎನ್ಡಿಎ ಬಳಿ ಅಗತ್ಯವಾಗಿ ಬೇಕಾಗಿರುವ ಮತಗಳ ಸಂಖ್ಯೆಗಳಿಲ್ಲ. ಯಾವುದಾದರೂ ಎರಡು ವಿರೋಧ ಪಕ್ಷಗಳು ಎನ್ಡಿಎ ಜತೆಗೆ ಕೈಜೋಡಿಸಿದಾಗ ಮಾತ್ರ ಅಗತ್ಯ ಬಹುಮತ ದೊರೆಯಲಿದೆ. ಸಂಜೆ 4 ಗಂಟೆಗೆ ಲೋಕಸಭೆಯಲ್ಲಿ ವಿಧೇಯಕಗಳ ಅಂಗೀಕಾರಕ್ಕೆ ನಡೆಯುವ ಮತದಾನ ತೀವ್ರ ಕುತೂಹಲಕ್ಕೆ ಎಡೆಮಾಡಿಕೊಟ್ಟಿದೆ.



