ಬೆಂಗಳೂರು: ಶ್ರೀ ಶಿವಲೀಲಾ ಸಂಗೀತ ಮತ್ತು ಅಕಾಡೆಮಿ ವತಿಯಿಂದ ಬೆಂಗಳೂರಿನ ಜ್ಞಾನಭಾರತಿ ಆವರಣದ ಕಲಾಗ್ರಾಮದಲ್ಲಿ ವಿದುಷಿ. ಶ್ರೀಮತಿ. ನೇತ್ರಾವತಿ ಮಂಜುನಾಥ (ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತರು) ಇವರ “ದಾಸ ನೃತ್ಯ ನಮನ” ಭರತನಾಟ್ಯ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಗೌರವ ಉಪಸ್ಥಿತಿಯಲ್ಲಿ: ಡಿ. ವಿಜಯ್ ಕುಮಾರ್, ಮಾಜಿ ಸೈನಿಕರು, ವಿಜಯ ಫೌಂಡೇಶನ್ ಹಾಗೂ ಮುಖ್ಯ ಅತಿಥಿಗಳಾಗಿ: ಡಾಕ್ಟರ್. ಜಿ.ವೈ. ಪದ್ಮ ನಾಗರಾಜು, ವ್ಯವಸ್ಥಾಪಕ ಸಂಪಾದಕರು, “ಇಂದು ಸಂಜೆ” ದೈನಂದಿನ ಪತ್ರಿಕೆ, ಮತ್ತು ವಿದುಷಿ. ಶ್ರೀಮತಿ. ಲತಾ ಲಕ್ಷ್ಮೀಶ್, ಜೊತೆಗೆ ವೇದಿಕೆಯಲ್ಲಿ ನಾಡಿನ ಹೆಸರಾಂತ ಗಾಯಕರಾದ ಟಿ. ರಾಜಾರಾಮ್, ದೂರದರ್ಶನ ಕಲಾವಿದರು ಹಾಗೂ ಶ್ರೀಯುತ.ಅಶ್ವಥ್ ನಾರಾಯಣ್ ಮತ್ತು ನಾರಾಯಣಪ್ಪ, ನಿವೃತ್ತ ಮುಖ್ಯೋಪಾಧ್ಯಾಯರು, ಏಕತಾರಿ ರಾಮಯ್ಯನವರು, ಸತೀಶ್ , ವಿದ್ವಾನ್ ಗುರುರಾಜ್ ವಸಿಷ್ಠ, ಮತ್ತು ಮಂಜುನಾಥ್ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.



