ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭಯೋತ್ಪಾದಕ ಎಂದು ಟೀಕಿಸಿದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿರುದ್ಧ ರಾಜ್ಯ ಬಿಜೆಪಿ ಮುಖಂಡರು ನಗರದಲ್ಲಿಂದು ಪ್ರತಿಭಟನೆ ನಡೆಸಿದ್ದಾರೆ.ವಿಧಾನಸೌಧ ಹಾಗೂ ವಿಕಾಸಸೌಧದ ನಡುವಿನ ಮಹಾತ್ಮಗಾಂಧಿ ಪ್ರತಿಮೆ ಬಳಿ ಭಿತ್ತಿಪತ್ರ ಹಿಡಿದು ಖರ್ಗೆ ಹಾಗೂ ಕಾಂಗ್ರೆಸ್ ವಿರುದ್ಧ ಘೋಷಣೆ ಕೂಗಲಾಗಿದೆ. ಪ್ರತಿಭಟನೆಯ ಮಲ್ಲಿಕಾರ್ಜುನ ಖರ್ಗೆ ಅವರ ಹೇಳಿಕೆ ಖಂಡಿಸಿ, ಕ್ಷಮೆಯಾಚನೆ ಮಾಡುವಂತೆ ಒತ್ತಾಯಿಸಿದ್ದಾರೆ.
ಖರ್ಗೆಯವರು ಇದೀಗ ಉನ್ನತಿ ಹುದ್ದೆ ಯಲ್ಲಿದ್ದಾರೆ. ತಮ್ಮ ಮಗನಿಗೂ ಉನ್ನತ ಹುದ್ದೆ ಕೊಡಿಸಿ ತಮ್ಮ ಹುದ್ದೆಯನ್ನು ಭದ್ರಪಡಿಸಿಕೊಳ್ಳಲು ಆಗಿಂದಾಗಿ ಪ್ರಧಾನಿ ಹಾಗೂ ಬಿಜೆಪಿಯನ್ನು ಟೀಕಿಸುತ್ತಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯಿಸಿ, ಜಗತ್ತಿನ 20ಕ್ಕೂ ಹೆಚ್ಚು ರಾಷ್ಟ್ರಗಳು ಮೋದಿ ಅವರಿಗೆ ಹೈ ಕಮೀಷನ್ ಸ್ಥಾನ ನೀಡಿದ್ದಾರೆ. ಮೋದಿ ಅವರನ್ನ ಭಯೋತ್ಪಾದಕ ಅಂದಿರೋದನ್ನ ಬಿಜೆಪಿ ಮಾತ್ರವಲ್ಲ, ಇಡೀ ದೇಶ ಖಂಡಿಸಲಿದೆ. ಪ್ರಧಾನ ಮಂತ್ರಿಗಳ ಜನಪ್ರಿಯತೆ ಸಹಿಸಲಾಗ್ತಿಲ್ಲ. 12 ವರ್ಷಗಳ ಕಾಲ ಮೋದಿ ಅವರ ಜನಪ್ರಿಯತೆ ಸಹಿಸಲಾಗ್ತಿಲ್ಲ. ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಹೇಳಿಕೆ ಖಂಡಿಸ್ತೇವೆ. ಖರ್ಗೆಯವರು ಮೋದಿ ಅವರಷ್ಟೇ ಅಲ್ಲ, ದೇಶದ ಜನರ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರು: ಪ್ರಪಂಚವೇ ಮೆಚ್ಚಿ ಹೌದೌದು ಅನ್ನುವಂತ ವ್ಯಕ್ತಿ ನರೇಂದ್ರ ಮೋದಿ. ಅವರನ್ನ ಭಯೋತ್ಪಾದಕ ಅಂದ ವಿಚಾರವನ್ನ ಖಂಡಿಸುತ್ತೇನೆ ಎಂದು ಸಂಸದ ಗೋವಿಂದ ಕಾರಜೋಳ ಹೇಳಿದ್ದಾರೆ.
ಪ್ರತಿಭಟನೆ ಮಾತನಾಡಿದ ಅವರು, ಮಲ್ಲಿಕಾರ್ಜುನ ಖರ್ಗೆ ಅವರು ಅನುಭವ ಮತ್ತು ಹಿರಿತನ ಮೀರಿ ತಪ್ಪು ಮಾತಾಡ್ತಿದ್ದಾರೆ. ನಮಾಜ್ ನಿಲ್ಲಿಸಿ ಹಾವು ಕೊಲ್ಲಿ ಅಂತ ಹೇಳಿದರು. ಮಲ್ಲಿಕಾರ್ಜುನ ಖರ್ಗೆ ಏನು ಮಾಡಲು ಹೊರಟಿದ್ದಾರೆ. ಕೋಮು ಸೌಹಾರ್ದ ಕದಡುವ ಕೆಲಸ ಮಾಡಿದರೆ ದೇಶದ ಜನ ಸಹಿಸಲ್ಲ. ನಿಮ್ಮ ಮಗ ಪ್ರಿಯಾಂಕ್ ಖರ್ಗೆ ಅನನುಭವಿ ಮೋದಿ ಬಗ್ಗೆ ಮಾತಾಡುತ್ತಾರೆ. ನೀವು ಈಗ ಚಾಳಿ ಶುರು ಮಾಡಿದ್ದಾರೆ. 140 ಕೋಟಿ ಜನ ನಿಮ್ಮನ್ನ ಪ್ರಶ್ನೆ ಮಾಡ್ತಿದ್ದಾರೆ. ಸ್ವಜನ ಪಕ್ಷ ಪಾತ ಮಾಡಬೇಡಿ. ಇದರಿಂದ ಕಾಂಗ್ರೆಸ್ ನಶಿಸಿ ಹೋಗುತ್ತದೆ ಎಂದು ಖರ್ಗೆ ವಿರುದ್ಧ ವಾಗ್ದಾಳಿ ನಡೆಸಿದರು.
ಖರ್ಗೆ ಕ್ಷಮೆಗೆ ಆಗ್ರಹ ಪ್ರಧಾನಿ ವಿರುದ್ಧ ಟೀಕೆಗೆ ವಿರೋಧಿಸಿ ಬಿಜೆಪಿಯಿಂದ ಪ್ರತಿಭಟನೆ



